Valentine’s Day: ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ವ್ಯಾಲೆಂಟೈನ್ಸ್ ಡೇ ಗಿಫ್ಟ್ ಆಗಿ ಕೊಡಬೇಡಿ! ಲವ್ ಫೆಲ್ಯೂರ್ ಅಗಬಹುದು!

0 33

Valentine’s Day: ಫೆಬ್ರವರಿ ತಿಂಗಳು ಅಂದ್ರೆ ಪ್ರೇಮಿಗಳಿಗೆ ತುಂಬಾ ಸ್ಪೆಷಲ್. ಈ ದಿನ ಪ್ರೀತಿ ಹೇಳಿಕೊಳ್ಳುವುದು, ತಮ್ಮನ್ನು ಪ್ರೀತಿಸುವ ವ್ಯಕ್ತಿಗಳಿಗೆ ಗಿಫ್ಟ್ ಕೊಡುವುದು, ಇದೆಲ್ಲವನ್ನು ಮಾಡುತ್ತಾರೆ. ಬಹಳ ಸಂತೋಷವಾಗಿರುತ್ತಾರೆ. ಆದರೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಕೊಡುವುದಕ್ಕಿಂತ ಮೊದಲು ಯೋಚನೆ ಮಾಡಬೇಕು. ಕೆಲವು ವಸ್ತುಗಳನ್ನು ಗಿಫ್ಟ್ ಆಗಿ ಕೊಡುವುದು ಒಳ್ಳೆಯದಲ್ಲ ಅದರಿಂದ ಸಬಂಧವೇ ಹಾಳಾಗಿ ಹೋಗಬಹುದು. ಹಾಗಿದ್ದರೆ ಆ ವಸ್ತುಗಳು ಯಾವುವು ಎಂದು ತಿಳಿದುಕೊಳ್ಳೋಣ…

ಬ್ಲ್ಯಾಕ್ ಬಟ್ಟೆ: ನಮ್ಮ ಧರ್ಮದಲ್ಲಿ ಕಪ್ಪು ಒಳ್ಳೆಯ ಬಣ್ಣ ಅಲ್ಲ, ಈ ಬಣ್ಣದ ವಸ್ತುಗಳನ್ನು ಗಿಫ್ಟ್ ಆಗಿ ಕೊಡುವುದನ್ನು ಶುಭ ಎನ್ನುವುದಿಲ್ಲ. ಇದರಿಂದ ತೊಂದರಗಳೇ ಜಾಸ್ತಿಯಾಗಬಹುದು. ಹಾಗಾಗಿ ಕಪ್ಪು ಬಣ್ಣದ ಬಟ್ಟೆಯನ್ನು ಗಿಫ್ಟ್ ಆಗಿ ಕೊಡಬೇಡಿ.

ವಾಚ್: ಎಲ್ಲರೂ ಇಷ್ಟಪಡುವ ವಸ್ತುಗಳಲ್ಲಿ ವಾಚ್ ಕೂಡ ಒಂದು . ಆದರೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಆಗಿ ವಾಚ್ ಕೊಡಬೇಡಿ. ಯಾಕೆಂದರೆ ಯಾರಿಗಾದರೂ ವಾಚ್ ಕೊಟ್ಟರೆ ಅವರ ವೃತ್ತಿಯಲ್ಲಿ ಏಳಿಗೆ ಕಾಣದೇ, ತೊಂದರೆಯಾಗಬಹುದು. ಇದರಿಂದ ತೊಂದರೆಯಾಗಬಹುದು. ಇದರಿಂದ ನಿಮ್ಮ ಸಂಬಂದಕ್ಕೆ ತೊಂದಗೆ ಉಂಟಾಗಬಹುದು.

ಹ್ಯಾಂಡ್ ಕರ್ಚಿಫ್: ಕೆಲವು ಪ್ರೇಮಿಗಳು ಕ್ರಿಯೇಟಿವ್ ಆಗಿ ಏನನ್ನಾದರೂ ಮಾಡಬೇಕು ಎಂದು, ಹ್ಯಾಂಡ್ ಕರ್ಚಿಫ್ ನಲ್ಲಿ ವಿಶೇಷವಾಗಿ ಏನನ್ನಾದರು ಮಾಡಿ ಗಿಫ್ಟ್ ನೀಡುತ್ತಾರೆ. ಆದರೆ ಹ್ಯಾಂಡ್ ಕರ್ಚಿಫ್ ಗಳನ್ನು ಗಿಫ್ಟ್ ಆಗಿ ಕೊಡಬೇಡಿ, ಇದರಿಂದ ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಬಹುದು.

ಪರ್ಫ್ಯುಮ್: ಪರ್ಫ್ಯುಮ್ ಗಳನ್ನು ಸಹ ವ್ಯಾಲೆಂಟೈನ್ಸ್ ಡೇ ಆಗಿ ಕೊಡಬಾರದು ಎಂದು ಹೇಳುತ್ತಾರೆ. ಪರ್ಫ್ಯುಮ್ ಗಳನ್ನು ಗಿಫ್ಟ್ ಕೊಟ್ಟರೆ ನಿಮ್ಮಿಬ್ಬರು ನಡುವೆ ಗ್ಯಾಪ್ ಜಾಸ್ತಿಯಾಗಬಹುದು.

Leave A Reply

Your email address will not be published.