Kids Health: ಸಣ್ಣ ಮಕ್ಕಳಿಗೆ ಯಾವುದೇ ಕಾರಣಕ್ಕೂ ಈ 5 ರೀತಿಯ ಆಹಾರಗಳನ್ನು ಕೊಡಬೇಡಿ

0 24

Kids Health: ಸಣ್ಣ ಮಕ್ಕಳು ಗಾಜಿನ ಗೊಂಬೆ ಇದ್ದ ಹಾಗೆ ಎಂದರೆ ತಪ್ಪಲ್ಲ. ಅವರು ಬೆಳೆದು ದೊಡ್ಡವರಾಗುವ ವರೆಗು ಬಹಳ ಹುಷಾರಾಗಿ ನೋಡಿಕೊಳ್ಳಬೇಕು. ಮಕ್ಕಳ ಆರೋಗ್ಯದ ಮೇಲೆ ಅವರು ಸೇವಿಸುವ ಆಹಾರ ಹೆಚ್ಚಿನ ಪರಿಣಾಮ ಬೀರುತ್ತದೆ. ಉತ್ತಮ ಆಹಾರ ಸೇವಿಸಿದರೆ, ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಹೆಚ್ಚಿನ ಮಕ್ಕಳು ಜಂಕ್ ಫುಡ್ ಕಡೆಗೆ ಆಕರ್ಷಿತರಾಗುತ್ತಾರೆ. ಮಕ್ಕಳಿಗೆ ಇಷ್ಟ ಎಂದು ಅದನ್ನು ಕೊಡುವುದು ಒಳ್ಳೆಯದಲ್ಲ, ನಿಮ್ಮ ಮಕ್ಕಳು ಸದಾ ಆರೋಗ್ಯವಾಗಿ ಇರಬೇಕು ಎಂದರೆ, ಯಾವುದೇ ಕಾರಣಕ್ಕೂ ಈ 5 ಆಹಾರ ಪದಾರ್ಥಗಳನ್ನು ಕೊಡಬೇಡಿ..

ಕೂಲ್ ಡ್ರಿಂಕ್ಸ್ :- ಇವು ಮಕ್ಕಳು ಹೆಚ್ಚು ಆಕರ್ಷಿತರಾಗುವ ಪಾನೀಯಗಳು, ದೊಡ್ಡವರು ಕುಡಿಯುವುದನ್ನು ನೋಡಿ ಮಕ್ಕಳು ಕೂಡ ತಮಗೆ ಬೇಕು ಎಂದು ಹಠ ಮಾಡುತ್ತಾರೆ. ಅದರ ಕೂಲ್ ಡ್ರಿಂಕ್ಸ್ ಗಳಲ್ಲಿ ಸಕ್ಕರೆ ಅಂಶ ಜಾಸ್ತಿ ಇರುತ್ತದೆ, ಇದರಿಂದ ದೇಹದ ತೂಕ ಜಾಸ್ತಿಯಾಗುತ್ತದೆ, ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಜೊತೆಗೆ ಹಲ್ಲಿನ ಸಮಸ್ಯೆ ಬರಬಹುದು. ಹಾಗಾಗಿ ಮಕ್ಕಳಿಗೆ ಕೂಲ್ ಡ್ರಿಂಕ್ಸ್ ಕೊಡಬೇಡಿ.

ಫಾಸ್ಟ್ ಫುಡ್ :- ಮಕ್ಕಳಿಗೆ ಫಾಸ್ಟ್ ಫುಡ್ ಕೊಡುವುದನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು. ಏಕೆಂದರೆ ಫಾಸ್ಟ್ ಫುಡ್ ಇಂದ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಇವುಗಳಲ್ಲಿ ಸೋಡಿಯಂ ಮತ್ತು ಸಕ್ಕರೆ ಅಂಶ ಹೆಚ್ಚಾಗಿರುತ್ತದೆ. ಇದು ಅನಾರೋಗ್ಯಕರ ಕೂಡ ಹೌದು, ಹಾಗಾಗಿ ಫಾಸ್ಟ್ ಗುಡ್ ಸೇವನೆ ಕಡಿಮೆ ಮಾಡಿ.

ಸಂಸ್ಕರಿಸಿದ ಆಹಾರಗಳು :- ಮಕ್ಕಳನ್ನು ಹೆಚ್ಚು ಆಕರ್ಷಿಸುವುದು ಚಿಪ್ಸ್, ಬಿಸ್ಕೆಟ್ ಹಾಗೂ ಈ ಥರದ ತಿಂಡಿಗಳು. ಇದನ್ನೆಲ್ಲ ಕೊಡುವುದನ್ನು ಎಷ್ಟು ಕಡಿಮೆ ಮಾಡುತ್ತೀರೋ, ಅಷ್ಟು ಕೂಡ ನಿಮಗೆ ಒಳ್ಳೆಯದು. ಇವುಗಳಲ್ಲಿ ಫ್ಯಾಟ್, ಸೋಡಿಯಂ ಅಂಶ ಜಾಸ್ತಿ ಇರುತ್ತದೆ. ಹಾಗಾಗಿ ಮಕ್ಕಳ ಆರೋಗ್ಯಕ್ಕೆ ಇದು ಒಳ್ಳೆಯದಲ್ಲ.

ವೈಟ್ ಬ್ರೆಡ್ :- ವೈಟ್ ಬ್ರೆಡ್ ಗಳಿಂದ ತಯಾರಾದ ಸ್ಯಾಂಡ್ ವಿಚ್, ಟೋಸ್ಟ್ ಇದೆಲ್ಲವೂ ಮಕ್ಕಳಿಗೆ ತುಂಬಾ ಇಷ್ಟ. ಆದರೆ ವೈಟ್ ಬ್ರೆಡ್ ಹೆಚ್ಚು ಕಾಲ ಚೆನ್ನಾಗಿರಬೇಕು ಎಂದು ಅದಕ್ಕೆ ಉಪ್ಪು ಸೇರಿಸುತ್ತಾರೆ. ಮಕ್ಕಳ ಆರೋಗ್ಯಕ್ಕೆ ಸೋಡಿಯಂ ಒಳ್ಳೆಯದಲ್ಲ. ಹಾಗಾಗಿ ಮಕ್ಕಳಿಗೆ ವೈಟ್ ಬ್ರೆಡ್ ಕೊಡುವುದನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು.

ಶುಗರ್ ಕ್ಯಾಂಡಿ :- ಕ್ಯಾಂಡಿ, ಚಾಕೊಲೆಟ್ಸ್ ಇದೆಲ್ಲವೂ ಮಕ್ಕಳನ್ನು ಹೆಚ್ಚು ಆಕರ್ಷಿಸುತ್ತದೆ. ಇವುಗಳನ್ನು ಕೊಡಿಸಿ ಎಂದು ಮಕ್ಕಳು ಹಠ ಮಾಡುತ್ತಾರೆ. ಆದರೆ ಶುಗರ್ ಕ್ಯಾಂಡಿ ಮತ್ತು ಇನ್ನಿತರ ಸ್ವೀಟ್ ಪದಾರ್ಥಗಳನ್ನು ಮಕ್ಕಳಿಗೆ ಕೊಡುವುದು ಕಡಿಮೆ ಮಾಡಿ. ಇದು ಮಕ್ಕಳಲ್ಲಿ ಸ್ಥೂಲಕಾಯತೆಗೆ ಕಾರಣ ಆಗಬಹುದು, ಜೊತೆಗೆ ಇನ್ನಿತರ ಆರೋಗ್ಯ ಸಮಸ್ಯೆಯನ್ನು ತರಬಹುದು.

Leave A Reply

Your email address will not be published.