Vastu Tips: ಮನಿ ಪ್ಲಾಂಟ್ ಇಂದ ಈ ಕೆಲವು ಕೆಲಸಗಳನ್ನು ಮಾಡಿ, ನಿಮ್ಮ ಮನೆಯಲ್ಲಿ ಹಣದ ಹೊಳೆಯೇ ಹರಿಯುತ್ತದೆ

0 17

Vastu Tips: ವಾಸ್ತು ಶಾಸ್ತ್ರದಲ್ಲಿ ನಮ್ಮ ಜೀವನ ಸುಗಮವಾಗಿ ಸಾಗಲು ಸಾಕಷ್ಟು ಸಹಾಯ ಮಾಡುತ್ತದೆ. ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್ ಗೆ ಮಹತ್ವವಿದೆ. ಮನಿ ಪ್ಲಾಂಟ್ ಅನ್ನು ಮನೆಯಲ್ಲಿಟ್ಟರೆ, ನಿಮ್ಮ ಮನೆಯಲ್ಲಿ ಪಾಸಿಟಿವಿಟಿ ಇರುತ್ತದೆ, ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಮನಿ ಪ್ಲಾಂಟ್ ಅನ್ನು ಮನೆಯಲ್ಲಿ ಇಡುವುದರ ಜೊತೆಗೆ, ಅವುಗಳ ಕುರಿತಂತೆ ಕೆಲವು ವಿಷಯಗಳನ್ನು ಅನುಸರಿಸಬೇಕು. ಆಗ ನಿಮ್ಮ ಮನೆಯಲ್ಲಿ ಹಣಕ್ಕೆ ಯಾವುದೇ ಕೊರತೆ ಆಗುವುದಿಲ್ಲ, ಹೆಚ್ಚಿನ ಹಣದ ಹೊಳೆಯೇ ಹರಿಯುತ್ತದೆ..

*ಮೊದಲನೆಯದಾಗಿ ಮನಿ ಪ್ಲಾಂಟ್ ಜೊತೆಗೆ ಹಾಲನ್ನು ಬೆರೆಸಿ ಮಾಡುವ ಕೆಲಸದಿಂದ ನಿಮ್ಮ ಅದೃಷ್ಟ ಬದಲಾಗುತ್ತದೆ. ಮನಿ ಪ್ಲಾಂಟ್ ಗೆ ಸ್ವಲ್ಪ ಹಾಲನ್ನು ಅರ್ಪಿಸಿ, ಲಕ್ಷ್ಮೀದೇವಿ ಬಿಳಿ ಬಣ್ಣದ ವಸ್ತುವನ್ನು ಇಷ್ಟಪಡುತ್ತಾರೆ. ಹಾಗಾಗಿ ಮನಿ ಪ್ಲಾಂಟ್ ಗೆ ಹಾಲನ್ನು ಅರ್ಪಿಸಿದರೆ, ಅದರ ಬೆಳವಣಿಗೆ ಕೂಡ ಚೆನ್ನಾಗಿ ಆಗುತ್ತದೆ. ಮನಿ ಪ್ಲಾಂಟ್ ಬೆಳೆದ ಹಾಗೆ ನಿಮ್ಮ ಮನೆಯಲ್ಲಿ ಹಣದ ಹರಿವು ಕೂಡ ಜಾಸ್ತಿಯಾಗುತ್ತದೆ.

*ಮನಿ ಪ್ಲಾಂಟ್ ಗೆ ನೀರು ಹಾಕುವಾಗ ಕೆಲ ಹನಿಗಳ ಹಾಲನ್ನು ಕೂಡ ಸೇರಿಸಿ, ಈ ರೀತಿ ಮಾಡುವುದರಿಂದ ಮನಿ ಪ್ಲಾಂಟ್ ಬೆಳವಣಿಗೆ ಚೆನ್ನಾಗಿರುವುದರ ಜೊತೆಗೆ ತಾಯಿ ಲಕ್ಷ್ಮಿಯ ಆಶೀರ್ವಾದ ನಿಮ್ಮ ಜೊತೆಗೆ ಇರುತ್ತದೆ. ಇದರಿಂದ ನಿಮ್ಮ ಮನೆಯ ಆರ್ಥಿಕ ಸ್ಥಿತಿ ಕೂಡ ಸುಧಾರಿಸುತ್ತದೆ.

*ಮನಿ ಪ್ಲಾಂಟ್ ಅನ್ನು ನೀವು ಯಾವ ದಿಕ್ಕಿನಲ್ಲಿ ನಡೆತ್ತೀರಾ ಎನ್ನುವುದು ಕೂಡ ಮುಖ್ಯವಾಗುತ್ತದೆ. ಒಂದು ಮನೆಯಲ್ಲಿ ಮನಿ ಪ್ಲಾಂಟ್ ಇಡಲು ಆಗ್ನೇಯ ದಿಕ್ಕು ಸರಿಯಾದ ದಿಕ್ಕು ಆಗಿರುತ್ತದೆ. ಸರಿಯಾದ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಡಲಿಲ್ಲ ಎಂದರೆ, ವಿರುದ್ಧವಾದ ಫಲಿತಾಂಶ ಕೂಡ ಸಿಗಬಹುದು. ಆದರೆ ಹಾಲನ್ನು ಬಳಸಿದರೆ, ನೀವು ಶ್ರೀಮಂತರೇ ಆಗಬಹುದು.

Leave A Reply

Your email address will not be published.