Health Tips: ಹೀರೋಯಿನ್ ಥರ ಫಿಸಿಕ್ ಇರಬೇಕಾ? ಈ ಜ್ಯೂಸ್ ಗಳನ್ನು ಕುಡಿಯಿರಿ ಸಾಕು! ಯಾವುದೇ ವ್ಯಾಯಾಮ ಬೇಡ!

0 25

Health Tips: ಈಗಿನ ಲೈಫ್ ಸ್ಟೈಲ್ ನಲ್ಲಿ ನಾವು ನಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಅನಾರೋಗ್ಯಕರ ತಿಂಡಿಗಳನ್ನು ತಿನ್ನುವುದರಿಂದ ನಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ, ದೇಹದ ತೂಕ ಹೆಚ್ಚಾಗುತ್ತದೆ, ಇಂಥ ಸಮಸ್ಯೆಗಳು ಬರುತ್ತಲೇ ಇರುತ್ತವೆ. ಹುಡುಗಿಯರಿಗೆ ತಮ್ಮ ಫಿಸಿಕ್ ಬಗ್ಗೆ ಬಹಳ ಆಸಕ್ತಿ ಇರುತ್ತದೆ. ಸಿನಿಮಾ ನಟಿಯರ ಹಾಗೆ ತೆಳ್ಳಗೆ ಬೆಳ್ಳಗೆ ಇರಬೇಕು ಎಂದು ಬಯಸುತ್ತಾರೆ.

ಅದಕ್ಕೆಲ್ಲ ಆಹಾರ ಎಷ್ಟು ಮುಖ್ಯವೋ ವ್ಯಾಯಾಮ ಕೂಡ ಅಷ್ಟೇ ಮುಖ್ಯ. ಆದರೆ ಕೆಲವೊಮ್ಮೆ ಕೆಲಸದ ಒತ್ತಡ, ವಿಪರೀತ ಕೆಲಸ ಈ ಎಲ್ಲಾ ಕಾರಣಗಳಿಂದ ವ್ಯಾಯಾಮ ಮಾಡುವುದಕ್ಕೆ ಸಮಯ ಸಿಗದೇ ಹೋಗಬಹುದು. ಆ ರೀತಿ ಇದ್ದಾಗ ನೀವು ಆಹಾರದಲ್ಲೇ ದೇಹದ ತೂಕ ಕಡಿಮೆ ಆಗುವ ಹಾಗೆ ಮಾಡಿಕೊಳ್ಳಬಹುದು. ಅದು ಬಹಳ ಸುಲಭ, ಇಂದು ನಾವು ತಿಳಿಸುವ ಕೆಲವು ಜ್ಯೂಸ್ ಗಳನ್ನು ಕುಡಿಯುತ್ತಾ ಬಂದರೆ ಸಾಕು, ನಿಮ್ಮ ದೇಹದ ತೂಕ ಕಡಿಮೆ ಆಗುತ್ತದೆ..

ಸೌತೆಕಾಯಿ ಜ್ಯೂಸ್ :- ದೇಹದ ತೂಕದ ಇಳಿಕೆಗೆ ಸಹಾಯ ಮಾಡುವುದು ಸೌತೇಕಾಯಿ. ಇದರಲ್ಲಿರುವ ನೀರಿನ ಅಂಶದಲ್ಲಿ ಇರುವ ಕ್ಯಾಲೋರಿ ಬಹಳ ಕಡಿಮೆ ಇರುತ್ತದೆ. ಇದರಿಂದ ವೇಟ್ ಲಾಸ್ ಗೆ ತುಂಬಾ ಸಹಾಯ ಆಗುತ್ತದೆ. ಸೌತೆಕಾಯಿ ಜ್ಯುಸ್ ಕುಡಿದರೆ, ಬಹಳ ಸಮಯ ಹಸಿವು ಆಗುವುದಿಲ್ಲ. ಫೈಬರ್ ಅಂಶ ಸೌತೆಕಾಯಿಯಲ್ಲಿ ಹೇರಳವಾಗಿ ಇರುತ್ತದೆ. ಹಾಗಾಗಿ ತೂಕ ಇಳಿಸಲು ಸುಲಭ.

ನೆಲ್ಲಿಕಾಯಿ ಜ್ಯೂಸ್ :- ಬೆಳಗ್ಗೆ ಎದ್ದ ಬಳಿಕ ಖಾಲಿ ಹೊಟ್ಟೆಗೆ ನೆಲ್ಲಿಕಾಯಿ ಜ್ಯೂಸ್ ಕುಡಿದರೆ, ದೇಹದಲ್ಲಿರುವ ಕೊಬ್ಬಿನ ಅಂಶ ಬರ್ನ್ ಆಗುವುದಕ್ಕೆ ಸಹಾಯ ಮಾಡುತ್ತದೆ. ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಊಟ ಚೆನ್ನಾಗಿ ಡೈಜೆಸ್ಟ್ ಆಗುತ್ತದೆ. ಹಾಗೆಯೇ ಚಯಾಪಚಯ ಕ್ರಿಯೆಗಳು ಕೂಡ ಚೆನ್ನಾಗಿ ನಡೆಯುತ್ತದೆ. ಹಾಗಾಗಿ ಇದು ದೇಹಕ್ಕೆ ತೂಕ ಇಳಿಸಲು ಒಳ್ಳೆಯದು.

ಕ್ಯಾರೆಟ್ ಜ್ಯೂಸ್ :- ವೇಟ್ ಲಾಸ್ ಗೆ ಕ್ಯಾರೆಟ್ ಜ್ಯೂಸ್ ಕೂಡ ಅತ್ಯುತ್ತಮವಾದ ಆಯ್ಕೆ. ಬೆಳಗ್ಗೆ ತಿಂಡಿ ವೇಳೆಗೆ ಕ್ಯಾರೆಟ್ ಜ್ಯೂಸ್ ಕುಡಿದರೆ, ಮಧ್ಯಾಹ್ನದವರೆಗೂ ಹಸಿವು ಆಗುವುದಿಲ್ಲ. ಡಿಟಾಕ್ಸ್ ಗೆ ಕ್ಯಾರೆಟ್ ಜ್ಯೂಸ್ ಒಳ್ಳೆಯದು.

ಪಾಲಕ್ ಜ್ಯೂಸ್ :- ದೇಹದ ಆರೋಗ್ಯಕ್ಕೆ ಬಹಳ ಮುಖ್ಯವಾಗಿ ಸಹಾಯ ಮಾಡುವುದು ಪಾಲಕ್ ಜ್ಯೂಸ್. ಪಾಲಕ್ ನಲ್ಲಿ ಜಾಸ್ತಿ ಐರನ್ ಕಂಟೆಂಟ್ ಇರುತ್ತದೆ. ಅವುಗಳಿಂದ ದೇಹದಲ್ಲಿ ರಕ್ತದ ಉತ್ಪಾದನೆ ಹೆಚ್ಚಾಗುತ್ತದೆ. ವೇಟ್ ಲಾಸ್ ಗಾಗಿ ಪಾಲಕ್ ಜ್ಯೂಸ್ ಕುಡಿಯಬಹುದು. ಇದರಿಂದ ಇಮ್ಯುನಿಟಿ ಹೆಚ್ಚಾಗುತ್ತದೆ.

ಕ್ಯಾಬೇಜ್ ಜ್ಯೂಸ್ :- ಹೊಟ್ಟೆಗೆ ಏನೇ ಸಮಸ್ಯೆ ಆದರೂ, ಕ್ಯಾಬೇಜ್ ಜ್ಯುಸ್ ಕುಡಿದರೆ ಸರಿ ಹೋಗುತ್ತದೆ. ದೇಹದ ತೂಕ ಇಳಿಸುವುದಕ್ಕೆ ಕ್ಯಾಬೇಜ್ ಜ್ಯೂಸ್ ಸಹಾಯ ಮಾಡುತ್ತದೆ. ಈ ಜ್ಯುಸ್ ಗೆ ನಿಂಬೆ ರಸ ಸೇರಿಸಿದರೆ, ರುಚಿ ಹೆಚ್ಚಾಗುತ್ತದೆ.

Leave A Reply

Your email address will not be published.