Varthur Santhosh: ಬಿಗ್ ಬಾಸ್ ಮನೆಯಿಂದ ವರ್ತೂರ್ ಸಂತೋಷ್ ಅರೆಸ್ಟ್!

0 22

Varthur Santhosh: ಬಿಗ್ ಬಾಸ್ ಮನೆಗೆ ಎರಡು ವಾರಗಳ ಹಿಂದೆ ಸ್ಪರ್ಧಿಯಾಗಿ ಬಂದವರು ವರ್ತೂರ್ ಸಂತೋಷ್. ಎರಡು ವಾರಗಳಿಂದ ತಮ್ಮದೇ ಶೈಲಿಯಲ್ಲಿ ಆಡುತ್ತಾ ಹೋಗುತ್ತಿದ್ದಾರೆ. ಈ ವಾರ ವೀಕೆಂಡ್ ಎಪಿಸೋಡ್ ನಲ್ಲಿ ಸುದೀಪ್ ಅವರು ವಾರ್ತೆ ಸಂತೋಷ್ ಎಂದು ಹೆಸರು ಕೊಟ್ಟು ತಮಾಷೆ ಕೂಡ ಮಾಡಿದ್ದರು. ಆದರೆ ನಿನ್ನೆ ಮಧ್ಯರಾತ್ರಿ ವರ್ತೂರ್ ಸಂತೋಷ್ ಅವರು ಅರೆಸ್ಟ್ ಆಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.

ವರ್ತೂರ್ ಸಂತೋಷ್ ಅವರನ್ನು ಫಾರೆಸ್ಟ್ ಡಿಪಾರ್ಟ್ಮೆಂಟ್ ಆಫೀಸರ್ ಗಳು ಬಿಗ್ ಬಾಸ್ ಮನೆಗೆ ಹೋಗಿ ಅರೆಸ್ಟ್ ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಅಧಿಕಾರಿಗಳು ಸಂತೋಷ್ ಅವರನ್ನು ಅರೆಸ್ಟ್ ಮಾಡಿರುವುದು ಅವರು ಹುಲಿ ಉಗುರು ಇರುವ ಪೆಂಡೆಂಟ್ ಧರಿಸಿದ್ದಾರೆ ಎನ್ನುವ ಕಾರಣಕ್ಕಾಗಿ. ವರ್ತೂರ್ ಸಂತೋಷ್ ಅವರನ್ನು ಈ ಕಾರಣಕ್ಕೆ ಅರೆಸ್ಟ್ ಮಾಡಿದ್ದಾರೆ ಎನ್ನಲಾಗಿದೆ.

ಅರಣ್ಯ ಇಲಾಖೆಯ ನಿಯಮಗಳ ಪ್ರಕಾರ, ಪ್ರಾಣಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಬಳಸುವ ಹಾಗಿಲ್ಲ, ಈ ಕಾರಣಕ್ಕೆ ಹುಲಿಯ ಉಗುರು ಅಥವಾ ಪ್ರಾಣಿಗಳಿಗೆ ಸಂಬಂಧಿಸಿದ ಹಾಗೆ ಇನ್ಯಾವುದೇ ವಸ್ತುಗಳನ್ನು ಸಹ ಬಳಸುವ ಹಾಗಿಲ್ಲ. ಈ ಕಾರಣಕ್ಕೆ ವರ್ತೂರ್ ಸಂತೋಷ್ ಅವರನ್ನು ಅರೆಸ್ಟ್ ಮಾಡಲಾಗಿದೆ. ರಾತ್ರೋರಾತ್ರಿ ಅಧಿಕಾರಿಗಳು ಬಿಗ್ ಬಾಸ್ ಮನೆಗೆ ಹೋಗಿ ಅರೆಸ್ಟ್ ಮಾಡಿದ್ದಾರೆ.

ಒಬ್ಬ ವ್ಯವಸಾಯಿ ಎನ್ನುವುದರ ಜೊತೆಗೆ, ಸೋಷಿಯಲ್ ಮೀಡಿಯಾ ಮೂಲಕ ವರ್ತುರ್ ಸಂತೋಷ್ ಅವರು ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಹಳ್ಳಿಕಾರ್ ಎನ್ನುವ ಹಸುವಿನ ತಳಿಯ ಬಗ್ಗೆ ತಿಳಿಸಬೇಕು ಎಂದು ಹೇಳುತ್ತಿದ್ದರು. ಆದರೆ ಬಿಗ್ ಬಾಸ್ ಮನೆಯಿಂದ ಅವರು ಅರೆಸ್ಟ್ ಆಗಿದ್ದಾರೆ ಎಂದು ಇದೀಗ ಮಾಹಿತಿ ಸಿಕ್ಕಿದೆ.

Leave A Reply

Your email address will not be published.