Astrology: ನಾಳೆ ಶನಿಅಮಾವಾಸ್ಯೆ ದಿವಸ ಯಾವುದೇ ಕಾರಣಕ್ಕೂ ಈ ಕೆಲಸ ಮಾಡಬೇಡಿ

0 18

ಮನೆಯ ಪೂರ್ವಿಕರ ಆಶೀರ್ವಾದ ಪಡೆದು, ದೋಷಗಳನ್ನು ನಿವಾರಿಸಿಕೊಳ್ಳಲು ಪಿತೃಪಕ್ಷ ಮಹಾಲಯ ಅಮಾವಸ್ಯೆಯ ದಿವಸ ಒಳ್ಳೆಯ ದಿನ ಎಂದು ಕರೆಯುತ್ತಾರೆ. ಈ ವರ್ಷ ನಾಳೆ ಅಂಡದೆ ಆಕ್ಟೊಬರ್ 14ರಂದು ಮಹಾಲಯ ಅಮಾವಾಸ್ಯೆಯನ್ನು ಆಚರಣೆ ಮಾಡಲಾಗುತ್ತದೆ. ಶನಿವಾರದ ದಿವಸ ಅಮಾವಾಸ್ಯೆ ಇದ್ದರೆ, ಅದನ್ನು ಶನಿ ಅಮಾವಾಸ್ಯೆ ಎಂದು ಕರೆಯುತ್ತಾರೆ. ನಾಳೆಯ ಮಹಾಲಯ ಅಮಾವಾಸ್ಯೆಯನ್ನು ಕೂಡ ಶನಿ ಅಮಾವಾಸ್ಯೆ ಆಗಿದ್ದು, ಇದೇ ದಿನ ಸೂರ್ಯಗ್ರಹಣ ಕೂಡ ಇದೆ. ಬಹಳ ವರ್ಷಗಳ ನಂತರ ಮಹಾಲಯ ಅಮಾವಾಸ್ಯೆಯ ದಿನ ಸೂರ್ಯಗ್ರಹಣ ಸಂಭವಿಸುತ್ತಿದೆ..

ಭಾರತದಲ್ಲಿ ಅಕ್ಟೋಬರ್ 14ರ ರಾತ್ರಿ 8:34 ರಿಂದ ಬೆಳಗ್ಗಿನ ಜಾವ 2:25ರವರೆಗು ಸೂರ್ಯಗ್ರಹಣ ನಡೆಯಲಿದ್ದು, ಈ ಸಾರಿ ಭಾರತದಲ್ಲಿ ಗೋಚರಿಸುವುದಿಲ್ಲ. ಗ್ರಹಣದ ಸಮಯದಲ್ಲಿ ಬಹಳ ಹುಷಾರಾಗಿ ಇರಬೇಕು ಎಂದು ಹೇಳುತ್ತಾರೆ. ಸಾಕಷ್ಟು ವರ್ಷಗಳ ನಂತರ ಮಹಾಲಯ ಅಮಾವಾಸ್ಯೆಯ ದಿನ ಗ್ರಹಣ ಗೋಚರಿಸುತ್ತಿದ್ದು, ಈ ಸಮಯದಲ್ಲಿ ನೀವು ಕೆಲವು ಕೆಲಸಗಳನ್ನು ಮಾಡದೆ ಇರುವುದು ನಿಮಗೆ ಒಳ್ಳೆಯದು, ಹಾಗಿದ್ದರೆ ನಾಳೆಯ ದಿನ ಏನೆಲ್ಲಾ ಮಾಡಬಾರದು ಎಂದು ತಿಳಿಸುತ್ತೇವೆ ನೋಡಿ..

*ತುಳಸಿ ಪೂಜೆಗೆ ನಿಷೇಧ :- ಮಹಾಲಯ ಅಮಾವಾಸ್ಯೆ ದಿನ ಸೂರ್ಯಗ್ರಹಣ ಗೋಚರಿಸುವುದರಿಂದ ಈ ದಿನ ನೀವು ಯಾವುದೇ ಕಾರಣಕ್ಕೂ ತುಳಸಿ ಪೂಜೆ ಮಾಡುವ ಹಾಗಿಲ್ಲ, ಈ ದಿನ ತುಳಸಿ ಗಿಡವನ್ನು ಮುಟ್ಟಲು ಬಾರದು ಎಂದು ಕೂಡ ಹೇಳುತ್ತಾರೆ. ಗ್ರಹಣದ ದಿನ ಹೀಗೆ ಮಾಡಿದರೆ ಲಕ್ಷ್ಮೀದೇವಿ ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ.

*ಬ್ರಹ್ಮಚರ್ಯ ಪಾಲನೆ :- ಮಹಾಲಯ ಅಮಾವಾಸ್ಯೆಯ ದಿನ ಜಪ, ಉಪವಾಸ ದೇವರ ಪೂಜೆ ಮಾಡುವವರು ಈ ದಿನ ದೈಹಿಕ ಸಂಬಂಧ ಹೊಂದುವ ಹಾಗಿಲ್ಲ. ಈ ದಿವಸ ಬ್ರಹ್ಮಚರ್ಯದ ಪಾಲನೆ ಇರಬೇಕು. ತಪ್ಪಿಸಿದರೆ ನಿಮಗೆ ದೋಷ ಉಂಟಾಗಬಹುದು..

*ಮತ್ತೊಬ್ಬರಿಗೆ ತೊಂದರೆ ಕೊಡಬೇಡಿ :- ನಾಳೆ ಮಹಾಲಯ ಅಮಾವಾಸ್ಯೆಯ ಜೊತೆಗೆ ಸೂರ್ಯಗ್ರಹಣ ಸಹ ಇದೆ, ಈ ದಿವಸ ನೀವು ಕಷ್ಟದಲ್ಲಿರುವವರಿಗೆ ಯಾವುದೇ ಕಾರಣಕ್ಕೂ ತೊಂದರೆ ಹಿಂಸೆ ಕೊಡಬಾರದು. ಈ ರೀತಿ ಮಾಡಿದರೆ ರಾಹು ಮತ್ತು ಕೇತು ಗ್ರಹಗಳಿಂದ ನೆಗಟಿವ್ ಪರಿಣಾಮಕ್ಕೆ ಗುರಿಯಾಗುತ್ತೀರಿ.

*ನಿರ್ಜನ ಪ್ರವೇಶಕ್ಕೆ ಹೋಗಬೇಡಿ :- ಅಮಾವಾಸ್ಯೆ ಸಮಯದಲ್ಲಿ ದುಷ್ಟ ಶಕ್ತಿಗಳ ಸಂಚಾರ ಜಾಸ್ತಿ ಇರುತ್ತದೆ ಎಂದು ಹೇಳುತ್ತಾರೆ. ಈ ಕಾರಣದಿಂದ ಸ್ಮಶಾನ ಮತ್ತು ಇನ್ನಿತರ ಜನನಿಬಿಡ ಪ್ರದೇಶದಲ್ಲಿ ಒಂಟಿಯಾಗಿ ಓಡಾಡಬೇಡಿ.

Leave A Reply

Your email address will not be published.