Sreeleela: ತೆಲುಗಿನ ಬಿಗ್ ಸ್ಟಾರ್ ಫ್ಯಾಮಿಲಿ ಸೊಸೆ ಆಗ್ತಾರಾ ಶ್ರೀಲೀಲಾ? ಹೊಸ ಸುದ್ದಿ ವೈರಲ್

0 48

Sreeleela: ಬೆಂಗಳೂರಿನ ಹುಡುಗಿ ನಟಿ ಶ್ರೀಲೀಲಾ ಇಂದು ತೆಲುಗು ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ನಟಿ. ತೆಲುಗಿನ ಎಲ್ಲಾ ಸ್ಟಾರ್ ಹೀರೋ ಗಳ ಸಿನಿಮಾದಲ್ಲಿ ನಟಿಸುವ ಅವಕಾಶ ಶ್ರೀಲೀಲಾ ಅವರಿಗೆ ಸಿಗುತ್ತಿದೆ. ಕೈಯಲ್ಲಿ 8 ರಿಂದ 10 ಸಿನಿಮಾಗಳನ್ನು ಹೊಂದಿರುವ ಶ್ರೀಲೀಲಾ ಬ್ಯುಸಿ ಆಗಿದ್ದಾರೆ. ಸಿನಿಮಾ ವಿಚಾರಕ್ಕೆ ಹೆಚ್ಚಾಗಿ ಸುದ್ದಿಯಾಗುತ್ತಿದ್ದ ನಟಿ ಶ್ರೀಲೀಲಾ ಇದೀಗ ಮದುವೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ.

ಹೌದು, ನಟಿ ಶ್ರೀಲೀಲಾ ಅವರು ಈಗ ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ, ಸ್ಟಾರ್ ಹೀರೋಗಳು ಹೊಸಬರು ಎಲ್ಲರ ಜೊತೆಗೆ ಕೂಡ ನಟಿಸುತ್ತಿದ್ದಾರೆ. ಈ ವರ್ಷವೇ ಶ್ರೀಲೀಲಾ ಅಭಿನಯದ ಮೂರ್ನಾಲ್ಕು ಸಿನಿಮಾಗಳು ತೆರೆಕಂಡು ಸಕ್ಸಸ್ ಕಂಡಿದೆ. ಸಿನಿಮಾ ಪ್ರೀರಿಲೀಸ್ ಇವೆಂಟ್ ಗಳಲ್ಲಿ ಕೂಡ ಶ್ರೀಲೀಲಾ ಅವರು ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಇವರು ನಟ ಮಹೇಶ್ ಬಾಬು ಅವರೊಡನೆ ನಟಿಸಿರುವ ಗುಂಟೂರು ಖಾರಂ ಸಿನಿಮಾ ಬಿಡುಗಡೆಯಾಗಿದೆ.

ಈ ಸಿನಿಮಾ ಕೂಡ ಸೂಪರ್ ಹಿಟ್ ಆಗಿದ್ದು, ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆಯುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಶ್ರೀಲೀಲಾ ದೊಡ್ಡ ಸ್ಟಾರ್ ಕುಟುಂಬದ ಸೊಸೆ ಆಗುತ್ತಾರೆ ಎನ್ನುವ ಮಾತು ಈಗ ಕೇಳಿಬರುತ್ತಿದೆ. ಶ್ರೀಲೀಲಾ ಅವರ ತಾಯಿ ಮಗಳ ಜಾತಕವನ್ನು ಒಬ್ಬ ಜ್ಯೋತಿಷಿಗೆ ತೋರಿಸಿದ್ದು ಅವರು ನಿಮ್ಮ ಮಗಳು ದೊಡ್ಡ ಕುಟುಂಬದ ಸೊಸೆ ಆಗ್ತಾಳೆ ಎಂದು ಹೇಳಿದ್ದಾರಂತೆ.

ಇನ್ನು ಶ್ರೀಲೀಲಾ ಅವರು ನಟ ಬಾಲಕೃಷ್ಣ ಅವರೊಡನೆ ಭಗವಂತ ಕೇಸರಿ ಸಿನಿಮಾದಲ್ಲಿ ಅವರ ಮಗಳ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾದ ಇವೆಂಟ್ ನಲ್ಲಿ ಬಾಲಯ್ಯ ಅವರ ಮಗ ಮೋಕ್ಷಜ್ಞ ಅವರೊಡನೆ ಕಾಣಿಸಿಕೊಂಡಿದ್ದರು, ಈ ಭವಿಷ್ಯ ಮತ್ತು ಫೋಟೋಗಳು ಎಲ್ಲವನ್ನು ನೋಡಿರುವ ನೆಟ್ಟಿಗರು ಬಹುಶಃ ಶ್ರೀಲೀಲಾ ಅವರು ಬಾಲಯ್ಯ ಅವರ ಮನೆ ಸೊಸೆ ಆಗಬಹುದು ಎನ್ನುತ್ತಿದ್ದಾರೆ..

ಈ ಸುದ್ದಿಯ ಬಗ್ಗೆ ಆಗಲಿ, ಮದುವೆ ಬಗ್ಗೆ ಆಗಲಿ ಶ್ರೀಲೀಲಾ ಅವರಾಗಲಿ, ಅವರ ಕುಟುಂಬದವರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇಂಥದ್ದೊಂದು ಸುದ್ದಿ ಈಗ ವೈರಲ್ ಆಗ್ತಿರೋದಂತೂ ಸುಳ್ಳಲ್ಲ. ನಿಜಕ್ಕೂ ಶ್ರೀಲೀಲಾ ಅವರು ಈ ಮದುವೆ ಆಗ್ತಾರಾ ಎಂದು ಕಾದು ನೋಡಬೇಕಿದೆ..

Leave A Reply

Your email address will not be published.