Horoscope: ಕೇತು ಮತ್ತು ಮಂಗಳನ ಯುತಿ ಅಂತ್ಯ, ನವೆಂಬರ್ ಇಂದ ಈ ರಾಶಿಗಳ ಶುಭಸಮಯ ಶುರು

Written by Pooja Siddaraj

Published on:

ಜ್ಯೋತಿಷ್ಯ ಶಾಸ್ತ್ರದ ಎಲ್ಲಾ ಗ್ರಹಗಳ ಸಂಚಾರವು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಮುಂದಿನ ತಿಂಗಳು ನವೆಂಬರ್ ನಲ್ಲಿ ಕೆಲವು ರಾಶಿಗಳ ಅದೃಷ್ಟ ಬದಲಾವಣೆ ಆಗಲಿದೆ. ಪ್ರಸ್ತುತ ತುಲಾ ರಾಶಿಯಲ್ಲಿ ಕೇತು ಮತ್ತು ಮಂಗಳ ಎರಡು ಗ್ರಹಗಳ ಅಶುಭ ಯುತಿ ನಡೆಯುತ್ತಿದ್ದು, ಆಕ್ಟೊಬರ್ 30ರಂದು ಕೇತು ಗ್ರಹವು ಕನ್ಯಾ ರಾಶಿಗೆ ಪ್ರವೇಶ ಮಾಡಲಿದೆ. ಈ ಬದಲಾವಣೆ ಇಂದ ಮಂಗಳ ಮತ್ತು ಕೇತು ಗ್ರಹಗಳ ಈ ದುರದೃಷ್ಟ ಸಂಯೋಗ ದೂರವಾಗುತ್ತದೆ. ಈ ಸ್ಥಾನ ಬದಲಾವಣೆ ಇಂದ ಯಾವೆಲ್ಲಾ ರಾಶಿಗಳ ಅದೃಷ್ಟ ಬದಲಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಈ ವೇಳೆ ನಿಮ್ಮ ಬದುಕಿಗೆ ಅತ್ಯಂತ ಶುಭ ನೀಡುವ ಸಮಯ ಆಗಿದೆ. ಕೆಲಸ ಮಾಡುತ್ತಿರುವವರಿಗೆ ಮತ್ತು ಬಿಸಿನೆಸ್ ಮಾಡುತ್ತಿರುವವರಿಗೆ ಇಬ್ಬರಿಗೂ ಇದು ಲಾಭ ತರುವಂಥ ಸಮಯ ಆಗಿದೆ. ಈ ವೇಳೆ ನಿಮ್ಮ ಮೇಲೆ ಲಕ್ಷ್ಮೀದೇವಿಯ ಕೃಪೆ ಇರುತ್ತದೆ, ಹಾಗಾಗಿ ಎಲ್ಲಾ ಕೆಲಸದಲ್ಲಿ ಲಾಭ ಪಡೆಯುತ್ತೀರಿ.

ವೃಶ್ಚಿಕ ರಾಶಿ :- ಕೇತು ಗ್ರಹದ ಸ್ಥಾನ ಬದಲಾವಣೆ ಇಂದ ನಿಮಗೆ ದಿಢೀರ್ ಲಾಭ ಉಂಟಾಗುತ್ತದೆ. ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ. ಇದ್ದ ಸಮಸ್ಯೆಗಳು ದೂರವಾಗುತ್ತದೆ, ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ. ಹೊಸ ಕೆಲಸಕ್ಕೆ ಅವಕಾಶ ಹಾಗೆಯೇ ಈಗಾಗಲೇ ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ.

ಮೇಷ ರಾಶಿ :- ನೀವು ಹೊರದೇಶಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಆರ್ಥಿಕ ವಿಚಾರದಲ್ಲಿ ಲಾಭ ನಿಮ್ಮದಾಗುತ್ತದೆ. ಬ್ಯುಸಿನೆಸ್ ಮಾಡುವವರಿಗೆ ಇದು ಒಳ್ಳೆಯ ಸಮಯ. ಈ ಹಿಂದೆ ಮಾಡಿರುವ ಹೂಡಿಕೆ ಇಂದ ಲಾಭ ಪಡೆಯುತ್ತೀರಿ. ಕೆಲಸಕ್ಕಾಗಿ ಹುಡುಕುತ್ತಾ ಇರುವವರಿಗೆ ನಿಮ್ಮ ಇಷ್ಟದ ಕೆಲಸ ಸಿಗುತ್ತದೆ.

ಮಿಥುನ ರಾಶಿ :- ದೀಪಾವಳಿ ಹಬ್ಬದ ವೇಳೆಗೆ ನಿಮ್ಮ ಮನೆಗೆ ಲಕ್ಷ್ಮಿ ಬಂದು ನೆಲೆಸುತ್ತಾಳೆ. ಇದರಿಂದ ನಿಮಗೆ ದಿಢೀರ್ ಧನಲಾಭ ಉಂಟಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಈ ವೇಳೆ ಲಾಭ ಹೆಚ್ಚು. ಹಣಕಾಸಿನ ವಿಷಯದಲ್ಲಿ ಸಬಲರಾಗಿರುತ್ತೀರಿ.

Leave a Comment