Viral News: ಬೇರೆ ಜಾತಿ ಹುಡುಗನನ್ನ ಮದುವೆಯಾಗಿದ್ದಕ್ಕೆ ಮಗಳನ್ನೇ ಮುಗಿಸಿದ ತಂದೆ!

0 24

ಈಗಿನ ಕಾಲದಲ್ಲಿ ಜಾತಿ, ಧರ್ಮ ಇದೆಲ್ಲವೂ ನಮ್ಮ ನಂಬಿಕೆಗೆ ಎಲ್ಲರೂ ಒಂದಾಗಿರಬೇಕು ಎಂದು ಹೇಳುತ್ತಾರೆ. ಬೇರೆ ಜಾತಿಯವರನ್ನು ಬೇರೆ ಧರ್ಮದವರನ್ನು ಮದುವೆ ಆಗುವುದು ಕಾಮನ್ ಎಂದು ಕೂಡ ಹೇಳುತ್ತಾರೆ. ಆದರೆ ನಮ್ಮ ದೇಶದ ಮತ್ತು ರಾಜ್ಯದ ಹಲವೆಡೆ ಇನ್ನು ಇದನ್ನು ಒಪ್ಪಿಕೊಂಡಿಲ್ಲ. ಅದರಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ಬೇರೆ ಜಾತಿ, ಧರ್ಮವನ್ನು ಒಪ್ಪಿಕೊಳ್ಳುವುದು ಕಷ್ಟ.

ಇದಕ್ಕಾಗಿ ಒಬ್ಬ ವ್ಯಕ್ತಿಯನ್ನು ಮುಗಿಸುವುದಕ್ಕೂ ಜನ ಹಿಂದೆ ಮುಂದೆ ಯೋಚನೆ ಮಾಡುವುದಿಲ್ಲ. ಇಂಥದ್ದೇ ಒಂದು ಘಟನೆ ಈಗ ಬೆಂಗಳೂರು ಗ್ರಾಮಾಂತರ ಪ್ರದೇಶದ ದೇವನಹಳ್ಳಿಯಲ್ಲಿ ನಡೆದಿದೆ. ಬೇರೆ ಜಾತಿ ಹುಡುಗನನ್ನು ಪ್ರೀತಿ ಮಾಡಿದ್ದಕ್ಕೆ, ಹುಡುಗಿಯ ತಂದೆ ಆಕೆಯನ್ನು ಕತ್ತು ತೆಗೆದು ಮುಗಿಸಿಬಿಟ್ಟಿದ್ದಾನೆ. ದೇವನಹಳ್ಳಿ ತಾಲ್ಲೂಕಿನ ಬಿದಲೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜನರಿಗೆ ಶಾಕ್ ಆಗಿದೆ.

ಮೃತವಾಗಿರುವ ಹುಡುಗಿಯ ಹೆಸರು ಕವನ, ಆಕೆಯ ವಯಸ್ಸು 20. ಇನ್ನು ಈ ಹುಡುಗಿಯ ತಂದೆಯ ಹೆಸರು ಮಂಜುನಾಥ್, ಅವರ ವಯಸ್ಸು 47. ಈ ವ್ಯಕ್ತಿಗೆ ತಮ್ಮ ಮಗಳು ಬೇರೆ ಜಾತಿಯ ಹುಡುಗನನ್ನು ಪ್ರೀತಿ ಮಾಡಿದ ಕಾರಣ ಮಗಳ ಮೇಲೆ ಕೋಪ ಹೆಚ್ಚಾಗಿ, ಮಗಳನ್ನು ಮುಗಿಸಿದ್ದಾನೆ. ಅಷ್ಟೇ ಅಲ್ಲದೆ, ಪೊಲೀಸರ ಬಳಿ ಹೋಗಿ ತಾನು ಇದೇ ಕಾರಣಕ್ಕೆ ಮಗಳನ್ನು ಮುಗಿಸಿರುವುದಾಗಿ ಒಪ್ಪಿಕೊಂಡಿದ್ದಾನೆ..

ನಡೆದಿದ್ದೇನು ಎಂದು ಪೂರ್ತಿಯಾಗಿ ನೋಡುವುದಾದರೆ, ಈ ಹುಡುಗಿ ಕವನ ತನ್ನದೇ ಊರಿನ ಬೇರೆ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ಆಕೆಯ ತಂದೆಗೆ ಗೊತ್ತಾಗಿ, ಮನೆಯಲ್ಲಿ ದೊಡ್ಡ ಜಗಳವೇ ಆಗಿತ್ತು. ಅವನನ್ನು ಪ್ರೀತಿ ಮಾಡುವುದು ಬಿಡಬೇಕು ಎಂದು ಮಂಜುನಾಥ್ ಎರಡು ಮೂರು ಸಾರಿ ಮಗಳಿಗೆ ಬುದ್ಧಿವಾದ ಹೇಳಿದ್ದಾರೆ. ಆದರೆ ಕವನ ತಂದೆಯ ಮಾತನ್ನು ಕೇಳದೆ, ಆ ಹುಡುಗನನ್ನು ಪ್ರೀತಿಸುವುದನ್ನು ನಿಲ್ಲಿಸಿರಲಿಲ್ಲ.

ಈ ವಿಚಾರಕ್ಕೆ ಆಕೆಯ ತಂದೆ ಮಂಜುನಾಥ್ ಗೆ ಮಗಳ ಮೇಲೆ ಕೋಪ ಬಂದಿದೆ, ಊರಿನಲ್ಲಿ ತನ್ನ ಮರಿಯಾದೆ ಹೋಗುತ್ತದೆ ತಾನು ತಲೆ ಎತ್ತಿಕೊಂಡು ಓಡಾಡೋದು ಸಾಧ್ಯವಿಲ್ಲ ಎಂದುಕೊಂಡ ಮಂಜುನಾಥ್, ಮಗಳ ಕತ್ತನ್ನು ಕತ್ತರಿಸಿ, ಮುಗಿಸಿಬಿಟ್ಟಿದ್ದಾನೆ. ಇವರ ಮನೆಯಲ್ಲಿ ಏನಾಗಿದೆ ಎಂದರೆ, ಇದಕ್ಕಿಂತ ಮೊದಲು ಮಂಜುನಾಥ್ ಅವರ ಎರಡನೇ ಮಗಳು ಕೂಡ ಬೇರೆ ಜಾತಿಯ ಹುಡುಗನನ್ನು ಪ್ರೀತಿಸಿ, ಈ ವಿಚಾರ ಪೊಲೀಸ್ ಸ್ಟೇಶನ್ ವರೆಗು ಹೋಗಿತ್ತಂತೆ..

ಆದರೆ ಆಕೆಗೆ 18 ವರ್ಷ ತುಂಬಿರಲಿಲ್ಲ, ಈ ಕಾರಣಕ್ಕೆ ಪೊಲೀಸರು ಆಕೆಯನ್ನು ಸಾಂತ್ವನ ಕೇಂದ್ರಕ್ಕೆ ಕಳಿಸಿದ್ದಾರೆ. ಈ ಘಟನೆ ನಂತರ ಕವನ ಕೂಡ ಬೇರೆ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದಾಳೆ ಎನ್ನುವ ವಿಷಯ ಗೊತ್ತಾಗಿದೆ. ಹಾಗಾಗಿ ಕೋಪದಲ್ಲಿ ಈ ರೀತಿ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ವಿಶ್ವನಾಥಪುರ ಪೊಲೀಸ್ ಸ್ಟೇಶನ್ ನ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಘಟನೆಯನ್ನು ಪರಿಶೀಲಿಸುತ್ತಿದ್ದಾರೆ.

Leave A Reply

Your email address will not be published.