Vastu Tips: ಮನೆಯ ಉತ್ತರ ದಿಕ್ಕಿನಲ್ಲಿ ಈ 5 ವಸ್ತುಗಳನ್ನು ಇಟ್ಟರೆ, ಕುಬೇರನ ಕೃಪೆ ಸದಾ ನಿಮ್ಮ ಮೇಲಿರುತ್ತದೆ

0 20

Vastu Tips: ವಾಸ್ತು ಶಾಸ್ತ್ರದಲ್ಲಿ ನಮ್ಮ ಮನೆಗಳಲ್ಲಿ ಯಾವ ದಿಕ್ಕಿನಲ್ಲಿ ಯಾವ ವಸ್ತು ಇಟ್ಟರೆ ಅದರಿಂದ ಮನೆಗೆ ಒಳ್ಳೆಯದಾಗುತ್ತದೆ ಎಂದು ತಿಳಿಸಲಾಗಿದೆ. ಸಂಪತ್ತಿನ ಅಧಿದೇವ ಎಂದು ಕುಬೇರನನ್ನು ಕರೆಯಲಾಗುತ್ತದೆ. ಕುಬೇರನದ್ದು ಉತ್ತರ ದಿಕ್ಕು, ಹಾಗಾಗಿ ಮನೆಯ ಉತ್ತರ ದಿಕ್ಕಿನಲ್ಲಿ ಕುಬೇರನಿಗೆ ಇಷ್ಟ ಆಗುವ ಅಥವಾ ಸೇರುವ ಈ 5 ವಸ್ತುಗಳನ್ನು ಇರಿಸಿದರೆ, ನಿಮ್ಮ ಮನೆಯಲ್ಲಿ ಕುಬೇರನ ಕೃಪೆ ಸದಾ ಇರುತ್ತದೆ. ಕುಬೇರನ ಆಶೀರ್ವಾದ ಪಡೆಯಲು ಈ ವಸ್ತುಗಳನ್ನು ಉತ್ತರ ದಿಕ್ಕಿನಲ್ಲಿ ತಪ್ಪದೇ ಇಡಿ..

*ನಿಮ್ಮ ಮನೆಯ ಮೇಲೆ ಕುಬೇರನ ಆಶೀರ್ವಾದ ಯಾವಾಗಲೂ ಇರಬೇಕು ಎಂದರೆ ಮನೆಯ ಉತ್ತರ ದಿಕ್ಕಿಗೆ ನೆಲ್ಲಿಕಾಯಿ ಮರ ನೆಡಿ ಅಥವಾ ತುಳಸಿ ಗಿಡವನ್ನು ನೆಡಿ. ನೀರಿನ ವ್ಯವಸ್ಥೆಯನ್ನು ಕೂಡ ಉತ್ತರ ದಿಕ್ಕಿಗೆ ಮಾಡುವುದು ಒಳ್ಳೆಯದು. ಈ ರೀತಿ ಮಾಡಿದರೆ ಕುಬೇರನ ಕೃಪೆ ನಿಮ್ಮ ಮೇಲಿರುತ್ತದೆ.

*ನಿಮ್ಮ ಮನೆಯಲ್ಲಿ ದೇವರ ವಿಗ್ರಹವನ್ನು ಅಥವಾ ಫೋಟೋವನ್ನು ಎಲ್ಲಿ ಯಾವ ದಿಕ್ಕಿನಲ್ಲಿ ಇಡುತ್ತೀರಿ ಎನ್ನುವುದು ಕೂಡ ಬಹಳ ಮುಖ್ಯವಾಗುತ್ತದೆ. ಸರಿಯಾಗಿ ದಿಕ್ಕಿನಲ್ಲಿ ಇಡುವುದರಿಂದ ನಿಮಗೆ ದೇವರ ಆಶೀರ್ವಾದ ಸಿಗುತ್ತದೆ. ಗಣೇಶ, ಹಾಗೂ ಲಕ್ಷ್ಮೀದೇವಿಯ ಫೋಟೋ ಅಥವಾ ವಿಗ್ರವನ್ನು ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಕು.

*ಕುಬೇರ ದೇವ ಉತ್ತರ ದಿಕ್ಕಿಗೆ ಅಧಿಪತಿ ಆಗಿರುವ ಕಾರಣ ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಹಣ ಇರುವ ಬೀರು ಅಥವಾ ಕಪಾಟನ್ನು ಇಡಬಹುದು.

*ಕುಬೇರ ದೇವನ ಆಶೀರ್ವಾದ ಪಡೆಯಲು ಮನೆಯಲ್ಲಿ ಲೋಹದ ಆಮೆಯನ್ನು ಇಡಬಹುದು. ಇದರಿಂದ ಕುಬೇರನ ಆಶೀರ್ವಾದ ಸಿಗುತ್ತದೆ, ಹಾಗೆಯೇ ನಿಮ್ಮ ಮನೆಯಲ್ಲ ಸಂಪತ್ತಿಗೆ ಯಾವುದೇ ಕೊರತೆ ಆಗುವುದಿಲ್ಲ.

*ನಿಮ್ಮ ಮನೆಯಲ್ಲಿ ಸಂಪತ್ತು ಕಡಿಮೆ ಆಗಲೇಬಾರದು ಎಂದರೆ ಮನೆಯಲ್ಲಿ ಕುಬೇರ ಯಂತ್ರವನ್ನು ಇಡಬೇಕು. ಇದನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಿ. ಆಗ ನಿಮಗೆ ಹಣಕಾಸಿನ ವಿಚಾರದಲ್ಲಿ ಯಾವುದೇ ಕೊರತೆ ಆಗುವುದಿಲ್ಲ.

Leave A Reply

Your email address will not be published.