Horoscope: ಮುಂದಿನ ವರ್ಷ 2024ರಲ್ಲಿ ಶನಿದೇವರು ತನ್ನದೇ ಆದ ಕುಂಭ ರಾಶಿಯಲ್ಲಿ ನೇರನಡೆ ಬದಲಾವಣೆ ಮಾಡಿ ಚಲಿಸಲಿದ್ದಾನೆ. ಇದರಿಂದ ಕೆಲವು ರಾಶಿಗಳಿಗೆ ಆರ್ಥಿಕವಾಗಿ ಹೆಚ್ಚು ಅನುಕೂಲವಾಗಲಿದೆ. ಮುಂದಿನ ವರ್ಷ ಶನಿದೇವನು ಹಿಮ್ಮುಖವಾಗಿ ಮತ್ತು ನೇರವಾಗಿ ಎರಡು ರೀತಿಯಲ್ಲಿ ಚಲಿಸಲಿದ್ದಾನೆ. ಶನಿದೇವರು 2024ರ ಜೂನ್ 29ರಿಂದ ನವೆಂಬರ್ 15ರವರೆಗು ಹಿಮ್ಮುಖ ಚಲನೆಯಲ್ಲಿ ಇರಲಿದ್ದಾನೆ. 2024ರ ಫೆಬ್ರವರಿ 11 ರಿಂದ ಮಾರ್ಚ್ 18ರವರೆಗು ಶನಿದೇವರ ಉದಯವಾಗಲಿದೆ. ಈ ವೇಳೆ ಶನಿದೇವರು ಕೆಲವು ರಾಶಿಗಳಿಗೆ ಶುಭಫಲ ನೀಡಲಿದ್ದಾನೆ.
ವೃಷಭ ರಾಶಿ :- ಶನಿದೇವರ ಸ್ಥಾನ ಬದಲಾವಣೆ ಇಂದ ಈ ರಾಶಿಗೆ ಹೆಚ್ಚಿನ ಅನುಕೂಲ ಸಿಗಲಿದೆ. ಆದಾಯ ಜಾಸ್ತಿಯಾಗುವ ಸಾಧ್ಯತೆ ಇದೆ, ಏಳಿಗೆ ಕೂಡ ಹೆಚ್ಚಾಗಿ ಕಾಣಿಸಿಕೊಳ್ಳಲಿದೆ. ಈ ವೇಳೆ ವೃಷಭ ರಾಶಿಯವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ಜೊತೆಗೆ ಬ್ಯುಸಿನೆಸ್ ನಲ್ಲೂ ಏಳಿಗೆ ಕಾಣುತ್ತೀರಿ.
ತುಲಾ ರಾಶಿ :- ಇವರಿಗೆ ಶನಿದೇವರಿಂದ ಮಂಗಳಕರ ಫಲಿತಾಂಶ ಸಿಗುತ್ತದೆ. ಎಲ್ಲಾ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ಬ್ಯುಸಿನೆಸ್ ಮಾಡುವವರ ಕೆಲಸ ಚೆನ್ನಾಗಿ ಸಾಗುತ್ತದೆ. 2024ರಲ್ಲಿ ನೀವು ವಿದೇಶ್ನಕ್ಕೆ ಹೋಗಬಹುದು. ಶನಿದೇವರ ಉದಯ ನಿಮಗೆ ಬದುಕಲ್ಲಿ ಒಳ್ಳೆಯ ಸ್ಥಾನ ಮತ್ತು ಸಮಾಜದಲ್ಲಿ ಗೌರವ ತಂದುಕೊಡುತ್ತದೆ.
ಧನು ರಾಶಿ :- ಶನಿದೇವರ ಕೃಪೆಯಿಂದ ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶ ಸಿಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಬದುಕಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಮುಂಬರುವ ವರ್ಷ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಉದ್ಯೋಗದಲ್ಲಿ ಪ್ರಗತಿ ಇರುತ್ತದೆ.