ಬಿಗ್ ಬಾಸ್ ಶೋ ಶುರುವಾದರೆ ಎಂಟರ್ಟೈನ್ಮೆಂಟ್ ಗೆ ಏನು ಕಡಿಮೆ ಇಲ್ಲ. ಟಾಸ್ಕ್ ಗಳನ್ನು ಮುಗಿಸುವ ಮಜದ ಜೊತೆಗೆ ಜಗಳ, ಕದನ, ಡ್ರಾಮಾ ಇದೆಲ್ಲವೂ ಇದ್ದೆ ಇರುತ್ತದೆ. ಪ್ರತಿ ಸೀಸನ್ ನಲ್ಲಿ ನಾವು ಇದನ್ನೆಲ್ಲ ನೋಡಿ ಎಂಜಾಯ್ ಮಾಡಿದ್ದೇವೆ. ಈ ಸೀಸನ್ ಅದಕ್ಕೆ ಹೊರತಾಗಿಲ್ಲ, ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಮೊದಲನೇ ವಾರದಲ್ಲೇ ಜಗಳ ಡ್ರಾಮಾ ಎಲ್ಲವೂ ಶುರುವಾಗಿದೆ..
ಮೊನ್ನೆಯಷ್ಟೇ ನಾಮಿನೇಷನ್ ವಿಚಾರಕ್ಕೆ ಸಂಗೀತಾ ಶೃಂಗೇರಿ ಮತ್ತು ವಿನಯ್ ನಡುವೆ ಜಗಳ ನಡೆದಿತ್ತು, ನಾಮಿನೇಟ್ ಮಾಡಲು ವಿನಯ್ ಅವರು ಕೊಟ್ಟ ಕಾರಣ ಸರಿಯಿಲ್ಲ ಎಂದು ಸಂಗೀತಾ ವಾದ ಮಾಡಿದ್ದರು. ಇಂದು ಡ್ರೋನ್ ಪ್ರತಾಪ್ ಅವರ ವಿಚಾರಕ್ಕೆ ಡ್ರಾಮಾ ಜಗಳ ನಡೆದಿದೆ. ಡ್ರೋನ್ ಪ್ರತಾಪ್ ಅವರನ್ನು ಪದೇ ಪದೇ ಮನೆಯ ಸದಸ್ಯರು ಕೆಣಕುತ್ತಿದ್ದಾರೆ, ಅವರನ್ನೇ ಟಾರ್ಗೆಟ್ ಮಾಡುತ್ತಿರುವ ಹಾಗೆ ತೋರುತ್ತಿದೆ.
ನಿನ್ನೆ ಮೊನ್ನೆಯೆಲ್ಲ ವರ್ತೂರು ಸಂತೋಷ್, ತುಕಾಲಿ ಸಂತೋಷ್ ಮತ್ತು ಸ್ನೇಹಿತ್ ಸೇರಿ ಡ್ರೋನ್ ಪ್ರತಾಪ್ ಅವರನ್ನು ಆಡಿಕೊಂಡಿದ್ದರು, ಈಗ ವಿನಯ್ ಗೌಡ ಕೂಡ ಡ್ರೋನ್ ಪ್ರತಾಪ್ ಮೇಲೆ ಕಿರುಚಾಡಿದ್ದಾರೆ. ಮನೆಯಲ್ಲಿ ಅಸಮರ್ಥರು ಎಂದು ನಾಮಫಲಕ ಹಾಕಿಕೊಂಡಿದ್ದವರು ತಾವು ಸಮರ್ಥರು ಎಂದು ಪ್ರೂವ್ ಮಾಡಿಕೊಂಡಿದ್ದಾರೆ. ಟಾಸ್ಕ್ ನಲ್ಲಿ ಸಮರ್ಥರನ್ನು ಸೋಲಿಸಿದ್ದಾರೆ.
ಈ ವಾರ ಅವರು ಅಸಮರ್ಥರಾಗಿರುವ ಕಾರಣ ಅವರೇ ಮನೆಯ ಎಲ್ಲಾ ಸದಸ್ಯರಿಗೆ ಅಡುಗೆ ಮಾಡಬೇಕು ಎನ್ನುವುದು ನಿಯಮ ಆಗಿದ್ದು, ಈ ವಿಚಾರಕ್ಕೆ ವಿನಯ್ ಗೌಡ ಅವರು ಮಾತನಾಡಿದ್ದಾರೆ ಎಂದು ಪ್ರತಾಪ್ ಹೇಳಿದ್ದಾರೆ. ನೀವೆಲ್ಲಾ ಹೇಗೆ ಅಡುಗೆ ಮಾಡ್ತೀರಾ ಅಂತ ಗೊತ್ತು ಎಂದು ವಿನಯ್ ಹೇಳಿದ್ದಾರೆ ಎನ್ನುತ್ತಾರೆ ಪ್ರತಾಪ್. ಅದಕ್ಕೆ ಕಾರ್ತಿಕ್ ಅವರು ಲಿವಿಂಗ್ ಏರಿಯಾಗೆ ಬಂದು ನಾವು ಮಾಡುತ್ತಿರುಗ ಅಡುಗೆಯಲ್ಲಿ ಯಾರಿಗಾದರೂ ಪ್ರಾಬ್ಲಮ್ ಇದೆಯಾ ಎಂದು ಕೇಳುತ್ತಾರೆ..
ಆಗ ಈ ವಿಷಯ ಹೊರಬಂದು, ವಿನಯ್ ಗೌಡ ಅವರು ಮಾತನಾಡುತ್ತಾರೆ, ಏನೇ ಇದ್ದರೂ ನಾನು ಮುಖದ ಮೇಲೆ ಹೇಳ್ತೀನಿ, ಹಿಂದೆ ಮಾತಾಡೋ ಬುದ್ಧಿ ಇಲ್ಲ ಎಂದಾಗ, ಅದೇ ವಿಷಯಕ್ಕೆ ಡ್ರೋನ್ ಪ್ರತಾಪ್ ಮತ್ತು ವಿನಯ್ ಗೌಡ ನಡುವೆ ಮಾತಿನ ಚಕಾಮಕಿ ನಡೆದು, ಇವತ್ತು ನಿನ್ನ ಡ್ರೋನ್ ನ ರೆಕ್ಕೆ ಪುಕ್ಕ ಕಿತ್ತು ಹಾಕ್ತಿನಿ ಎನ್ನುತ್ತಾರೆ ವಿನಯ್. ಈ ಮಾತಿಗೆ ಬೇಸರ ಮಾಡಿಕೊಳ್ಳುವ ಡ್ರೋನ್ ಪ್ರತಾಪ್ ಬಾತ್ ರೂಮ್ ಗೆ ಹೋಗಿ ಒಬ್ಬರೇ ಕುಳಿತುಕೊಳ್ಳುತ್ತಾರೆ.
ಈ ರೀತಿ ಪದೇ ಪದೇ ಡ್ರೋನ್ ಪ್ರತಾಪ್ ಅವರನ್ನು ಮನೆಯ ಸದಸ್ಯರು ಟಾರ್ಗೆಟ್ ಮಾಡಿಕೊಳ್ಳುತ್ತಿರುವುದು ಜನರಿಗೆ ಇಷ್ಟವಾಗುತ್ತಿಲ್ಲ, ಪದೇ ಪದೇ ಎಲ್ಲರೂ ಪ್ರತಾಪ್ ಅವರನ್ನೇ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದಾರೆ ಆದರೆ ಪ್ರತಾಪ್ ಬಹಳ ಸೌಮ್ಯವಾಗಿಯೇ ಇದ್ದಾರೆ ಎಂದು ಪ್ರತಾಪ್ ಅವರ ಮೇಲೆ ಎಲ್ಲರಿಗೂ ಈಗ ಕಾಳಜಿ ಹೆಚ್ಚಾಗುತ್ತಿದೆ.