Yuva Story Leak : ದೊಡ್ಮನೆ ಕುಡಿಯ ಯುವ ಸಿನಿಮಾದ ಒನ್ ಲೈನ್ ಸ್ಟೋರಿ ಲೀಕ್! ಅಭಿಮಾನಿಗಳು ಥ್ರಿಲ್!

0 27

Yuva Story Leak : ದೊಡ್ಮನೆಯ ಮೂರನೇ ತಲೆಮಾರಿನ ಕುಡಿ ಯುವ ರಾಜ್ ಕುಮಾರ್ ಮೊದಲ ಸಿನಿಮಾ ಮುಂದಿನ ತಿಂಗಳು ತೆರೆಕಾಣುವುದಕ್ಕೆ ಸಿದ್ಧವಾಗಿದೆ. ಸಂತೋಷ್ ಆನಂದ್ ರಾಮ್ ಅವರು ಯುವ ರಾಜ್ ಕುಮಾರ್ ಅವರ ಮೊದಲ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಹಾಗೆಯೇ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾದ ಒನ್ ಲೈನ್ ಸ್ಟೋರಿ ಈಗ ಲೀಕ್ ಆಗಿದ್ದು, ಅಭಿಮಾನಿಗಳು ಸ್ಟೋರಿ ಕೇಳಿ ಥ್ರಿಲ್ ಆಗಿದ್ದಾರೆ.

ಯುವ ರಾಜ್ ಕುಮಾರ್ ಅವರ ಮೊದಲ ಸಿನಿಮಾ ಯುವ ಮುಂದಿನ ತಿಂಗಳ ಅಂತ್ಯಕ್ಕೆ ರಿಲೀಸ್ ಆಗಲಿದೆ. ಸಿನಿಮಾ ಮುಹೂರ್ತ ದೊಡ್ಡದಾಗಿಯೇ ನಡೆದಿತ್ತು, ಆದರೆ ಸಿನಿಮಾ ಬಗ್ಗೆ ನಿರ್ದೇಶಕರು ಅಥವಾ ಹೀರೋ ಆಗಲಿ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಈ ಸಿನಿಮಾಗೆ ನಾಯಕಿ ಸಪ್ತಮಿ ಗೌಡ ಅವರು. ಆದರೆ ಸಪ್ತಮಿ ಅವರ ಪಾತ್ರದ ಹೆಸರು ಸಿರಿ ಎನ್ನುವುದನ್ನು ಬಿಟ್ಟು ಇನ್ಯಾವುದೇ ವಿಚಾರ ಗೊತ್ತಿರಲಿಲ್ಲ. ಆದರೆ ಇದೀಗ ಯುವ ಸಿನಿಮಾದ ಒನ್ ಲೈನ್ ಸ್ಟೋರಿ ಲೀಕ್ ಆಗಿದೆ.

ಮುಂದಿನ ತಿಂಗಳು ಅಪ್ಪು ಅವರ ಹುಟ್ಟುಹಬ್ಬದ ಜೊತೆಗೆ ಯುವ ಸಿನಿಮಾ ಕೂಡ ಬಿಡುಗಡೆ ಆಗುತ್ತಿರುವುದು ಅಭಿಮಾನಿಗಳಿಗೆ ಒಂದು ರೀತಿ ಹಬ್ಬ ಎಂದರು ತಪ್ಪಲ್ಲ. ಮುಂದಿನ ತಿಂಗಳು ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಗಳನ್ನು ಕೊಡುವುದಕ್ಕೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಆದರೆ ಅದಕ್ಕಿಂತ ಮೊದಲೇ ಯುವ ಸಿನಿಮಾದ ಒನ್ ಲೈನ್ ಸ್ಟೋರಿ ಲೀಕ್ ಆಗಿದೆ. ಬುಕ್ ಮೈ ಶೋನಲ್ಲಿ ಯುವ ಸಿನಿಮಾದ ಒನ್ ಲೈನ್ ಸ್ಟೋರಿ ಲೀಕ್ ಆಗಿದ್ದು, ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಯುವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ ಆಗಿದ್ದು, ಕಾಲೇಜಿನಲ್ಲಿ ನಡೆಯುವ ಒಂದು ಜಗಳ ಗ್ಯಾಂಗ್ ವಾರ್ ಆಗಿ, ಹಾಸ್ಟೆಲ್ ನಲ್ಲಿರುವ ಯುವ ತನ್ನ ಫ್ರೆಂಡ್ಸ್ ಜೊತೆಗೆ ನಿಲ್ಲುತ್ತಾನೆ. ಈ ಗಲಾಟೆ ತೊಂದರೆ ಇಂದ ತನ್ನ ಫ್ರೆಂಡ್ಸ್ ಅನ್ನು ಯುವ ಹೇಗೆ ಕಾಪಾಡಿಕೊಳ್ಳುತ್ತಾನೆ ಎನ್ನುವುದು ಒನ್ ಲೈನ್ ಸ್ಟೋರಿ ಆಗಿದ್ದು, ಯೂತ್ ಫುಲ್ ಎಂಟರ್ಟೈನರ್ ಸ್ಟೋರಿ ಹೊಂದಿರುವ ಸಿನಿಮಾ ಕಥೆ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

Leave A Reply

Your email address will not be published.