Aishwarya Rai: ನಟಿ ಐಶ್ವರ್ಯ ರೈ ಕೌಟುಂಬಿಕ ಜೀವನದಲ್ಲಿ ಸಮಸ್ಯೆ?ಇನ್ಸ್ಟಾಗ್ರಾಮ್ ನಲ್ಲಿ ಅತ್ತೆಯ ಮುಖವನ್ನೇ ಕ್ರಾಪ್ ಮಾಡಿದ ನಟಿ

Written by Pooja Siddaraj

Published on:

ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಬಗ್ಗೆ ಯಾವುದೇ ವಿಷಯವಾದರು ಚರ್ಚೆಗೆ ಒಳಗಾಗುತ್ತದೆ. ಅವರ ಒಂದೊಂದು ಪೋಸ್ಟ್ , ಶೇರ್ ಮಾಡುವ ಫೋಟೋ, ಫೋಟೋಗೆ ಬರೆಯುವ ಕ್ಯಾಪ್ಶನ್ ಇದೆಲ್ಲವನ್ನು ಗಮನಿಸುವ ಜನ, ಸ್ವಲ್ಪ ಹೆಚ್ಚು ಕಮ್ಮಿ ಅನ್ನಿಸಿದರೂ ಅದರ ಹಿಂದೆ ಕಾರಣಗಳನ್ನು ಹುಡುಕುತ್ತಾರೆ. ಇದೀಗ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅವರ ವಿಚಾರದಲ್ಲೂ ಅದೇ ಆಗಿದೆ.

ಮಂಗಳೂರಿನ ಬೆಡಗಿ ಐಶ್ವರ್ಯಾ ರೈ ಅವರು ಬಾಲಿವುಡ್ ನ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರ ಮನೆಯ ಸೊಸೆ, ಅಮಿತಾಭ್ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ಅವರೊಡನೆ ಐಶ್ವರ್ಯ ರೈ ಅವರ ಮದುವೆಯಾಗಿದ್ದು, ಈ ಜೋಡಿಗೆ ಆರಾಧ್ಯ ಹೆಸರಿನ ಮಗಳಿದ್ದಾಳೆ. ನಿನ್ನೆಯಷ್ಟೇ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ 81ನೇ ವರ್ಷದ ಹುಟ್ಟುಹಬ್ಬವಿತ್ತು. ಈ ವಿಶೇಷ ದಿನ ಭಾರತ ಚಿತ್ರರಂಗದ ಕಲಾವಿದರು, ಸ್ನೇಹಿತರು, ಕುಟುಂಬದವರು ಎಲ್ಲರು ಕೂಡ ಅಮಿತಾಭ್ ಬಚ್ಚನ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.

ಅದೇ ರೀತಿ ಅಮಿತಾಭ್ ಬಚ್ಚನ್ ಅವರ ಸೊಸೆ ನಟಿ ಐಶ್ವರ್ಯ ರೈ ಅವರು ಕೂಡ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನಲ್ಲಿ ಅಮಿತಾಭ್ ಬಚ್ಚನ್ ಅವರು ಮತ್ತು ಆರಾಧ್ಯ ಬಚ್ಚನ್ ಇಬ್ಬರು ಜೊತೆಗಿರುವ ಫೋಟೋ ಶೇರ್ ಮಾಡಿದ್ದಾರೆ. ಆದರೆ ಆ ಫೋಟೋದಲ್ಲಿ ಅವರಿಬ್ಬರ ಜೊತೆಗೆ ಜಯಾ ಬಚ್ಚನ್, ನವ್ಯ ನಂದ ಕೂಡ ಇದ್ದಾರೆ ಆದರೆ ಅವರಿಬ್ಬರನ್ನು ಐಶ್ವರ್ಯ ರೈ ಅವರು ಕ್ರಾಪ್ ಮಾಡಿ ಫೋಟೋ ಪೋಸ್ಟ್ ಮಾಡಿ, ಅಮಿತಾಭ್ ಬಚ್ಚನ್ ಅವರಿಗೆ ವಿಶ್ ಮಾಡಿದ್ದಾರೆ.

ಈ ಫೋಟೋ ನೋಡಿದ ನೆಟ್ಟಿಗರಲ್ಲಿ ಈಗ ಪ್ರಶ್ನೆ ಶುರುವಾಗಿದೆ, ಐಶ್ವರ್ಯ ರೈ ಯಾಕೆ ಅತ್ತೆ ಜಯಾ ಬಚ್ಚನ್ ಅವರ ಫೋಟೋ ಕ್ರಾಪ್ ಮಾಡಿದ್ದಾರೆ? ಅತ್ತೆಯ ಜೊತೆ ಮತ್ತು ನಾದಿನಿ ಶ್ವೇತಾ ಪಂಡಿತ್ ಅವರೊಡನೆ ಚೆನ್ನಾಗಿಲ್ವಾ? ಇವರ ಕೌಟುಂಬಿಕ ಜೀವನದಲ್ಲಿ ಬಿರುಕು ಮೂಡಿದ್ಯಾ? ಎನ್ನುವ ಪ್ರಶ್ನೆಗಳು ಈಗ ಶುರುವಾಗಿದೆ. ಆದರೆ ಅಸಲಿ ವಿಚಾರ ಏನು ಎನ್ನುವುದು ಗೊತ್ತಾಗಿಲ್ಲ.

ಇನ್ನು ಈ ಕುಟುಂಬದ ಹಿರಿಯರಾದ ಅಮಿತಾಭ್ ಬಚ್ಚನ್ ಅವರು ಬಹಳ ಕಷ್ಟಪಟ್ಟು ಮುಂದಕ್ಕೆ ಬಂದವರು. ದಿನಕ್ಕೆ 500 ರೂಪಾಯಿ ಸಂಪಾದನೆ ಮಾಡುತ್ತಿದ್ದ ಅಮಿತಾಭ್ ಬಚ್ಚನ್ ಅವರು ಇಂದು 3000 ಕೋಟಿಗಿಂತ ಹೆಚ್ಚಿನ ಆಸ್ತಿಯ ಮಾಲೀಕರ. ನಮ್ಮ ದೇಶ ಕಂಡ ಅಪ್ರತಿಮ ಕಲಾವಿದರಲ್ಲಿ ಅಮಿತಾಭ್ ಬಚ್ಚನ್ ಅವರು ಕೂಡ ಒಬ್ಬರು. ಇಂದಿಗೂ ಅವರು ಅಷ್ಟೇ ಆಕ್ಟಿವ್ ಆಗಿ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ

Leave a Comment