Stress Control: ಒತ್ತಡದಿಂದ ಹೊರಬರಲು ಸಾಧ್ಯವಾಗದೇ ಪರದಾಡುತ್ತಿದ್ದೀರಾ? ಈ ವಿಧಾನ ಫಾಲೋ ಮಾಡಿ

0 26

Stress Control: ಈಗಿನ ಕಾಲದಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗು ಎಲ್ಲರನ್ನು ಕಾಡುವ ಸಮಸ್ಯೆ ಒತ್ತಡ. ಇದರಿಂದ ಬಹಳಷ್ಟು ಜನರಿಗೆ ಮನಸ್ಸಿನ ಮೇಲೆ ಹಿಡಿತ ಇರುವುದಿಲ್ಲ. ಅನಾವಶ್ಯಕ ಕೆಲಸಗಳನ್ನು ಮಾಡಿ, ತಮಗೆ ತಾವೇ ತೊಂದರೆ ಮಾಡಿಕೊಳ್ಳುತ್ತಾರೆ. ಯಾವುದರ ಮೇಲು ಸರಿಯಾಗಿ ಗಮನ ಕೊಡಲು ಆಗುವುದಿಲ್ಲ. ಒಂದು ವೇಳೆ ನಿಮಗೂ ಈ ಥರದ ಸಮಸ್ಯೆ ಕಾಡುತ್ತಿದ್ದರೆ, ಇಂದು ನಿಮಗೆ ಕೆಲವು ವಿಚಾರಗಳನ್ನು ಹೇಳಿಕೊಡುತ್ತೇವೆ. ಅದನ್ನು ಫಾಲೋ ಮಾಡುವ ಮೂಲಕ ಸ್ಟ್ರೆಸ್ ಕಡಿಮೆ ಮಾಡಿಕೊಳ್ಳಬಹುದು..

ಒತ್ತಡವನ್ನು ಒಪ್ಪಿಕೊಳ್ಳಿ :- ಮೊದಲಿಗೆ ನಿಮಗೆ ಒತ್ತಡವಿದೆ ಎನ್ನುವುದನ್ನು ನೀವು ಒಪ್ಪಿಕೊಲ್ಲಬೇಕು. ಇದರಿಂದಲೇ ನಿಮಗೆ ಹೆಚ್ಚು ಸಮಸ್ಯೆ ಆಗುವುದು, ಒಪ್ಪಿಕೊಂಡಿಲ್ಲ ಎಂದರೆ ಅದರಿಂದ ಹೊರಬರಲು ಕೂಡ ಆಗುವುದಿಲ್ಲ.. ಹಾಗಾಗಿ ಒತ್ತಡ ಅಂದ್ರೆ ವೀಕ್ನೆಸ್ ಎಂದು ಅಂದುಕೊಳ್ಳದೇ, ಅದನ್ನು ಒಪ್ಪಿಕೊಳ್ಳಿ..

ಚುಯಿಂಗ್ ಗಮ್ :- ಆದಷ್ಟು ಬೇಗ ಒತ್ತಡದಿಂದ ಹೊರಬರಬೇಕು ಎಂದರೆ, ಚುಯಿಂಗ್ ಆಗಿಯಬಹುದು. ಹೌದು, ಇದರ ಸುವಾಸನೆ ಮತ್ತು ಸೇವನೆ ಇಂದ ನೀವು ಒತ್ತಡದಿಂದ ಹೊರಬರಬಹುದು. ನಿಮಗೆ ಆರಾಮವನ್ನು ನೀಡುತ್ತದೆ ಚುಯಿಂಗ್ ಗಮ್. ಹಾಗಾಗಿ ಇದನ್ನು ಸೇವಿಸಿ.

ಧ್ಯಾನ ಮಾಡಿ :- ಒತ್ತಡದಿಂದ ಹೊರಬರಲು ಅತ್ಯುತ್ತಮವಾದ ಮಾರ್ಗವಿದು. ಧ್ಯಾನ ಮಾಡಲು ಬರೋದಿಲ್ಲ ಎಂದರೆ, ಒಂದು ಕಡೆ ಕಣ್ಣುಮುಚ್ಚಿ ಕುಳಿತುಕೊಳ್ಳಿ. ನಿಮ್ಮ ಪಾದದಿಂದ ತಲೆಯವರೆಗೂ ದೇಹದ ಎಲ್ಲಾ ಅಂಗಾಂಗಗಳ ಬಗ್ಗೆ ಗಮನ ಹರಿಸಿ, ಧ್ಯಾನ ಶುರುವಾಗುತ್ತದೆ.

ಬರೆಯುವುದು :- ಮನಸ್ಸಲ್ಲಿ ಮೂಡಿಬರುವ ಪ್ರಶ್ನೆಗಳನ್ನು ಬರೆಯುವುದಕ್ಕೆ ಶುರು ಮಾಡಿ, ಆ ಮೂಲಕ ಉತ್ತರ ಹುಡುಕುವುದಕ್ಕೆ ಶುರು ಮಾಡಿ, ಒತ್ತಡದಿಂದ ಹೊರಬರಲು ಇದು ಸಹಾಯ ಮಾಡುವಂಥ ಮಾರ್ಗ ಆಗಿದೆ. ಬರವಣಿಗೆ ನಿಮ್ಮಲ್ಲಿ ಹೆಚ್ಚು ಬದಲಾವಣೆಗಳನ್ನು ತರುತ್ತದೆ.

ರೆಸ್ಟ್ :- ಒಂದು ವೇಳೆ ನಿಮಗೆ ನಿದ್ದೆ ಚೆನ್ನಾಗಿ ಆಗಿಲ್ಲ ಅಂದರು ಒತ್ತಡ ಶುರುವಾಗುತ್ತದೆ. ಹಾಗಾಗಿ ಮನಸ್ಸಿಗೆ ಕಷ್ಟ ಆಗುತ್ತಿದ್ದಾಗ ಕೇವಲ 10 ನಿಮಿಷ ಸರಿಯಾಗಿ ನಿದ್ದೆ ಮಾಡಿದರೆ, ವಿಶ್ರಾಂತಿ ಪಡೆದರೆ ಅದರಿಂದ ನಿಮಗೆ ಬಹಳಷ್ಟು ರಿಲೀಫ್ ಸಿಗುತ್ತದೆ. ಬಳಿಕ ನೀವು ಕೆಲಸ ಶುರು ಮಾಡಬಹುದು. ಹಾಗಾಗಿ ರೆಸ್ಟ್ ಕೂಡ ಬಹಳ ಮುಖ್ಯ.

ಪ್ರಾಣಾಯಾಮ :- ಪ್ರಾಣಾಯಾಮ ಮತ್ತೊಂದು ಅತ್ಯುತ್ತಮ ಮಾರ್ಗ ಆಗಿರುತ್ತದೆ.. ದಿನಕ್ಕೆ 5 ರಿಂದ 10 ಸಾರಿ ಪ್ರಾಣಾಯಾಮ ಮಾಡಿದರೆ, ನೀವು ಅಂದುಕೊಂಡಿರದ ರೀತಿಯಲ್ಲಿ ನಿಮಗೆ ಒತ್ತಡ ಕಡಿಮೆ ಆಗುತ್ತದೆ.

Leave A Reply

Your email address will not be published.