Priyamani: ಐಷಾರಾಮಿ ಕಾರ್ ಖರೀದಿ ಮಾಡಿದ ನಟಿ ಪ್ರಿಯಾಮಣಿ! ಬೆಲೆ ಎಷ್ಟು ಗೊತ್ತಾ?

0 23

Priyamani: ನಟಿ ಪ್ರಿಯಾಮಣಿ ಅವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ ಆದರೆ ಇವರು ಮೂಲತಃ ಕೇರಳ ರಾಜ್ಯಕ್ಕೆ ಸೇರಿದ ಕುಟುಂಬ ಆಗಿದೆ. ಪ್ರಿಯಾಮಣಿ ಅವರು ನಟನೆಯ ಕೆರಿಯರ್ ಶುರು ಮಾಡಿದ್ದು, ತಮಿಳು ಚಿತ್ರರಂಗದ ಮೂಲಕ, ತಮಿಳು, ತೆಲುಗು, ಮಲಯಾಳಂ, ಕನ್ನಡ ಮಾತ್ರವಲ್ಲದೇ ಹಿಂದಿ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಪ್ರಿಯಾಮಣಿ ಅವರು ಹೊಸದಾದ ಐಷಾರಾಮಿ ಕಾರ್ ಖರೀದಿ ಮಾಡಿದ್ದಾರೆ.

ಪ್ರಿಯಾಮಣಿ ಅವರು ತಮಿಳಿನ ಪರುತ್ತಿವೀರನ್ ಸಿನಿಮಾ ಇಂದ ನಟನೆ ಶುರು ಮಾಡಿದರು. ಮೊದಲ ಸಿನಿಮಾಗೆ ನ್ಯಾಷನಲ್ ಅವಾರ್ಡ್ ಗೆದ್ದರು, ಬಳಿಕ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದರು. ಕನ್ನಡ ಚಿತ್ರರಂಗಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ರಾಮ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಕನ್ನಡದಲ್ಲೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಪ್ರಿಯಾಮಣಿ.

ಈಗ ಇವರು ನಾಯಕಿಯಾಗಿ ನಟಿಸುವುದು ಕಡಿಮೆ ಆಗಿದೆ, ಆದರೆ ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ಪ್ರಿಯಾಮಣಿ. ಹಾಗೆಯೇ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿಯೂ ಬ್ಯುಸಿ ಆಗಿದ್ದಾರೆ. ಬಾಲಿವುಡ್ ನಲ್ಲಿ ಶಾರುಖ್ ಖಾನ್ ಅವರೊಡನೆ ನಟಿಸಿರುವುದು ವಿಶೇಷ. ಇತ್ತೀಚೆಗೆ ಇವರು ಅಭಿನಯದ ಹಿಂದಿ ಸಿನಿಮಾ ಕೂಡ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಅದರ ನಡುವೆಯೇ ಪ್ರಿಯಾಮಣಿ ಅವರು ಒಂದು ಗುಡ್ ನ್ಯೂಸ್ ನೀಡಿದ್ದಾರೆ..

ಇತ್ತೀಚೆಗೆ ಪ್ರಿಯಾಮಣಿ ಅವರು ಐಷಾರಾಮಿ ಬೆಂಜ್ ಕಾರ್ ಖರೀದಿ ಮಾಡಿದ್ದು, ಫೋಟೋಸ್ ವೈರಲ್ ಆಗಿದೆ. ಇವರು ಖರೀದಿ ಮಾಡಿರುವುದು ಮರ್ಸಿಡಿಜೆ ಬೆಂಜ್ GLC ಕಾರ್ ಖರೀದಿ ಮಾಡಿದ್ದು, ಈ ಕಾರ್ ನ ಬೆಲೆ 95 ಲಕ್ಷದಿಂದ 1 ಕೋಟಿ ಆಗಿದೆ. ಪ್ರಿಯಾಮಣಿ ಅವರು ಶೋರೂಮ್ ನಲ್ಲೇ ಕಾರಿಗೆ ಪೂಜೆ ಮಾಡಿ, ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಇದೀಗ ಇವರ ಹೊಸ ಕಾರ್ ಫೋಟೋಸ್ ವೈರಲ್ ಆಗಿದೆ.

Leave A Reply

Your email address will not be published.