Relationship: ಹೆಂಡತಿ ಇಲ್ಲದೇ ಗಂಡ ಯಾವುದೇ ಕಾರಣಕ್ಕೂ ಈ ಕೆಲಸಗಳನ್ನು ಮಾಡಬಾರದು!

0 27

ಗಂಡ ಹೆಂಡತಿಯ ಸಂಬಂಧ ಬಹಳ ಪವಿತ್ರವಾದದ್ದು, ಇಬ್ಬರು ಸದಾ ಜೊತೆಯಾಗಿರಬೇಕು. ಒಬ್ಬರಿಗೊಬ್ಬರು ಕಷ್ಟ ಸುಖಗಳಲ್ಲಿ ಸಾಥ್ ಕೊಡಬೇಕು. ಗಂಡ ಹೆಂಡತಿ ಬಹಳಷ್ಟು ಕೆಲಸಗಳನ್ನು ಜೊತೆಯಾಗಿ ಮಾಡಬೇಕಾಗುತ್ತದೆ. ಆಗ ಮಾತ್ರ ಅವರ ಜೀವನ ಚೆನ್ನಾಗಿರುತ್ತದೆ. ಕೆಲವು ಕೆಲಸಗಳನ್ನು ಹೆಂಡತಿ ಇಲ್ಲದೇ ಗಂಡ ಮಾಡುವ ಹಾಗಿಲ್ಲ. ಹಾಗಿದ್ರೆ ಆ ಕೆಲಸಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..

ಪೂಜೆ.. ಇದು ಪ್ರತಿ ಮನೆಯಲ್ಲಿ ನಡೆಯುವ ಮುಖ್ಯವಾಗಿ ನಡೆಯುವ ದೇವರ ಕಾರ್ಯ. ಪೂಜೆ ಮಾಡುವುದರಿಂದ ಒಂದು ಮನೆಯಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ. ಮನೆಯಲ್ಲಿ ಪೂಜೆ ಮಾಡುವಾಗ ಅದರಲ್ಲೂ ಹಬ್ಬಗಳಲ್ಲಿ ಪೂಜೆ ಮಾಡುವಾಗ ಗಂಡ ಹೆಂಡತಿ ಇಬ್ಬರು ಯಾವಾಗಲೂ ಜೊತೆಯಾಗಿರಬೇಕು. ಇದು ಧರ್ಮದಲ್ಲಿ ಇರುವ ನಿಯಮ ಆಗಿದೆ. ಗಂಡ ಹೆಂಡತಿಯರು ಈ ನಿಯಮವನ್ನು ಪಾಲಿಸಬೇಕು .

ಪೂಜೆಗಳನ್ನು ಮಾಡುವಾಗ ಹೆಂಡತಿ ಗಂಡನ ಕೈ ಮುಟ್ಟುವುದರಿಂದ ಬದುಕಲ್ಲಿ ಒಳ್ಳೆಯ ಫಲ ಪಡೆಯುತ್ತೀರಿ.
ಪೂಜೆಗಳಷ್ಟೇ ಮತ್ತೊಂದು ಮುಖ್ಯವಾದ ಕೆಲಸ ಜೊತೆಯಾಗಿ ಊಟ ಮಾಡುವುದು. ದಿನ ಬೆಳಗ್ಗೆ ಮತ್ತು ಮಧ್ಯಾಹ್ನ ಇಬ್ಬರು ಹೊರಗಡೆ ಇದ್ದು ಜೊತೆಯಾಗಿ ಊಟ ಮಾಡುವುದಕ್ಕೆ ಸಾಧ್ಯ ಆಗದೇ ಇರಬಹುದು. ಇನ್ನು ಊಟಕ್ಕಾಗಿ ಹೊರಗಡೆ ಹೋದರೆ, ಹೆಚ್ಚು ಸಮಯ ಹೋಟೆಲ್ ನಲ್ಲಿ ಇರುವ ಹಾಗಿಲ್ಲ. ಹಾಗಾಗಿ ಮನೆಯಲ್ಲೇ ಇಬ್ಬರು ಜೊತೆಯಾಗಿ ಕೂತು ಊಟ ಮಾಡುವುದು ಒಳ್ಳೆಯ ಅಭ್ಯಾಸ.

ಮನೆಯಲ್ಲಿ ಇದ್ದಾಗ ಹೆಂಡತಿ ಇದ್ದರು ಕೂಡ ಗಂಡಂದಿರು ಅವರನ್ನ ಬಿಟ್ಟು ಊಟ ಮಾಡಬಾರದು. ಈ ರೀತಿ ಮಾಡಿದರೆ ತೊಂದರೆ ಆಗಬಹುದು.
ಹಾಗೆಯೇ ಮನೆಯಲ್ಲಿ ಹೋಮಗಳನ್ನು ಮಾಡುವಾಗ ಗಂಡ ಹೆಂಡತಿ ಜೊತೆಯಾಗಿ ಕೂರಬೇಕು, ಆಗ ಮಾತ್ರ ಹೋಮ ಹವನಗಳ ಪೂರ್ಣಫಲ ಸಿಗುತ್ತದೆ ಎಂದು ಹೇಳುತ್ತಾರೆ. ಗಂಡಂದಿರು ಹೆಂಡತಿ ಇಲ್ಲದೇ ಹೋಮ ಮಾಡಬಾರದು.
ಇನ್ನೊಂದು ಬಹಳ ಮುಖ್ಯವಾದ ವಿಚಾರ ದಾನ ಮಾಡುವುದು. ಹೆಂಡತಿ ಇಲ್ಲದೆ ಹೊರತು ಗಂಡಂದಿರು ದಾನ ಮಾಡುವ ಹಾಗಿಲ್ಲ.

Leave A Reply

Your email address will not be published.