Sai Pallavi: ಬಾಲಿವುಡ್ ನಟ ಆಮಿರ್ ಖಾನ್ ಮಗನ ಜೊತೆ ಹೊರದೇಶದಲ್ಲಿ ಕಾಣಿಸಿಕೊಂಡ ನಟಿ ಸಾಯಿಪಲ್ಲವಿ!

0 40

Sai Pallavi: ಸಾಯಿಪಲ್ಲವಿ ಇವರ ಹೆಸರು ಕೇಳಿದರೆ ಎಲ್ಲರಿಗೂ ಸಂತೋಷವಾಗುತ್ತದೆ ಎಂದರೆ ತಪ್ಪಲ್ಲ. ಚಿತ್ರರಂಗ ಕಂಡಿರುವ ಅದ್ಭುತವಾದ ನಟಿಯರಲ್ಲಿ ಇವರು ಕೂಡ ಒಬ್ಬರು. ಸಾಯಿಪಲ್ಲವಿ ಅವರು ನಟಿಸುವ ಎಲ್ಲಾ ಸಿನಿಮಾಗಳು, ಅವರ ಪಾತ್ರಗಳು ಎಲ್ಲರಿಗೂ ಬಹಳ ಇಷ್ಟವಾಗುತ್ತದೆ. ಇದೀಗ ಇವರು ನಟ ಆಮೀರ್ ಖಾನ್ ಅವರ ಮಗ ಜುನೈದ್ ಖಾನ್ ಅವರ ಜೊತೆಗೆ ಕಾಣಿಸಿಕೊಂಡಿದ್ದಾರೆ.

ಸಾಯಿಪಲ್ಲವಿ ಅವರು ತಮಿಳುನಾಡಿನಲ್ಲಿ ಹುಟ್ಟಿ ಬೆಳೆದ ಹುಡುಗಿ. ಆದರೆ ಇವರು ನಟನೆಯ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು ಮಲಯಾಳಂ ಚಿತ್ರರಂಗದ ಮೂಲಕ, ಪ್ರೇಮಂ ಇವರ ಮೊದಲ ಸಿನಿಮಾ, ಮೊದಲ ಸಿನಿಮಾದಲ್ಲೇ ತಮ್ಮ ಅಭಿನಯ ಮತ್ತು ನಟನೆಯ ಮೂಲಕ ಭಾರಿ ದೊಡ್ಡ ಕ್ರೇಜ್ ಸೃಷ್ಟಿಸಿಕೊಂಡಿದ್ದಾರೆ ಸಾಯಿಪಲ್ಲವಿ. ನ್ಯಾಚುರಲ್ ಬ್ಯೂಟಿ ಎಂದೇ ಅಭಿಮಾನಿಗಳು ಇವರನ್ನು ಕರೆಯುತ್ತಾರೆ.

ಸಾಯಿಪಲ್ಲವಿ ಅವರು ಬೇರೆ ನಟಿಯರ ಹಾಗೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದಿಲ್ಲ, ನಮ್ಮ ಮನೆಯ ಹುಡುಗಿ ಎಂದು ಅನ್ನಿಸುವ ಹಾಗೆ ಇರುತ್ತಾರೆ. ಅವರು ಆಯ್ಕೆ ಮಾಡಿಕೊಳ್ಳುವ ಪಾತ್ರಗಳು ಕೂಡ ಅದೇ ರೀತಿ, ಮನಸ್ಸಿಗೆ ತುಂಬಾ ಹತ್ತಿರ ಎನ್ನಿಸುವಂಥ ಪಾತ್ರಗಳೇ ಆಗಿರುತ್ತದೆ. ಸಾಯಿಪಲ್ಲವಿ ಅವರ ಡ್ಯಾನ್ಸ್ ಬಗ್ಗೆ ಅಂತೂ ಹೇಳುವ ಹಾಗೆ ಇಲ್ಲ, ಎಲ್ಲಾ ಅಭಿಮಾನಿಗಳಿಗೆ ಇವರ ಡ್ಯಾನ್ಸ್ ಮೇಲೆ ವಿಶೇಷವಾದ ಕ್ರೇಜ್ ಇದೆ. ಅವರ ಡ್ಯಾನ್ಸ್ ಕೂಡ ಅಷ್ಟೇ ಅದ್ಭುತ ಎನ್ನಬಹುದು.

ಭಾರತದೆಲ್ಲೆಡೆ ದೊಡ್ಡ ಅಭಿಮಾನಿ ಹೊಂದಿರುವ ನಟಿ ಸಾಯಿಪಲ್ಲವಿ ಇದೀಗ ಆಮೀರ್ ಖಾನ್ ಅವರ ಮಗ ಜುನೈದ್ ಖಾನ್ ಅವರೊಡನೆ ವಿದೇಶದಲ್ಲಿ ಓಡಾಡುತ್ತಿರುವ ಫೋಟೋ ವೈರಲ್ ಆಗಿದೆ. ಇಬ್ಬರು ಜಪಾನ್ ನ ಸ್ನೋ ಫೆಸ್ಟಿವಲ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಸಿಂಗಲ್ ಆಗಿರುವ ಸಾಯಿಪಲ್ಲವಿ ಇವರೊಡನೆ ಯಾಕೆ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಪ್ರಶ್ನೆ ಶುರುವಾಗಬಹುದು. ಅದಕ್ಕೆ ಕಾರಣ ಬೇರೇನೂ ಅಲ್ಲ ಜುನೈದ್ ಖಾನ್ ಅವರ ಎರಡನೇ ಸಿನಿಮಾಗೆ ನಾಯಕಿ ಸಾಯಿಪಲ್ಲವಿ ಅವರು.

ಹೌದು, ಜುನೈದ್ ಖಾನ್ ಅಭಿನಯದ ಮೊದಲ ಸಿನಿಮಾ ಇನ್ನು ತೆರೆಕಂಡಿಲ್ಲ, ಈಗಾಗಲೇ ಎರಡನೇ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಜಪಾನ್ ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ಸಿನಿಮಾ ಬಗ್ಗೆ ಇನ್ನು ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇದು ಬಾಲಿವುಡ್ ನಲ್ಲಿ ಸಾಯಿಪಲ್ಲವಿ ಅವರ ಡೆಬ್ಯು ಸಿನಿಮಾ ಆಗಲಿದೆ.

Leave A Reply

Your email address will not be published.