Astrology: ಅಪ್ಪಿ ತಪ್ಪಿಯೂ ಈ ದಿನ ಅರಳಿಮರದ ಪೂಜೆ ಮಾಡಬೇಡಿ! ಬಡವರಾಗುತ್ತೀರಿ!

0 39

Astrology: ನಮ್ಮ ದೇಶದಲ್ಲಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ಅನೇಕ ಆಚರಣೆಗಳು, ನಂಬಿಕೆಗಳು ಮತ್ತು ಕಟ್ಟುನಿಟ್ಟಿನಿಂದ ಪಾಲಿಸಬೇಕಾದ ನಿಯಮಗಳು ಇರುತ್ತದೆ. ಅವುಗಳನ್ನು ನಾವು ಆಚರಣೆ ಮಾಡಿಲ್ಲ ಎಂದರೆ ನಮ್ಮ ಬದುಕಿಗೆ ತೊಂದರೆ ಆಗಬಹುದು. ನಮ್ಮ ಸಂಪ್ರದಾಯದಲ್ಲಿ ಅರಳಿ ಮರಕ್ಕೆ ವಿಶೇಷ ಮಹತ್ವವಿದೆ. ದೇವಸ್ಥಾನಗಳಲ್ಲಿ ಅರಳಿ ಮರ ಇರುತ್ತದೆ. ನಾವು ಸಹ ಅರಳಿ ಮರಕ್ಕೆ ಪೂಜೆ ಮಾಡುತ್ತೇವೆ, ಆದರೆ ನಾವು ಅರಲಿಮರ ಪೂಜೆ ವೇಳೆ ಕೆಲವು ವಿಚಾರವನ್ನು ನೆನಪಿನಲ್ಲಿ ಇಡಿ..

ನಮ್ಮ ಹಿಂದೂ ಧರ್ಮದ ದೇವತೆಗಳು ಅರಳಿ ಮರದಲ್ಲಿ ನೆಲೆಸುತ್ತಾರೆ ಎಂದು ಹೇಳಲಾಗುತ್ತದೆ. ಬ್ರಹ್ಮ ವಿಷ್ಣು ಮಹೇಶ್ವರರು, ಲಕ್ಷ್ಮೀದೇವಿ ಎಲ್ಲರೂ ಸಹ ನೆಲೆಸಿದ್ದಾರೆ. ಆದರೆ ಪದೇ ಪದೇ ಅರಳಿಮರಕ್ಕೆ ಪೂಜೆ ಮಾಡಿದರೆ ಅದರಿಂದ ನಿಮಗೆ ತೊಂದರೆ ಆಗಬಹುದು. ಭಾನುವಾರದ ದಿವಸ ನೀವು ಯಾವುದೇ ಕಾರಣಕ್ಕೂ ಅರಳಿಮರವನ್ನು ಮುಟ್ಟಬಾರದು, ನೀರು ಅರ್ಪಿಸಿಸಬಾರದು ಹಾಗೆಯೇ ಅರಳಿಮರದ ಪೂಜೆ ಮಾಡಬಾರದು. ಒಂದು ವೇಳೆ ಮಾಡಿದರೆ ನಿಮಗೆ ಕಷ್ಟಗಳು ಶುರುವಾಗಿ ದುರದೃಷ್ಟಕ್ಕೆ ಒಳಗಾಗಬಹುದು.

ಇದಕ್ಕೆ ಕಾರಣ ಏನು ಎಂದರೆ ಭಾನುವಾರದ ದಿವಸ ಲಕ್ಷ್ಮೀದೇವಿಯ ಒಡಹುಟ್ಟಿದವರಾದ ಅಲಕ್ಷ್ಮೀ ದೇವಿ ಅರಳಿ ಮರದಲ್ಲಿ ನೆಲೆಸುತ್ತಾರೆ. ಅವರಿಗೆ ಅರಳಿ ಮರದಲ್ಲಿ ನೆಲೆಸುವ ಅವಕಾಶ ಸಿಗುವುದಿಲ್ಲ, ಅವರಿಗೂ ಜನರನ್ನು ನೋಡುವ ಆಸೆ ಇದೆ ಎಂದು ಹೇಳಿದ್ದಕ್ಕೆ ವಿಷ್ಣು ಭಗವಾನ್ ಭಾನುವಾರದ ದಿವಸ ಮಾತ್ರ ಅಲಕ್ಷ್ಮೀ ಅರಳಿ ಮರದಲ್ಲಿ ನೆಲೆಸಬಹುದು ಎಂದು ಅನುಮತಿ ಕೊಟ್ಟಿರುತ್ತಾರೆ. ಹಾಗಾಗಿ ಭಾನುವಾರ ಅರಳಿ ಮರಕ್ಕೆ ನೀರಿನಿಂದ ಪೂಜೆ ಮಾಡಿದರೆ, ಬಡತನ ಬರುತ್ತದೆ. ಹಾಗೆಯೇ ಆ ವ್ಯಕ್ತಿಯ ಬದುಕಿನಲ್ಲಿ ಆಸೆಗಳು ನೆರವೇರುವುದಿಲ್ಲ.

ಹಾಗಾಗಿ ಭಾನುವಾರದ ದಿವಸ ಯಾವುದೇ ಕಾರಣಕ್ಕೂ ಅರಳಿಮರಕ್ಕೆ ಪೂಜೆ ಮಾಡಬೇಡಿ, ನೀರನ್ನು ಅರ್ಪಿಸಬೇಡಿ. ಬದುಕು ಚೆನ್ನಾಗಿರಬೇಕು ಎಂದರೆ ಈ ರೀತಿ ಮಾಡಿ. ಹಾಗೆಯೇ ಬೇರೆ ದಿವಸಗಳಲ್ಲಿ ಭಕ್ತಿಯಿಂದ ಅರಳಿ ಮರದ ಪೂಜೆ ಮಾಡಿ, ಲಕ್ಷ್ಮೀದೇವಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ. ಹಾಗೆಯೇ ನೀವು ಯಾವುದೇ ತೊಂದರೆಗೂ ಒಳಗಾಗುವುದಿಲ್ಲ.

Leave A Reply

Your email address will not be published.