ಇಂತಹ ಒಂದು ಮಹಾಮಂತ್ರ ಸ್ವತಃ ಬ್ರಹ್ಮ ವಿಷ್ಣು ಮಹೇಶ್ವರರು ಜಪಿಸುತ್ತಾರೆ!

0 467

ಈ ಒಂದು ಮಂತ್ರವನ್ನು ಜಪ ಮಾಡುವುದರಿಂದ ಜನಗತ್ತಿನಲ್ಲಿ ಇರುವ ಎಲ್ಲಾ ಸಂಕಟಗಳು ದೂರ ಆಗುತ್ತವೆ. ವ್ಯಕ್ತಿಯು ಮೋಕ್ಷವನ್ನು ಪಡೆದುಕೊಂಡು ಶಿವನಲ್ಲಿ ವಿಲಿನರಾಗುತ್ತಾರೆ. ಸದಾ ಬ್ರಹ್ಮ ವಿಷ್ಣು ಮಹೇಶ್ವರರು ಜಪ ಮಾಡುತ್ತಾರೆ. ಈ ಒಂದು ಮಂತ್ರವನ್ನು ಜಪ ಮಾಡಿದರೆ ಬ್ರಹ್ಮ ವಿಷ್ಣು ಮಹೇಶ್ವರರ ಅದ್ಭುತ ಶಕ್ತಿಗಳು ನಿಮಗೆ ಬರುತ್ತವೆ. ನಿಮ್ಮ ಮನಸ್ಸಿನ ಇಚ್ಛೆ ಕೂಡ ಪೂರ್ಣಗೊಳ್ಳುತ್ತದೆ. ಪಾರ್ವತಿ ದೇವಿ ಶಿವನನ್ನು ಕೇಳುತ್ತಾರೆ ನೀವು ಧ್ಯಾನ ಮಾಡುವಾಗ ಯಾರ ನಾಮವನ್ನು ಜಪ ಮಾಡುತ್ತೀರಿ ಎಂದು ಆಗ ಶಿವನು ರಾಮನ ನಾಮವನ್ನು ಸ್ಮರಣೆ ಮಾಡುತ್ತೇನೆ ಎಂದು ಹೇಳುತ್ತಾರೆ. ಆಗ ಪಾರ್ವತಿ ರಾಮರ ಹತ್ತಿರ ಕೇಳುತ್ತಾರೆ ಅವರು ನಾನು ಶಿವನ ನಾಮವನ್ನು ಸ್ಮರಣೆ ಮಾಡುತ್ತೇನೆ ಎಂದು ಹೇಳುತ್ತಾರೆ.

ಆಗ ಗೊಂದಲದಲ್ಲಿ ಇದ್ದ ಪಾರ್ವತಿ ನೇರವಾಗಿ ವಿಷ್ಣುವನ್ನು ಕೇಳುತ್ತಾರೆ. ಆಗ ವಿಷ್ಣು ನಾನು ಧ್ಯಾನ ಮಾಡುವಾಗ ಬ್ರಹ್ಮ ದೇವರ ನಾಮವನ್ನು ಸ್ಮರಣೆ ಮಾಡುತ್ತೇನೆ ಎಂದು ಹೇಳುತ್ತಾರೆ. ಆಗ ಪಾರ್ವತಿ ಬ್ರಹ್ಮ ದೇವರನ್ನು ಪ್ರೆಶ್ನೆ ಮಾಡುತ್ತಾರೆ ಆಗ ಬ್ರಹ್ಮ ದೇವರು ನಾನು ಶಿವನ ನಾಮ ಸ್ಮರಣೆ ಮಾಡುತ್ತೇನೆ ಎಂದು ಹೇಳುತ್ತಾರೆ. ಇದನ್ನು ಕೇಳಿ ಮತ್ತೆ ಗೊಂದಲಕ್ಕೆ ಒಳಗಾಗುತ್ತಾರೆ ಪಾರ್ವತಿ ದೇವಿ. ಇಂತಹ ಸಮಯದಲ್ಲಿ ಶಿವನು ಪಾರ್ವತಿ ದೇವಿಗೆ ನನ್ನ ಮಾತುಗಳನ್ನು ಗಮನದಲ್ಲಿಟ್ಟು ಕೇಳು.

ಹೇ ದೇವಿ ಇಲ್ಲಿ ನಾವು ರಾಮ ಕೃಷ್ಣ ಬ್ರಹ್ಮ ದೇವರನ್ನು ಜಪ ಮಾಡುವುದಿಲ್ಲ. ನಾವೆಲ್ಲರೂ ಒಂದೇ ಮಹಾ ಮಂತ್ರವನ್ನು ಜಪ ಮಾಡುತ್ತೇವೆ. ಈ ಮಹಾ ಮಂತ್ರದಿಂದ ಇಡೀ ಸೃಷ್ಟಿ ರಚನೆಯಾಗಿದೆ. ಈ ಮಂತ್ರವನ್ನು ಶ್ವಾಸಯಿಂದ ಮಾಡಬೇಕು. ಸ್ವಾ ಎನ್ನುವ ಶಬ್ಧ ನೀವು ಶ್ವಾಸ ತೆಗೆದುಕೊಳ್ಳುವಾಗ ಬರುತ್ತದೆ ಮತ್ತು ಶ್ವಾಸ ಬಿಡುವಾಗ ಹಂ ಎನ್ನುವ ಶಬ್ಧ ಬರುತ್ತದೆ. ಇದಕ್ಕಿಂತ ದೊಡ್ಡ ಮಂತ್ರ ಮತ್ ಯಾವುದು ಇಲ್ಲಾ. ಇದನ್ನು ನೀವು ರಾಮ ನಾಮ ಎಂದು ನೀವು ಕರೆಯಬಹುದು ಮತ್ತು ಸ್ವಹಂ ಅಂತನು ನೀವು ಕರೆಯಬಹುದು. ಇದೆ ಮಂತ್ರವನ್ನು ಬ್ರಹ್ಮ ವಿಷ್ಣು ಮಹೇಶ್ವರರು ಜಪ ಮಾಡುತ್ತಾರೆ.

Leave A Reply

Your email address will not be published.