Priya: ಗಟ್ಟಿಮೇಳ ಧಾರವಾಹಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಪ್ರಿಯಾ ಜೆ ಆಚಾರ್? ಅದಿತಿ ಪಾತ್ರದಿಂದ ಹೊರಬಂದ್ರ?

Written by Pooja Siddaraj

Published on:

Priya: ಜೀಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಹಿಟ್ ಧಾರವಾಹಿಗಳಲ್ಲಿ ಒಂದು ಗಟ್ಟಿಮೇಳ. ಈ ಧಾರವಾಹಿ ಈಗಲೂ ಕೂಡ ಟಿಆರ್ಪಿ ಲಿಸ್ಟ್ ನಲ್ಲಿ ಟಾಪ್ ನಲ್ಲಿಯೇ ಇರುತ್ತದೆ. ಪ್ರತಿವಾರ ಅತ್ಯುತ್ತಮವಾದ ರೇಟಿಂಗ್ ಪಡೆದುಕೊಳ್ಳುತ್ತಿದೆ. ನಾಯಕ ವೇದ್ ಮತ್ತು ಅಮೂಲ್ಯ ಜೋಡಿ ಅಂದರೆ ಎಲ್ಲರ ಫೇವರೆಟ್ ಎಂದರೆ ತಪ್ಪಲ್ಲ. ಈ ಧಾರವಾಹಿಯ ಎಲ್ಲಾ ಪಾತ್ರಗಳು ಜನರಿಗೆ ತುಂಬಾ ಇಷ್ಟ ಎಂದು ಹೇಳಬಹುದು.

ನಾಯಕಿ ಅಮೂಲ್ಯ ಮಾತ್ರವಲ್ಲ, ಅಮೂಲ್ಯ ತಂಗಿ ಅದಿತಿ ಪಾತ್ರವನ್ನು ಕೂಡ ಜನರು ಅಷ್ಟೇ ಇಷ್ಟಪಟ್ಟಿದ್ದಾರೆ. ಆದರೆ ಅದಿತಿ ಪಾತ್ರದಲ್ಲಿ ನಟಿಸುತ್ತಿರುವ ಪ್ರಿಯಾ ಜೆ ಆಚಾರ್ ಅವರು ಇತ್ತೀಚೆಗೆ ಧಾರವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವುದೇ ಕಡಿಮೆ ಆಗಿದೆ. ಇನ್ಮುಂದೆ ಪ್ರಿಯಾ ಅವರು ಧಾರವಾಹಿಯಲ್ಲಿ ನಟಿಸುತ್ತಾರೋ ಇಲ್ಲವೋ ಎನ್ನುವ ಪ್ರಶ್ನೆ ಕೂಡ ಶುರುವಾಗಿದೆ? ಹಾಗಿದ್ರೆ ಪ್ರಿಯಾ ಅವರು ಧಾರವಾಹಿ ಇಂದ ಹೊರಬರುತ್ತಾರಾ?

ಈ ಪ್ರಶ್ನೆಗೆ ಖುದ್ದು ಪ್ರಿಯಾ ಅವರೇ ಉತ್ತರ ಕೊಟ್ಟಿದ್ದಾರೆ. ಗಟ್ಟಿಮೇಳ ಧಾರಾವಾಹಿಯ ಅದಿತಿ ಪಾತ್ರದಲ್ಲಿ ನಟಿಸುತ್ತಿರುವ ಪ್ರಿಯಾ ಅವರು ಈಗ ಸ್ಟಾರ್ ಸುವರ್ಣ ವಾಹಿನಿಯ ಕಾವೇರಿ ಕನ್ನಡ ಮೀಡಿಯಂ ಧಾರವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಕಾರಣಕ್ಕೆ ಪ್ರಿಯಾ ಅವರು ಗಟ್ಟಿಮೇಳ ಧಾರವಾಹಿಯಲ್ಲಿ ನಟಿಸುತ್ತಿಲ್ಲ, ಹೊರಬಂದಿದ್ದಾರಾ ಎನ್ನುವ ಪ್ರಶ್ನೆ ಶುರುವಾಗಿತ್ತು. ಏಕೆಂದರೆ ಇವರ ದೃಶ್ಯಗಳೇ ಹೆಚ್ಚಾಗಿ ಬರುತ್ತಿಲ್ಲ.

ಧಾರವಾಹಿಯಲ್ಲಿ ಅದಿತಿ ಗಂಡ ಧ್ರುವನ ದೃಶ್ಯ ಹೆಚ್ಚಾಗಿ ಬರುತ್ತಿದೆ. ಆದರೆ ಅದಿತಿ ಬರುತ್ತಿಲ್ಲ. ಈ ಬಗ್ಗೆ ಖುದ್ದು ಪ್ರಿಯಾ ಅವರು ಮಾತನಾಡಿದ್ದು, ಗಟ್ಟಿಮೇಳ ಧಾರವಾಹಿಯ ಅದಿತಿ ಪಾತ್ರ ನನಗೆ ತುಂಬಾ ಇಷ್ಟ, ಆ ಪಾತ್ರ ನನ್ನ ಕೆರಿಯರ್ ಸಪೋರ್ಟ್ ಕೊಟ್ಟಿದೆ, ನನ್ನ ಕೆರಿಯರ್ ಶುರುವಾಗಿದ್ದೆ ಆ ಪಾತ್ರದಿಂದ ಎಂದು ಹೇಳಿದ್ದಾರೆ ಪ್ರಿಯಾ. ಹಾಗೆಯೇ ಗಟ್ಟಿಮೇಳ ಧಾರವಾಹಿಯ ಕಲಾವಿದರಿಗೆ ಬಹಳ ಸಂತೋಷವಿದೆ, ಅವರು ಕಾವೇರಮ್ಮ ಅಂತ ಕರೀತಾರೆ ಎಂದಿದ್ದಾರೆ..

ಅವರೆಲ್ಲರ ಸಪೋರ್ಟ್ ಇರೋದ್ರಿಂದ ಸಂತೋಷವಿದೆ, ಹಾಗೆಯೇ ಗಟ್ಟಿಮೇಳ ಧಾರವಾಹಿಯಲ್ಲಿ ಅದಿತಿ ಆಗಿ ಮುಂದುವರೆಯುತ್ತೇನೆ ಎಂದಿದ್ದಾರೆ ಪ್ರಿಯಾ ಜೆ ಆಚಾರ್. ಇತ್ತೀಚೆಗೆ ಮದುವೆ ಆಗಿರುವ ಪ್ರಿಯಾ ಅವರು ಗಂಡನ ಜೊತೆಗೆ ಮತ್ತು ಅತ್ತೆ ಮನೆಯಲ್ಲಿ ತುಂಬಾ ಸಂತೋಷವಾಗಿ ಇರುವುದಾಗಿ ಹೇಳಿದ್ದಾರೆ. ಅತ್ತೆ ಮತ್ತು ಗಂಡನ ಸಪೋರ್ಟ್ ಇಂದಲೇ ಎಲ್ಲವೂ ಸಾಧ್ಯವಾಗುತ್ತಿದೆ ಎಂದಿದ್ದಾರೆ ಪ್ರಿಯಾ ಜೆ ಆಚಾರ್.

Leave a Comment