ಇಂದು ನಮ್ಮ ಬಹುತೇಕ ಎಲ್ಲಾ ಸ್ಮಾರ್ಟ್ ಫೋನ್ ಗಳಲ್ಲಿ ಒಂದು ವಿಚಿತ್ರವಾದ ಸೌಂಡ್ ಜೊತೆಗೆ ಅಲರ್ಟ್ ಮೆಸೇಜ್ ಕೂಡ ಬಂದಿದೆ. ಈ ರೀತಿ ಆಗಿದ್ದಕ್ಕೆ ಹಲವು ಜನರು ಭಯ ಪಟ್ಟಿದ್ದೀರಾ, ನಮ್ಮ ಫೋನ್ ಏನಾದ್ರು ಹ್ಯಾಕ್ ಆಗಿದ್ಯಾ ಅಂತ ಕೂಡ ನಿಮಗೆ ಅನ್ನಿಸಿರಬಹುದು. ಹೀಗೆಲ್ಲಾ ಯೋಚನೆ ಮಾಡಿ ನೀವು ಭಯ ಪಡುವ ಅಗತ್ಯವಿಲ್ಲ. ನಿಮ್ಮ ಫೋನ್ ಹ್ಯಾಕ್ ಆಗಿಲ್ಲ, ಇದು ಸರ್ಕಾರದಿಂದಲೇ ಬಂದಿರುವ ಒಂದು ಮೆಸೇಜ್ ಆಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಲಿಸಿರುವ ಎಮೀರ್ಜೆನ್ಸಿ ವಾರ್ನಿಂಗ್ ಮೆಸೇಜ್ (ತುರ್ತು ಎಚ್ಚರಿಗೆ ಸಂದೇಶ) ಆಗಿದೆ. ಇದೊಂದು ಟೆಸ್ಟ್ ಆಗಿದ್ದು, ನಮ್ಮ ರಾಜ್ಯದಲ್ಲಿ ಕೇಂದ್ರ ದೂರ ಸಂಪರ್ಕ ಇಲಾಖೆ ಈ ಟೆಸ್ಟ್ ನಡೆಸಿದೆ. ಇದೊಂದು ಎಕ್ಸಾಂಪಲ್ ಅಲರ್ಟ್ ಮೆಸೇಜ್ ಆಗಿದ್ದು, ಒಂದು ವೇಳೆ ನಿಮ್ಮ ಪ್ರದೇಶದಲ್ಲಿ ಭೂಕಂಪ ಅಥವಾ ಇತರ ರೀತಿಯ ಪ್ರಕೃತಿ ವಿಕೋಪ ಇಂಥ ತೊಂದರೆ ಏನಾದರೂ ಸಂಭವಿಸುತ್ತದೆ ಎನ್ನುವ ಸಮಯಕ್ಕೆ ಬರುವಂಥ ಮೆಸೇಜ್ ಆಗಿದೆ.
ನಮ್ಮ ಭಾರತ ದೇಶದ ಪ್ರತಿ ವ್ಯಕ್ತಿಯ ಮೊಬೈಲ್ ಗೆ ಈ ಮೆಸೇಜ್ ಹೋಗುತ್ತದೆ, ಇದಕ್ಕೆ ಒಂದು ಹೆಸರನ್ನು ಇಡಲಾಗಿದ್ದು, ಪ್ಯಾನ್ ಇಂಡಿಯಾ ಅಲರ್ಟ್ ಎಂದು ಕರೆಯಲಾಗುತ್ತಿದೆ. ಇಂದು ಬಂದಿರುವ ಈ ಅಲರ್ಟ್ ಮೆಸೇಜ್ ಗಳು ಕರ್ನಾಟಕ ರಾಜ್ಯದಲ್ಲಿ ನಡೆಸಿರುವ ಮೊದಲ ಟೆಸ್ಟ್ ಆಗಿದೆ. ಇಂದು ಬೆಳಗ್ಗೆ 11:45ಕ್ಕೆ ನಮ್ಮ ರಾಜ್ಯದಲ್ಲಿ ಈ ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಬಂದಿದೆ..
ರಾಜ್ಯದ ಬಹುತೇಕ ಎಲ್ಲಾ ಜನರ ಮೊಬೈಲ್ ಗೆ ಈ ಮೆಸೇಜ್ ಬಂದಿದ್ದು, ಜನರು ಮೆಸೇಜ್ ಓದಿದ್ದಾರೆ. ಕೆಲವರಿಗೆ ಮಾತ್ರ ಈ ಮೆಸೇಜ್ ಬಗ್ಗೆ ಆತಂಕವೂ ಶುರುವಾಗಿತ್ತು, ಈ ಮಾಹಿತಿಯ ಮೂಲಕ ನೀವು ಆತಂಕ ಪಡುವಂಥದ್ದು ಏನು ಇಲ್ಲ ಎಂದು ತಿಳಿಸುತ್ತಿದ್ದೇವೆ.