ಡ್ರೋನ್ ಪ್ರತಾಪ್, ಈ ವ್ಯಕ್ತಿ ಟ್ರೋಲ್ ಇಂದಲೇ ಹೆಚ್ಚು ಸುದ್ದಿಯಾದವರು. ಒಂದೆರಡು ವರ್ಷಗಳ ಹಿಂದೆ ಡ್ರೋನ್ ಪ್ರತಾಪ್ ಅವರು ತಾವು ಒಂದು ಡ್ರೋನ್ ಕಂಡುಹಿಡಿದಿರುವುದಾಗಿ ಹೇಳಿ ಪ್ರಚಾರ ಪಡೆದುಕೊಂಡಿದ್ದರು. ಬಳಿಕ ಅದೆಲ್ಲ ಸುಳ್ಳು ಎಂದು ಗೊತ್ತಾಗಿ, ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿದ್ದರು. ಈಗಲೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಪ್ರತಾಪ್ ಅವರು ಟ್ರೋಲ್ ಆಗುತ್ತಲೇ ಇರುತ್ತಾರೆ..
ಟ್ರೋಲ್ ಅಂತೂ ತಪ್ಪಿಲ್ಲ, ಆದರೆ ಈಗ ಆ ಒಂದು ಕಾರಣಕ್ಕೆ ಜನರಿಹೇ ಇವರ ಮೇಲಿರುವ ಅಭಿಪ್ರಾಯ ಬದಲಾಗಿ ಡ್ರೋನ್ ಪ್ರತಾಪ್ ರನ್ನು ಇಷ್ಟಪಡುವುದಕ್ಕೆ ಶುರು ಮಾಡಿದ್ದಾರೆ. ನಮಗೆಲ್ಲ ಗೊತ್ತಿರುವ ಪ್ರತಾಪ್ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಇವರಿಗೆ ಸರಿಯಾದ ವೋಟ್ಸ್ ಬರದೆ, ವೇಟಿಂಗ್ ಲಿಸ್ಟ್ ನಲ್ಲಿದ್ದ ಪ್ರತಾಪ್, ಕೊನೆಯಲ್ಲಿ ಬಿಗ್ ಬಾಸ್ ಮನೆಯೊಳಗೆ ಹೋದರು.
ಈಗ ಪ್ರತಾಪ್ ಹಾಗೂ ಇದೇ ರೀತಿ ವೇಟಿಂಗ್ ಲಿಸ್ಟ್ ಇಂದ ಹೋದ 5 ಜನರನ್ನು ಅಸಮರ್ಥರು ಎಂದು ಪರಿಗಣಿಸಲಾಗಿದೆ. ಪ್ರತಾಪ್ ಅವರು ತಮ್ಮನ್ನು ತಾವು ಪ್ರೂವ್ ಮಾಡಿಕೊಳ್ಳಬೇಕಿದೆ. ಇದರ ನಡುವೆ ಮನೆಯ ಬಹುತೇಕ ಸ್ಪರ್ಧಿಗಳು ಪ್ರತಾಪ್ ಅವರನ್ನು ತಮಾಷೆಯ ವಸ್ತುವಿನ ಹಾಗೆ ಕಾಣುತ್ತಿದ್ದಾರೆ ಎಂದರೆ ತಪ್ಪಲ್ಲ. ಪದೇ ಪದೇ ಎಲ್ಲರೂ ಡ್ರೋನ್ ಬಗ್ಗೆಯೇ ಪ್ರಶ್ನೆ ಕೇಳುತ್ತಿದ್ದಾರೆ. ಎಷ್ಟು ಎಕರೆಗೆ ಡ್ರೋನ್ ಮೂಲಕ ಔಷಧಿ ಸಿಂಪಡಿಸುತ್ತೀರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ನಿನ್ನೆಯ ಎಪಿಸೋಡ್ ನಲ್ಲಿ ಪ್ರತಾಪ್ ಅವರನ್ನು ಡೋಂಗಿ ಎಂದು ಕೂಡ ಕರೆಯಲಾಯಿತು. ಮನೆಯಲ್ಲಿ ಇರುವವರು ಡ್ರೋನು ಎಂದು ಕೂಡ ಕರೆಯುತ್ತಿದ್ದಾರೆ. ಆದರೆ ಪ್ರತಾಪ್ ಅವರು ಮಾತ್ರ ತಮ್ಮ ಶಾಂತ ಸೌಮ್ಯ ಸ್ವಭಾವವನ್ನು ಬಿಟ್ಟುಕೊಟ್ಟಿಲ್ಲ. ಯಾರು ಏನೇ ಮಾತನಾಡಿದರು ಕೂಡ, ಸೌಮ್ಯವಾಗಿ ಎದುರಿಸುತ್ತಿದ್ದಾರೆ. ಯಾರ ಮೇಲೂ ತಾಳ್ಮೆ ಕಳೆದುಕೊಂಡು ಮಾತನಾಡುತ್ತಿಲ್ಲ, ಜಗಳಕ್ಕೆ ಹೋಗುತ್ತಿಲ್ಲ.
ತಾವಾಯಿತು ತಮ್ಮ ಪಾಡಾಯಿತು ಎಂದು ಇರುವ ಡ್ರೋನ್ ಪ್ರತಾಪ್, ಮನೆಯವರ ಮಾತಿಗು ಕಾಮ್ ಆಗಿಯೇ ಉತ್ತರ ಕೊಡುತ್ತಿದ್ದಾರೆ. ಪ್ರತಾಪ್ ಅವರ ಈ ವ್ಯಕ್ತಿತ್ವ ಜನರಿಗೆ ಇಷ್ಟವಾಗಿದೆ. ರಾಜಕಾರಣಿಗಳಿಗೆ ಎರಡನೇ ಚಾನ್ಸ್ ಕೊಡುವ ಜನ, ಇಂಥ ವ್ಯಕ್ತಿಗೂ ಮತ್ತೊಂದು ಚಾನ್ಸ್ ಕೊಡಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿನಿಂದ ಡ್ರೋನ್ ಪ್ರತಾಪ್ ಅವರಿಗೆ ಇರುವ ಅಭಿಮಾನಿ ಬಳಗ ಕೂಡ ದೊಡ್ಡದಾಗುತ್ತಿದೆ.