Rajanikanth: ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ದೇವಸ್ಥಾನ ಕಟ್ಟಿ ಪ್ರತಿದಿನ ಪೂಜೆ ಮಾಡ್ತಿದ್ದಾರೆ ಈ ಅಭಿಮಾನಿ!

Written by Pooja Siddaraj

Published on:

Rajanikanth: ಸೂಪರ್ ಸ್ಟಾರ್ ರಜನಿಕಾಂತ್ ಎಂದರೆ ನೆನಪಾಗುವುದು ಅವರ ಸ್ಟೈಲ್. ವರುಷಗಳೇ ಕಳೆದರೂ ಅವರ ಸ್ಟೈಲ್ ಮಾತ್ರ ಬದಲಾಗಿಲ್ಲ. ರಜನಿಕಾಂತ್ ಅವರು ಸಿನಿರಂಗಕ್ಕೆ ಕಾಲಿಟ್ಟು ನಾಲ್ಕು ದಶಕಗಳೇ ಕಳೆದಿದ್ದರೂ ಅವರ ಮೇಲೆ ಅಭಿಮಾನಿಗಳಿಗೆ ಈಗಲೂ ಸಹ ಅಷ್ಟೇ ಕ್ರೇಜ್ ಇದೆ. ಇಂದಿಗೂ ಸಹ ರಜನಿಕಾಂತ್ ಅವರ ಸಿನಿಮಾ ರಿಲೀಸ್ ಆದರೆ ಹಬ್ಬದ ಆಚರಣೆಯಂತೆ ಇರುತ್ತದೆ.

ಭಾರತದಲ್ಲಿ ಮಾತ್ರವಲ್ಲದೆ ಹೊರ ದೇಶಗಳಲ್ಲಿ ಕೂಡ ರಜನಿ ಅವರಿಗೆ ದೊಡ್ಡ ಫ್ಯಾನ್ ಬೇಸ್ ಇದೆ. ಅಭಿಮಾನಿಗಳು ರಜನಿಕಾಂತ್ ಅವರನ್ನು ದೇವರ ರೀತಿಯಲ್ಲಿ ಆರಾಧನೆ ಮಾಡುತ್ತಾರೆ ಎಂದು ಕೇಳಿದ್ದೇವೆ. ಆದರೆ ಇದೀಗ ಒಬ್ಬ ಅಭಿಮಾನಿ ರಜನಿಕಾಂತ್ ಅವರಿಗೆ ದೇವಸ್ಥಾನವನ್ನು ಕಟ್ಟಿ, ಪ್ರತಿಮೆ ಪ್ರತಿಷ್ಠಾಪಿಸಿ ಪ್ರತಿದಿನ ಪೂಜೆಯನ್ನು ಕೂಡ ಮಾಡುತ್ತಿದ್ದಾರೆ. ಈ ದೇವಸ್ಥಾನ ಎಲ್ಲಿದೆ? ಕಟ್ಟಿಸಿದ್ದು ಯಾರು? ಎಲ್ಲವನ್ನು ತಿಳಿಸುತ್ತೇವೆ ನೋಡಿ..

ಈ ದೇವಸ್ಥಾನ ಇರುವುದು ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ, ಮಧುರೈ ಜೆಲ್ಲೆಯ ತಿರುಮಂಗಲ ಮೂಲದ ಕಾರ್ತಿಕ್ ಎನ್ನುವವರು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ದೇವಸ್ಥಾನ ಕಟ್ಟಿಸಿದ್ದಾರೆ. ಇಲ್ಲಿ ಪ್ರಸ್ತುಷ್ಠಾಪಿಸಿರುವ ರಜನಿಕಾಂತ್ ಅವರ ಪ್ರತಿಮೆಯನ್ನು ಗ್ರಾನೈಟ್ ಇಂದ ಮಾಡಲಾಗಿದೆ. ಹಾಗೆಯೇ ರಜನಿಕಾಂತ್ ಅವರ ಪ್ರತಿಮೆ ಬರೋಬ್ಬರಿ 250 ಕೆಜಿ ತೂಕ ಹೊಂದಿದೆ ಎಂದು ಮಾಹಿತಿ ಸಿಕ್ಕಿದೆ..

ರಜನಿಕಾಂತ್ ಅವರ ಪ್ರತಿಮೆಯನ್ನು ನಾಮಕ್ಕಲ್ ಜಿಲ್ಲೆಯ ರಾಶಿಪುರಂ ನಲ್ಲಿ ವಿಶೇಷವಾಗಿ ಕೆತ್ತನೆ ಮಾಡಲಾಗಿದೆ. ಈ ದೇವಸ್ಥಾನದಲ್ಲಿ ದೀಪದ ಪೂಜೆ, ಹಾಲಿನ ಅಭಿಷೇಕ, ವಿಶೇಷ ಪೂಜೆಗಳನ್ನು ಮಾಡುತ್ತಾರೆ. ಈ ಪೂಜೆಯ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಥರ ಪೂಜೆ ಯಾಕೆ ಮಾಡುತ್ತೀರಿ ದೇವಸ್ಥಾನ ಯಾಕೆ ಕಟ್ಟಿಸಿದ್ದು ಎಂದು ಕೇಳಿದ್ದಕ್ಕೆ ರಜನಿಕಾಂತ್ ಅವರು ನಮಗೆ ದೇವರ ಹಾಗೆ ಎಂದು ಹೇಳಿದ್ದಾರೆ.

ಈ ದೇವಸ್ಥಾನದ ಫೋಟೋಸ್ ವೈರಲ್ ಆಗಿವೆ. ಇನ್ನು ರಜನಿಕಾಂತ್ ಅವರ ಸಿನಿಮಾ ಬಗ್ಗೆ ಹೇಳುವುದಾದರೆ, ಇತ್ತೀಚೆಗೆ ತೆರೆಕಂಡ ಜೈಲರ್ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಇನ್ನು ರಜನಿಕಾಂತ್ ಅವರ ಮಂದಿನ ಸಿನಿಮಾ ಚಿತ್ರೀಕರಣ ಶೀಘ್ರದಲ್ಲೇ ಶುರುವಾಗಲಿದೆ ಎಂದು ಮಾಹಿತಿ ಸಿಕ್ಕಿದೆ.

Leave a Comment