Vinay Rajkumar: ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ಅವರ ಫಸ್ಟ್ ಲವ್ ಯಾರು ಗೊತ್ತಾ? ಇನ್ನು ಮದುವೆಯಾಗದೆ ಇರೋಕೆ ಕಾರಣ ಆ ಹುಡುಗಿನಾ?

Written by Pooja Siddaraj

Published on:

Vinay Rajkumar. ದೊಡ್ಮನೆಯ ಮೂರನೇ ತಲೆಮಾರಿನ ಕುಡಿ ವಿನಯ್ ರಾಜ್ ಕುಮಾರ್ ಅವರು. ಅಣ್ಣಾವ್ರ ಮಗ ರಾಘಣ್ಣ ಹಾಗೂ ಮಂಗಳ ದಂಪತಿಯ ಎರಡನೇ ಮಗ. ವಿನಯ್ ರಾಜ್ ಕುಮಾರ್ ಅವರು ಚಂದನವನದ ಉದಯೋನ್ಮುಖ ನಟ ಆಗಿದ್ದಾರೆ. ಇಂದು ವಿನಯ್ ರಾಜ್ ಕುಮಾರ್ ಅವರು ನಟಿಸಿರುವ ಒಂದು ಸರಳ ಪ್ರೇಮಕಥೆ ಸಿನಿಮಾ ತೆರೆಕಾಣುತ್ತಿದೆ. ಸಿಂಪಲ್ ಸುನಿ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದು, ರಾಧಾಕೃಷ್ಣ ಧಾರವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ನಾಯಕಿಯಾಗಿದ್ದಾರೆ.

ಟ್ರೈಲರ್ ಮತ್ತು ಹಾಡುಗಳ ಮೂಲಕ ಸದ್ದು ಮಾಡಿರುವ ಒಂದು ಸರಳ ಪ್ರೇಮಕಥೆ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ಹೇಗಿರುತ್ತದೆ ಎಂದು ಇಂದು ಗೊತ್ತಾಗಲಿದೆ. ಸಿನಿಮಾ ಬಗ್ಗೆ ಒಳ್ಳೆಯ ನಿರೀಕ್ಷೆ ಅಂತೂ ಇದೆ. ಇನ್ನು ವಿನಯ್ ರಾಜ್ ಕುಮಾರ್ ಅವರ ಬಗ್ಗೆ ಹೇಳುವುದಾದರೆ, ದೊಡ್ಮನೆಯ ಸದಸ್ಯ ಹಾಗೆ ವಿನಯ್ ಅವರು ಕೂಡ ಅಷ್ಟೇ ಸಿಂಪಲ್ ಆದ ಹುಡುಗ. ವಿಭಿನ್ನವಾದ ಕಥೆಗಳನ್ನು ಆರಿಸಿಕೊಂಡು ಸಿನಿಮಾ ಮಾಡುತ್ತಿದ್ದಾರೆ.

ತಮ್ಮದೇ ಹಾದಿಯಲ್ಲಿ ಸಾಗುತ್ತಿದ್ದಾರೆ ವಿನಯ್. ವಿನಯ್ ಅವರ ಪರ್ಸನಲ್ ಲೈಫ್ ಬಗ್ಗೆ ಹೇಳುವುದಾದರೆ, ಇವರ ತಮ್ಮ ಯುವ ರಾಜ್ ಕುಮಾರ್ ಅವರ ಮದುವೆಯಾಗಿದೆ ಆದರೆ ವಿನಯ್ ಅವರಿಗೆ ಇನ್ನು ಮದುವೆಯಾಗಿಲ್ಲ. ಅದು ಯಾಕೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡಬಹುದು. ವಿನಯ್ ಅವರಿಗೆ ಒಂದು ಲವ್ ಫೇಲ್ಯೂರ್ ಆಗಿದೆ ಎನ್ನುವುದು ಹಲವರಿಗೆ ಗೊತ್ತಿರದ ವಿಚಾರ. ಈ ವಿಚಾರವನ್ನು ಖುದ್ದು ವಿನಯ್ ಹೇಳಿದ್ದಾರೆ..

ಸಿನಿಮಾ ಪ್ರೋಮೋಷನ್ ಗಾಗಿ ಅನುಶ್ರೀ ಅವರ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಎಲ್ಲರಿಗು ಕೂಡ ತಮ್ಮ ಜೀವನದ ಸರಳ ಪ್ರೇಮಕಥೆ ಬಗ್ಗೆ ಹೇಳಬೇಕು ಎಂದು ಕೇಳಿದಾಗ ವಿನಯ್ ಅವರು, ಒಂದು ಹುಡುಗಿಯನ್ನು ಇಷ್ಟಪಟ್ಟಿದ್ದೆ ಅವಳಿಗೆ ಅದನ್ನು ಹೇಳಿದೆ, ಆದರೆ ಅವಳು ವಿನಯ್ ನಾನು ನಿನಗಿಂತ ತುಂಬಾ ದೊಡ್ಡವಳು ಅಂತ ಹೇಳಿದಳು ಎಂದು ಹೇಳಿದ್ದಾರೆ..

ಈ ಮಾತುಗಳನ್ನು ಕೇಳಿ ವಿನಯ್ ಅವರು ಇನ್ನು ಸಿಂಗಲ್ ಆಗಿರೋದಕ್ಕೆ ಕಾರಣ ಇದೇ ಇರಬಹುದಾ ಎನ್ನುವ ಹೊಸ ಚರ್ಚೆ ಶುರುವಾಗಿದೆ. ಆದರೆ ವಿನಯ್ ಅವರು ಮಾತ್ರ ಮದುವೆಯಾಗುವ ಬಗ್ಗೆ ಇನ್ನು ಯಾವುದೇ ಹಿಂಟ್ ಕೊಟ್ಟಿಲ್ಲ.

Leave a Comment