Aamir Khan: ಬಾಲಿವುಡ್ ನಲ್ಲಿ ಹೆಚ್ಚು ಹೆಸರು ಮಾಡಿರುವ ನಟರಲ್ಲಿ ಆಮೀರ್ ಖಾನ್ ಅವರು ಕೂಡ ಒಬ್ಬರು. ಯಾವಾಗಲೂ ವಿಭಿನ್ನವಾದ ಸಿನಿಮಾಗಳ ಮೂಲಕ ಸುದ್ದಿಯಾಗುವ ಆಮೀರ್ ಖಾನ್ ಅವರು ಹೆಚ್ಚಾಗಿ ಪ್ರಯೋಗಾತ್ಮಕ ಸಿನಿಮಾಗಳಲ್ಲೇ ನಟಿಸುತ್ತಾರೆ. ಇದೀಗ ಆಮೀರ್ ಖಾನ್ ಅವರು ಚಿಕ್ಕ ವಯಸ್ಸಿನ ಹುಡುಗಿಯನ್ನು ಡೇಟಿಂಗ್ ಮಾಡುತ್ತಿರುವ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ಆಮೀರ್ ಖಾನ್ ಅವರು ಇತ್ತೀಚೆಗೆ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಅಂದುಕೊಂಡ ಮಟ್ಟಕ್ಕೆ ಹೆಸರು ಮಾಡಲಿಲ್ಲ. ಹಾಗೆಯೇ ಆಮೀರ್ ಖಾನ್ ಅವರು ವೈಯಕ್ತಿಕ ಜೀವನದ ವಿಚಾರಗಳಿಗೂ ಹೆಚ್ಚು ಸುದ್ದಿಯಾಗುತ್ತಾರೆ. ಇದೀಗ ಮದುವೆ ಕಾರಣಕ್ಕೆ ಸುದ್ದಿಯಾಗಿದ್ದಾರೆ ನಟ ಅಮೀರ್ ಖಾನ್. ಇತ್ತೀಚೆಗೆ ಆಮೀರ್ ಖಾನ್ ಅವರು ಪತ್ನಿಗೆ ವಿಚ್ಛೇದನ ನೀಡಿದರು..
ಇದಾದ ಬಳಿಕ ತಮಗಿಂತ ತುಂಬಾ ಚಿಕ್ಕ ವಯಸ್ಸಿನ ಹುಡುಗಿಯ ಜೊತೆಗೆ ಮದುವೆಯಾಗುತ್ತಾರೆ ಎಂದು ಸುದ್ದಿಯಾಗಿದೆ. ಆ ನಟಿ ಮತ್ಯಾರು ಅಲ್ಲ, ಫಾತಿಮಾ ಸನಾ ಖಾನ್ ಅವರೊಡನೆ ಮದುವೆಯಾಗುತ್ತಾರೆ ಎಂದು ಮಾಹಿತಿ ಸಿಕ್ಕಿದೆ. ಇವರಿಬ್ಬರು ಕ್ಕೊದ ದಂಗಾಲ್ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಆಮೀರ್ ಖಾನ್ ಅವರ ಮಗಳ ಪಾತ್ರದಲ್ಲಿ ನಟಿಸಿದ್ದಾ ಹುಡುಗಿ ಸನಾ ಫಾತಿಮಾ.
ಇದೀಗ ಇವರಿಬ್ಬರು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರ ತಿಳಿಸಿರುವುದು ಬಾಲಿವುಡ್ ನ ಖ್ಯಾತ ವಿಮರ್ಶಕರಾಗಿ ಹೆಸರು ಮಾಡಿರುವ ಕಮಾಲ್ ಆರ್ ಖಾನ್ ಅವರು. ಇವರು ಬಾಲಿವುಡ್ ನ ಹಲವು ಗಾಸಿಪ್ ಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಇದೀಗ ಆಮೀರ್ ಖಾನ್ ಅವರ ಬಗ್ಗೆ ಕೂಡ ಶೀಘ್ರದಲ್ಲೇ ಸನಾ ಖಾನ್ ಅವರೊಡನೆ ಮದುವೆಯಾಗುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ..
ಆದರೆ ಈ ವಿಷಯ ನಿಜವೋ ಸುಳ್ಳೋ ಎಂದು ಗೊತ್ತಿಲ್ಲ. ಒಟ್ಟಿನಲ್ಲಿ ಇವರಿಬ್ಬರು ಲವ್ ಮಾಡುತ್ತಿದ್ದಾರೆ, ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೂಡ ಸುದ್ದಿಗಳು ಹರಿದಾಡುತ್ತಿದೆ. ಆದರೆ ಇದರಲ್ಲಿ ಎಷ್ಟು ನಿಜಾಂಶ ಇದೆ ಎಂದು ಆಮೀರ್ ಖಾನ್ ಅವರು ಕೂಡ ಅಧೀಕೃತವಾಗಿ ಹೇಳಿಕೆ ನೀಡಿಲ್ಲ. ಹಾಗಾಗಿ ಇದು ನಿಜವೋ ಸುಳ್ಳೋ ಎನ್ನುವುದು ಗೊತ್ತಾಗಿಲ್ಲ.