Rishab Shetty: ನಟ ರಿಷಬ್ ಶೆಟ್ಟಿ ಮನೆಯಲ್ಲಿ ದೀಪಾವಳಿ ಸಂಭ್ರಮ!

Written by Pooja Siddaraj

Published on:

Rishab Shetty: ನಟ ರಿಷಬ್ ಶೆಟ್ಟಿ ಅವರನ್ನು ಇಂದು ಡಿವೈನ್ ಸ್ಟಾರ್ ಎಂದು ಕರೆಯುತ್ತಾರೆ. ಕಾಂತಾರ ಸಿನಿಮಾ ಇವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಾಡಿದೆ ಎಂದರೆ ತಪ್ಪಲ್ಲ. ರಿಷಬ್ ಶೆಟ್ಟಿ ಅವರ ಮುಂದಿನ ಸಿನಿಮಾ ಬಗ್ಗೆ ಹಾಗೂ ಅವರ ಮುಂದಿನ ಯೋಜನೆಗಳ ಬಗ್ಗೆ ತಿಳಿಯಲು ಇಡೀ ಭಾರತ ಚಿತ್ರರಂಗವೇ ಕಾಯುತ್ತಿದೆ ಎಂದರೆ ತಪ್ಪಲ್ಲ. ಇಂಥ ಮಹಾನ್ ನಟ ರಿಷಬ್ ಶೆಟ್ಟಿ ಅವರ ಮನೆಯಲ್ಲಿ ಈ ವರ್ಷ ದೀಪಾವಳಿ ಹಬ್ಬದ ಆಚರಣೆ ಹೇಗಿತ್ತು ಗೊತ್ತಾ?

ನಟ ರಿಶಬ್ ಶೆಟ್ಟಿ ಅವರು ನಡೆದುಬಂದ ಹಾದಿ ಸುಲಭವಾದ ಹಾದಿ ಆಗಿರಲಿಲ್ಲ. ಬಹಳಷ್ಟು ಕಷ್ಟಪಟ್ಟು ಇಂದು ಈ ಮಟ್ಟಕ್ಕೆ ಏರಿದ್ದಾರೆ ರಿಷಬ್. ನಟನಾಗಿ, ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಅವರು ಆರಂಭದಲ್ಲಿ ನಟಿಸಿದ ಸಿನಿಮಾಗಳು ಅಷ್ಟೇನು ಸದ್ದು ಮಾಡದೆ ಹೋದರು, ಇವರು ನಿರ್ದೇಶನ ಮಾಡಿದ ಕಿರಿಕ್ ಪಾರ್ಟಿ ಸಿನಿಮಾ ದೊಡ್ಡದಾಗಿ ಸದ್ದು ಮಾಡಿತು.

ಕಿರಿಕ್ ಪಾರ್ಟಿ ಬಳಿಕ ರಿಷಬ್ ಶೆಟ್ಟಿ ಅವರಿಗೆ ಒಳ್ಳೆಯ ಹೆಸರು ಮತ್ತು ಗುರುತು ಸಿಕ್ಕಿತು. ಬಳಿಕ ರಿಷಬ್ ಅವರು ನಟಿಸಿದ ಬೇರೆ ಸಿನಿಮಾಗಳು ಕೂಡ ಜನಮನ್ನಣೆ ಗಳಿಸಿದವು. ಅದೆಲ್ಲಕ್ಕಿಂತ ಹೆಚ್ಚಿನ ಯಶಸ್ಸು ತಂದುಕೊಟ್ಟಿದ್ದು ಕಾಂತಾರ ಸಿನಿಮಾ ಎಂದರೆ ತಪ್ಪಲ್ಲ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ ಎಲ್ಲಾ ಭಾಷೆಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿ, ರಿಷಬ್ ಶೆಟ್ಟಿ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು, ಕೀರ್ತಿ, ಎಲ್ಲವನ್ನು ತಂದುಕೊಟ್ಟಿತು..

ಇದೀಗ ರಿಷಬ್ ಅವರ ಮುಂದಿನ ಸಿನಿಮಾಗಾಗಿ ಸಿನಿಪ್ರಿಯರು ಕಾಯುತ್ತಿದ್ದಾರೆ. ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾದ ಪ್ರೀಕ್ವೆಲ್ ರಿಷಬ್ ಅವರ ಮುಂದಿನ ಸಿನಿಮಾ ಆಗಿದ್ದು, ಇದಕ್ಕಾಗಿ ಎಲ್ಲಾ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. ಈ ತಿಂಗಳು ಕಾಂತಾರ ಪ್ರೀಕ್ವೆಲ್ ಮುಹೂರ್ತ ನಡೆಯುತ್ತದೆ ಎಂದು ಮಾಹಿತಿ ಸಿಕ್ಕಿದೆ. ಇದೆಲ್ಲಾ ರಿಷಬ್ ಅವರ ಕೆರಿಯರ್ ಗೆ ಸಂಬಂಧಪಟ್ಟ ವಿಷಯ. ಅವರ ಪರ್ಸನಲ್ ವಿಷಯದ ಬಗ್ಗೆ ಹೇಳುವುದಾದರೆ, ರಿಷಬ್ ಅವರು ಪ್ರಗತಿ ಶೆಟ್ಟಿ ಅವರೊಡನೆ ಮದುವೆಯಾಗಿದ್ದಾರೆ.

ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ, ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಈ ಜೋಡಿ, ಆಗಾಗ ತಮ್ಮ ಫ್ಯಾಮಿಲಿ ಫೋಟೋಸ್ ಶೇರ್ ಮಾಡುತ್ತಾರೆ. ಇವರ ಮನೆಯಲ್ಲಿ ಈಗ ದೀಪಾವಳಿ ಹಬ್ಬದ ಆಚರಣೆ ನಡೆದಿದ್ದು, ಹೆಂಡತಿ ಮಕ್ಕಳ ಜೊತೆಗೆ ಅದ್ಧೂರಿಯಾಗಿ ಹಬ್ಬದ ಆಚರಣೆ ಮಾಡಿದ್ದಾರೆ. ಇದೀಗ ಇವರ ಫ್ಯಾಮಿಲಿ ಜೊತೆಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Leave a Comment