Netra Jadhav: ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಖಡಕ್ ವಿಲ್ಲನ್ ಶಾರ್ವರಿ ನಿಜ ಜೀವನದಲ್ಲಿ ಹೇಗಿರ್ತಾರೆ ಗೊತ್ತಾ? ನಿಜಕ್ಕೂ ಇವರೇನಾ?

Written by Pooja Siddaraj

Published on:

ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ಧಾರವಾಹಿಗಳಲ್ಲಿ ಒಂದು ಶ್ರೀರಸ್ತು ಶುಭಮಸ್ತು, ಈ ಧಾರವಾಹಿಯಲ್ಲಿ ನಟಿ ಸುಧಾರಾಣಿ ಮತ್ತು ನಟ ಅಜಿತ್ ಹಂದೆ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಧ್ಯ ವಯಸ್ಕರ ನಡುವಿನ ಪ್ರೀತಿ, ಮದುವೆ, ಅವರನ್ನ ಈ ಸಮಾಜ ಹೇಗೆ ಸ್ವೀಕರಿಸುತ್ತೆ ಎನ್ನುವ ಕಥೆಯನ್ನು ಒಳಗೊಂಡಿದೆ. ಈ ಧಾರವಾಹಿಯಲ್ಲಿ ಖಡಕ್ ವಿಲ್ಲನ್ ಪಾತ್ರ ಶಾರ್ವರಿ.

ಮಾಧವನ ನಾದಿನಿ ಆಗಿರುವ ಶಾರ್ವರಿಗೆ ಭಾವನ ಮೇಲೆ ದ್ವೇಷ, ಮಾಧವ ಸಂತೋಷವಾಗಿ ಇರದ ಹಾಗೆ ನೋಡಿಕೊಂಡು, ಇಡೀ ಮನೆಯನ್ನು ತನ್ನ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬೇಕು ಎನ್ನುವುದೇ ಶಾರ್ವರಿಯ ಗುರಿ. ಆದರೆ ತುಳಸಿಯ ಜೊತೆ ಮಾಧವನ ಮದುವೆಯಾದಮೇಲೆ ಶಾರ್ವರಿಯ ಪ್ಲಾನ್ ಉಲ್ಟಾ ಹೊಡೆಯೋದಕ್ಕೆ ಶುರುವಾಗಿದೆ. ಮನೆಯಲ್ಲೇ ಇದ್ದುಕೊಂಡು, ಮನೆಯವರನ್ನೇ ದ್ವೇಷ ಮಾಡುತ್ತಿರುವ ಪಾತ್ರ ಶಾರ್ವರಿ.

ಈ ಶಾರ್ವರಿ ಪಾತ್ರದಲ್ಲಿ ನಟಿಸುತ್ತಿರುವವರು ನಟಿ ನೇತ್ರಾ ಜಾಧವ್, ಇವರು ಬಹಳಷ್ಟು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಈ ಹಿಂದೆ ಸುಧಾರಾಣಿ ಅವರೊಡನೆ ರಥಸಪ್ತಮಿ ಧಾರವಾಹಿಯಲ್ಲಿ ನಟಿಸಿದ್ದರು. ಅದರಲ್ಲಿ ಇಬ್ಬರದ್ದು ಅಕ್ಕ ತಂಗಿ ಪಾತ್ರ, ಇದರಲ್ಲಿ ವಾರಗಿತ್ತಿಯರ ಪಾತ್ರ. ನೋಡಲು ಬಹಳ ಸುಂದರವಾಗಿರುವ ನೇತ್ರಾ ಜಾಧವ್ ಅವರು ಶಾರ್ವರಿ ಪಾತ್ರದ ನೆಗಟಿವ್ ಶೇಡ್ ನಲ್ಲಿ ಅಚ್ಚುಕಟ್ಟಾಗಿ ನಟಿಸುತ್ತಿದ್ದಾರೆ ಎಂದರೆ ತಪ್ಪಲ್ಲ.

ವೀಕ್ಷಕರಿಗೆ ಕೂಡ ಇವರ ಪಾತ್ರ ತುಂಬಾ ಇಷ್ಟವಾಗಿದೆ. ಇನ್ನು ನೇತ್ರಾ ಜಾಧವ್ ಅವರ ವಯಸ್ಸಿನ ಬಗ್ಗೆ ಹೇಳುವುದಾದರೆ, ಶಾರ್ವರಿ ಪಾತ್ರ ಇವರ ವಯಸ್ಸಿಗೆ ಮೀರಿದ್ದು, ನೇತ್ರಾ ಜಾಧವ್ ಅವರ ಮಕ್ಕಳು ಇನ್ನು ಚಿಕ್ಕವರು ಶಾಲೆಗೆ ಹೋಗುತ್ತಿದ್ದಾರೆ. ಆದರೆ ಧಾರವಾಹಿಯಲ್ಲಿ ಇವರಿಗೆ ದೊಡ್ಡ ಮಗಳು. ಶ್ರೀರಸ್ತು ಶುಭಮಸ್ತು ಧಾರವಾಹಿ ನೇತ್ರಾ ಅವರಿಗೆ ಒಳ್ಳೆಯ ಹೆಸರನ್ನೇ ತಂದುಕೊಟ್ಟಿದೆ. ಈ ಹಿಂದೆ ಹಲವು ಧಾರವಾಹಿಗಳಲ್ಲಿ ನಟಿಸಿದ್ದಾರೆ ನೇತ್ರಾ ಜಾಧವ್.

ಉದಯ ಟಿವಿಯಲ್ಲಿ ಆಕೃತಿ ಎನ್ನುವ ಧಾರವಾಹಿಯಲ್ಲಿ ನಟಿಸುತ್ತಿದ್ದರು, ಸುಂದರಿ ಧಾರವಾಹಿಯಲ್ಲಿ ಕೂಡ ನಟಿಸುತ್ತಿದ್ದರು. ಪ್ರಸ್ತುತ ಇವರು ಶ್ರೀರಸ್ತು ಶುಭಮಸ್ತು ಧಾರವಾಹಿ ಮೂಲಕ ಮನೆಮಾತಾಗಿದ್ದಾರೆ. ನಿಜ ಜೀವನದಲ್ಲಿ ತುಂಬಾ ಮಾಡರ್ನ್ ಆಗಿರುವ ನೇತ್ರಾ ಅವರು ತಮ್ಮ ಫ್ಯಾಮಿಲಿ ಜೊತೆಗೆ, ಮಗುವಿನ ಜೊತೆಗೆ ಇರುವ ಫೋಟೋಸ್ ಗಳನ್ನು ಆಗಾಗ ಶೇರ್ ಮಾಡುತ್ತಾರೆ. ಫಾರಿನ್ ಟ್ರಿಪ್ ಫೋಟೋಗಳನ್ನು ಕೂಡ ಶೇರ್ ಮಾಡುತ್ತಾರೆ. ಇವರ ಫೋಟೋಸ್ ನೋಡಿದರೆ ಶಾರ್ವರಿ ನಿಜಕ್ಕೂ ಇವರೇನಾ ಎಂದು ಅನ್ನಿಸುವುದು ಖಂಡಿತ.

Leave a Comment