ಬಿಗ್ ಬಾಸ್ ಶೋಗೆ ಒಂದು ರೀತಿ ಹೊಸ ರೀತಿ ಟ್ರೆಂಡ್ ಸೃಷ್ಟಿ ಮಾಡಿದ್ದು ಪ್ರಥಮ್ ಎಂದರೆ ತಪ್ಪಲ್ಲ. ಸೀಸನ್ 4ರಲ್ಲಿ ಒಳ್ಳೆ ಹುಡುಗ ಪ್ರಥಮ್ ಯಫು ಎಂಟ್ರಿ ಕೊಟ್ಟಿದ್ದ ಪ್ರಥಮ್, ಮನೆಯವರಿಗೆಲ್ಲಾ ಕ್ವಾಟ್ಲೆ ಕೊಟ್ಟುಕೊಂಡೇ ಸೀಸನ್ ನ ವಿನ್ನರ್ ಆಗಿ ಹೊರಹೊಮ್ಮಿದರು. ಪ್ರಥಮ್ ಅವರು ಬರುತ್ತಿದ್ದ ಸೀಸನ್ ಅನ್ನು ಜನರು ಕೂಡ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದರು. ಇದೀಗ ಪ್ರಥಮ್ ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.
ಕಲರ್ಸ್ ಕನ್ನಡ ಚಾನೆಲ್ ಈಗ ಪ್ರಥಮ್ ಅವರು ಬಿಗ್ ಬಾಸ್ ಮನೆಗೆ ಬಂದಿರುವ ಪ್ರೊಮೋ ಬಿಟ್ಟಿದ್ದು, ಪ್ರಥಮ್ ಅವರು ಬಿಗ್ ಬಾಸ್ ಮನೆಗೆ ಬಂದಿರುವ ಪ್ರೊಮೋ ಶೇರ್ ಮಾಡಿದ್ದು, ಅದರಲ್ಲಿ ಪ್ರಥಮ್ ಅವರು ಬಿಗ್ ಬಾಸ್ ಮನೆಗೆ ಹಳೆಯ ರೀತಿಯಲ್ಲಿ ಲಾರ್ಡ್ ಪ್ರಥಮ್ ಆಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮನೆಯವರಿಗೆ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.
ಐ ಆಮ್ ವಿಲ್ಲನ್ ಹಾಡು ಬ್ಯಾಗ್ರೌಂಡ್ ನಲ್ಲಿ ಬಂದಿದ್ದು, ಒಳ್ಳೆ ಹುಡುಗ ಪ್ರಥಮ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಗೆ ಬಂದ ಪ್ರಥಮ್ ಗೆ ಎಲ್ಲರೂ ಸಲ್ಯೂಟ್ ಹೊಡೆದಿದ್ದಾರೆ. ಇನ್ನು ಎಲ್ಲರನ್ನು ನೋಡಿದ ಪ್ರಥಮ್, ಸಂತೋಷ್ ಕುಮಾರ್ ಅವರನ್ನು ನೋಡಿ, ತಲೆ ಬಗ್ಗಿಸಿ ಇರಬೇಕು, ಗುರಾಯ್ಸೋದು ಬೇಡ ಎಂದು ಹೇಳುತ್ತಾರೆ ಪ್ರಥಮ್. ಇದರಿಂದ ಮನೆಯವರಿಗೆ ಒಂದು ರೀತಿ ಸ್ಟ್ರಿಕ್ಟ್ ವಾತಾವರಣ ಶುರುವಾಗಿದೆ ಎಂದು ಹೇಳಬಹುದು.
ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದಲ್ಲೇ ಬಿಗ್ ಟ್ವಿಸ್ಟ್ ಗಳೇ ಕಾಣಸಿಗುತ್ತಿದೆ. ಮೊದಲ ದಿನವೇ ಬಿಗ್ ಬಾಸ್ ಶೋಗೆ ಪ್ರದೀಪ್ ಈಶ್ವರ್ ಗೆಸ್ಟ್ ಆಗಿ ಬಂದಿದ್ದರು, ಮೊದಲಿಗೆ ಪ್ರದೀಪ್ ಈಶ್ವರ್ ಅವರು ಸ್ಪರ್ಧಿಯಾಗಿ ಬಂದಿದ್ದಾರೆ ಎಂದುಕೊಂಡಿದ್ದರು, ಆದರೆ ಗೆಸ್ಟ್ ಆಗಿ ಬಂದಿದ್ದಾರೆ ಎಂದು ನಂತರ ಗೊತ್ತಾಯಿತು. ಕೆಲವು ಗಂಟೆಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದು, ಮನೆಯ ಸ್ಪರ್ಧಿಗಳಿಗೆ ಮೋಟಿವೇಶನ್ ಕೊಟ್ಟು ಹೋದರು ಪ್ರದೀಪ್.
ಇದೀಗ ಎರಡನೇ ಗೆಸ್ಟ್ ಆಗು ಒಳ್ಳೆ ಹುಡುಗ ಪ್ರಥಮ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಬರುತ್ತಿದ್ದ ಹಾಗೆಯೇ ತುಕಾಲಿ ಸಂತೋಷ್ ಸಂತೋಷ್ ಗೆ ಆವಾಜ್ ಹಾಕಿರುವ ಪ್ರೊಮೋ ಈಗ ವೈರಲ್ ಆಗಿದ್ದು, ಪ್ರಥಮ್ ಬಂದು ಯಾವ ರೀತಿ ಟಾಸ್ಕ್ ಕೊಡುತ್ತಾರೆ, ಸ್ಪರ್ಧಿಗಳ ಕೈಯಲ್ಲಿ ಏನೆಲ್ಲಾ ಮಾಡಿಸುತ್ತಾರೆ ಎಂದು ಇಂದಿನ ಎಪಿಸೋಡ್ ನಲ್ಲಿ ಕಾದು ನೋಡಬೇಕಿದೆ.