Bigg Boss: ಬಿಗ್ ಬಾಸ್ ಕನ್ನಡ ಸೀಸನ್ 10ರ ನಾಲ್ಕನೇ ವಾರದ ಕಿಚ್ಚನ ಪಂಚಾಯ್ತಿ ನಿನ್ನೆಯಷ್ಟೇ ನಡೆದಿದ್ದು, ಈ ವರೆಗಿನ ಅತ್ಯಂತ ಪವರ್ ಫುಲ್ ಆದ ಕಿಚ್ಚನ ಪಂಚಾಯಿತಿ ಇದು ಎಂದರೆ ತಪ್ಪಲ್ಲ. ಕರ್ನಾಟಕದ ಜನತೆ, ಬಿಗ್ ಬಾಸ್ ಶೋ ವೀಕ್ಷಕರು ಈ ಪಂಚಾಯ್ತಿ ಎಪಿಸೋಡ್ ನೋಡಲು ಕಾಯುತ್ತಿದ್ದರು, ಈ ವಾರ ಸುದೀಪ್ ಅವರು ವಿನಯ್ ಅಂಡ್ ಗ್ಯಾಂಗ್ ಗೆ ಹೇಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎನ್ನುವ ನಿರೀಕ್ಷೆ ಕುತೂಹಲ ಜನರಲ್ಲಿ ಹೆಚ್ಚಾಗಿಯೇ ಇತ್ತು.
ಅದೇ ರೀತಿ ನಿನ್ನೆಯ ಎಪಿಸೋಡ್ ನಲ್ಲಿ ಖಡಕ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ ಕಿಚ್ಚ. ವಿನಯ್, ನಮ್ರತಾ, ಸ್ನೇಹಿತ್, ತುಕಾಲಿ ಸೇರಿದಂತೆ, ವಿನಯ್ ಅವರ ಇಡೀ ಗ್ಯಾಂಗ್ ಗೆ ಕಿಚ್ಚನಿಂದ ಮಂಗಳಾರತಿ ಆಗಿದೆ. ಸುದೀಪ್ ಅವರು ಮನೆಯಲ್ಲಿ ನಡೆಡ್ ಪ್ರತಿ ವಿಚಾರ, ಗುಂಪುಗಾರಿಕೆ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆಯೂ ಮಾತನಾಡಿ, ವಿನಯ್ ಅಂಡ್ ಗ್ಯಾಂಗ್ ಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರೆ ತಪ್ಪಲ್ಲ.
ವಿನಯ್ ಅವರು ತಾವೇ ಆನೆ ಎಂದು ಮೆರೆಯುತ್ತಿದ್ದರು, ಮನೆಯಲ್ಲಿ ವಿನಯ್ ಗ್ಯಾಂಗ್ ನ ಸದಸ್ಯರು ಕೂಡ ವಿನಯ್ ನಾಯಕ ಎನ್ನುವ ಹಾಗೆ ಒಪ್ಪಿಕೊಂಡುಬಿಟ್ಟಿದ್ದರು. ಆದರೆ ಸುದೀಪ್ ಅವರು ನಿನ್ನೆಯ ಎಪಿಸೋಡ್ ನಲ್ಲಿ ವಿನಯ್ ಬಾಯಲ್ಲೇ ತಾವು ಜೋಕರ್ ಎಂದು ಒಪ್ಪಿಕೊಳ್ಳುವ ಹಾಗೆ ಮಾಡಿದ್ದಾರೆ. ಭಾಗ್ಯಶ್ರೀ ಅವರ ವಿಚಾರಕ್ಕೆ ಈ ರೀತಿ ಹೇಳಬೇಕಾಯ್ತು ವಿನಯ್. ಭಾಗ್ಯಶ್ರೀ ಅವರು ಸ್ನೇಹಿತ್ ಅವರನ್ನು ನಾಮಿನೇಟ್ ಮಾಡಿದ್ದಕ್ಕೆ ಕೊಟ್ಟ ಕಾರಣ ಸರಿಯಿಲ್ಲ ಎಂದು ತುಕಾಲಿ ಸಂತೋಷ್ ಮತ್ತು ವಿನಯ್ ಪದೇ ಪದೇ ಅವರಿಗೆ ಚುಚ್ಚು ಮಾತುಗಳನ್ನಾಡಿದ್ದರು.
ಈ ವಿಷಯ ತೆಗೆದ ಸುದೀಪ್ ಅವರು ಮನೆಯಲ್ಲಿ ಎಲ್ಲರಿಗೂ ನಾಮಿನೇಟ್ ಮಾಡುವ ಅಧಿಕಾರ ಇದೆ, ಅವರದ್ದೇ ಆದ ಕಾರಣ ಕೊಡುವ ಸ್ವಾತಂತ್ರ್ಯ ಇದೆ ಅದರ ಪ್ರಶ್ನೆ ಮಾಡಿ, ಚರ್ಚೆ ಮಾಡಬಹುದು, ಆದರೆ ಪದೇ ಪದೇ ಚುಚ್ಚು ಮಾತಾಡೋದು ಹೇಗೆ ಸರಿ ಎಂದು ಇಬ್ಬರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ ಕಿಚ್ಚ. ಭಾಗ್ಯಶ್ರೀ ಅವರು ನಾಮಿನೇಟ್ ಮಾಡಿದ್ದು ಸ್ನೇಹಿತ್ ಅವರನ್ನ, ಆತನೇ ತಲೆಕೆಡಿಸಿಕೊಳ್ಳದೆ ಇದ್ದಾಗ, ನೀವು ಅಷ್ಟೆಲ್ಲಾ ಹರ್ಟ್ ಮಾಡುವ ಅಗತ್ಯವಿತ್ತ ಎಂದು ಪ್ರಶ್ನಿಸಿದ್ದಾರೆ..
ಇವರಿಬ್ಬರು ಪದೇ ಪದೇ ಭಾಗ್ಯಶ್ರೀ ಅವರೊಡನೆ ಮಾತನಾಡಿ, ನೋಯಿಸುವ ಮಾತುಗಳನ್ನಾಡುವಾಗ, ಸ್ನೇಹಿತ್ ಅವರು ಅಡುಗೆ ಮನೆಯಲ್ಲಿ ನಾನೇ ಪ್ರಶ್ನೆ ಮಾಡಿಲ್ಲ ಸುಮ್ಮನೆ ಇದ್ದೀನಿ, ಇವರಿಗೆ ಯಾಕೆ ಬೇಕಿತ್ತು ಎಂದು ಹೇಳಿದ್ದು, ಆ ವಿಚಾರ ತಿಳಿಸಿದ ಸುದೀಪ್ ಅವರು ಸ್ನೇಹಿತ್ ಈ ಥರ ಹೇಳಿದಾಗ ನೀವಿಬ್ಬರೂ ಹೊರಗಡೆ ಹೇಗೆ ಕಾಣಿಸುತ್ತೀರಾ ಎಂದು ಪ್ರಶ್ನೆ ಮಾಡಿದರು, ಆಗ ವಿನಯ್ ಜೋಕರ್ ಗಳ ಕಾಣಿಸಿರುತ್ತೀವಿ ಎಂದು ಹೇಳುತ್ತಾರೆ.
ಈ ರೀತಿಯಲ್ಲಿ ಕಿಚ್ಚ ಸುದೀಪ್ ಅವರು ಆನೆ ಎಂದಿದ್ದ ವಿನಯ್ ಬಾಯಲ್ಲೇ ತಾವು ಜೋಕರ್ ಎನ್ನುವ ಹಾಗೆ ಮಾಡಿದ್ದಕ್ಕೆ ಜನರಿಂದ ಕಿಚ್ಚ ಸುದೀಪ್ ಅವರ ಬಗ್ಗೆ ವಿಶೇಷವಾದ ಮೆಚ್ಚುಗೆ ವ್ಯಕ್ತವಾಗಿದೆ. ನೆಟ್ಟಿಗರು ಇದರಿಂದ ಸಂತೋಷವಾಗಿದ್ದು, ಸುದೀಪ್ ಅವರಿಂದ ನಾವು ಇದನ್ನೇ ನಿರೀಕ್ಷೆ ಮಾಡಿದ್ದೆವು, ನಿರೀಕ್ಷೆಗೂ ಮೀರಿ ಕಿಚ್ಚ ವಿನಯ್ ನ ರೋಸ್ಟ್ ಮಾಡಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು