Horoscope: ಇದೀಗ ಸೂರ್ಯದೇವ ಸ್ಥಾನ ಬದಲಾವಣೆ ಮಾಡುವ ಸಮಯ, ಸೂರ್ಯದೇವನು ಈಗ ಕನ್ಯಾ ರಾಶಿಯಿಂದ ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ, ಆಕ್ಟೊಬರ್ 24ರಂದು ಅಂದರೆ ನಾಳೆ ಸ್ವಾತಿ ನಕ್ಷತ್ರಕ್ಕೆ, ಜೊತೆಗೆ ನವೆಂಬರ್ 7ರಂದು ವಿಶಾಖ ನಕ್ಷತ್ರಕ್ಕೆ, ಬಳಿಕ ನವೆಂಬರ್ 17ರಂದು ವೃಶ್ಚಿಕ ರಾಶಿಯ ಕಡೆಗೆ ಚಲಿಸುತ್ತದೆ. ಈ ಬದಲಾವಣೆಗಳಿಂದ ಅದೃಷ್ಟ ಪಡೆಯುವ 5 ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮಿಥುನ ರಾಶಿ :- ಸೂರ್ಯನ ಸ್ಥಾನ ಬದಲಾವಣೆ ಇವರ ಉದ್ಯೋಗ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುವ ಹಾಗೆ ಮಾಡುತ್ತದೆ. ಈ ವೇಳೆ ನಿಮಗೆ ನಿರೀಕ್ಷಿಸದಷ್ಟು ದೊಡ್ಡ ಅವಕಾಶ ಸಿಗುತ್ತದೆ. ಹೊಸ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಈಗ ಒಳ್ಳೆಯ ಕೆಲಸ ಸಿಗುತ್ತದೆ. ಹೆಚ್ಚಿನ ಓದಿಗಾಗಿ ದೊಡ್ಡ ಶಿಕ್ಷಣ ಸಂಸ್ಥೆಯಲ್ಲಿ ಅಡ್ಮಿಷನ್ ಸಿಗುತ್ತದೆ. ಸಂಗಾತಿಯ ಜೊತೆಗಿನ ಸಂಬಂಧ ಚೆನ್ನಾಗಿರುತ್ತದೆ.
ಕರ್ಕಾಟಕ ರಾಶಿ :- ಸೂರ್ಯನ ಸ್ಥಾನ ಬದಲಾವಣೆ ಹಣಕಾಸಿನ ವಿಚಾರದಲ್ಲಿ ನಿಮಗೆ ಒಳ್ಳೆಯದನ್ನು ಮಾಡುತ್ತದೆ. ಈ ವೇಳೆ ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಅರ್ಧಕ್ಕೆ ಸಿಕ್ಕಿಹಾಕಿಕೊಂಡಿದ್ದ ಹಣ ನಿಮಗೆ ವಾಪಸ್ ಸಿಗುತ್ತದೆ. ಮನೆಯವರ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತೀರಿ. ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ.
ತುಲಾ ರಾಶಿ : – ಸೂರ್ಯದೇವ ಈ ರಾಶಿಯಲ್ಲಿ ಚಲಿಸುವ ಕಾರಣ ನಿಮಗೆ ಎಲ್ಲವೂ ಒಳ್ಳೆಯದಾಗುತ್ತದೆ. ಈ ವೇಳೆ ನೀವು ದೊಡ್ಡ ಕೆಲಸಗಳನ್ನು ಪೂರ್ತಿ ಮಾಡುತ್ತೀರಿ. ಬದುಕಿನಲ್ಲಿ ನಿಮ್ಮ ಸಂತೋಷ ದುಪ್ಪಟ್ಟು ಆಗುತ್ತದೆ.
ಧನು ರಾಶಿ :- ಸೂರ್ಯದೇವನ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಉದ್ಯೋಗ ಮತ್ತು ಹಣಕಾಸು ಎರಡರಲ್ಲೂ ಏಳಿಗೆ ಕಾಣುತ್ತೀರಿ. ಈ ವೇಳೆ ದೊಡ್ಡ ಮಟ್ಟಕ್ಕೆ ಬೆಳೆಯುತ್ತೀರಿ. ಈ ವೇಳೆ ಹೊಸ ಕೆಲಸ ಸಿಗುತ್ತದೆ, ಮನೆಯವರ ಜೊತೆಗೆ ಸಂತೋಷದ ಸಮಯ ಕಳೆಯುವ ಅವಕಾಶ ಸಿಗುತ್ತದೆ.
ಮೀನ ರಾಶಿ :- ಸೂರ್ಯದೇವನ ಸ್ಥಾನ ಬದಲಾವಣೆ ನಿಮಗೆ ನಿನಗೆ ವರ ಇದ್ದ ಹಾಗೆ ಎಂದು ಹೇಳಬಹುದು. ಈ ವೇಳೆ ಎಲ್ಲರ ಸಪೋರ್ಟ್ ನಿಮಗೆ ಸಿಗುತ್ತದೆ. ಉದ್ಯೋಗದಲ್ಲಿ ಯಶಸ್ಸು ಕಾಣುತ್ತೀರಿ. ಆಸ್ತಿಯಲ್ಲಿ ಹೂಡಿಕೆ ಮಾಡಲು ಇದು ಸರಿಯಾದ ಸಮಯ. ಮನೆಯವರ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತೀರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಏಳಿಗೆ ಇರುತ್ತದೆ.