Bigg Boss: ಬಿಗ್ ಬಾಸ್ ಮನೆಯಲ್ಲಿ ಹೊಸ ಲವ್ ಸ್ಟೋರಿ, ಸಂಗೀತಾ ಕಾರ್ತಿಕ್ ನಡುವೆ ಶುರುವಾಗಿದ್ಯಾ ಲವ್ ಚಾಪ್ಟರ್?

0 19

ಬಿಗ್ ಬಾಸ್ ಶೋ ನಲ್ಲಿ ಲವ್ ರಿಲೇಶನ್ಶಿಪ್ ಇದೆಲ್ಲವೂ ಕಾಮನ್. ಪ್ರತಿ ಸೀಸನ್ ನಲ್ಲಿ ಲವ್, ರೊಮ್ಯಾನ್ಸ್ ಇದೆಲ್ಲವೂ ನಡೆದೇ ನಡೆಯುತ್ತದೆ. ಹಾಗೆಯೇ ಕೆಲವು ಬಿಗ್ ಬಾಸ್ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಮದುವೆ ಆಗಿರುವ ಉದಾಹರಣೆಗಳು ಕೂಡ ಇದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಹೊಸದೊಂದು ಲವ್ ಸ್ಟೋರಿ ಶುರುವಾಗಿದೆ.

ಈ ಬಾರಿ ಲವ್ ಸ್ಟೋರಿ ಶುರು ಆಗಿರುವುದು ಚಾರ್ಲಿ ಸಿನಿಮಾ ಹೀರೋಯಿನ್ ನಟಿ ಸಂಗೀತಾ ಶೃಂಗೇರಿ ಮತ್ತು ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಸಕ್ರಿಯವಾಗಿರುವ ನಟ ಕಾರ್ತಿಕ್ ಅವರ ನಡುವೆ ಲವ್ ಸ್ಟೋರಿ ಶುರುವಾಗಿರುವ ಮುನ್ಸೂಚನೆ ಸಿಕ್ಕಿದೆ. ಇವರಿಬ್ಬರ ನಡುವೆ ಏನೋ ಇದೆ ಎನ್ನುವುದಕ್ಕೆ ಕೆಲವು ಘಟನೆಗಳು ಕೂಡ ಸಾಕ್ಷಿ ಎನ್ನುವ ಹಾಗೆ ಕಾಣುತ್ತಿದೆ.

ಸಂಗೀತ ಅವರು ಎಲ್ಲೇ ಇದ್ದರು ಕೂಡ ಕಾರ್ತಿಕ್ ಜೊತೆಯಾಗಿ ಇರುತ್ತಾರೆ. ಸಂಗೀತ ಅವರನ್ನು ವಿಚಾರಿಸಿಕೊಳ್ಳುವುದು ಮಾಡುತ್ತಾರೆ. ಮನೆಯಲ್ಲಿ ತಮಗೆ ಯಾರೊಡನೆ ಮೊದಲ ಇಂಪ್ರೆಷನ್ ಚೆನ್ನಾಗಿತ್ತು ಎಂದು ಕೇಳಿದ್ದಕ್ಕೆ ಸಂಗೀತಾ ಅವರು ಕಾರ್ತಿಕ್ ಅವರ ಹೆಸರನ್ನೇ ಹೇಳಿದ್ದರು. ಜೊತೆಗೆ ನಿನ್ನೆ ನಾಮಿನೇಷನ್ ವೇಳೆ ವಿನಯ್ ಅವರು ಸಂಗೀತ ಅವರನ್ನು ನಾಮಿನೇಟ್ ಮಾಡುವುದಕ್ಕೆ ನೀಡಿದ ಕಾರಣ ಸಂಗೀತ ಅವರಿಗೆ ಇಷ್ಟ ಆಗಲಿಲ್ಲ.

ಆಗ ನಡೆದ ಮಾತುಕತೆಯಲ್ಲಿ ಸಂಗೀತ ಅವರು ರೈಸ್ ಆದಾಗ ಕಾರ್ತಿಕ್ ಅವರು ಜೊತೆಯಾಗಿ ನಿಂತು, ಕೂಲ್ ಆಗಿರಿ ಎಂದು ಸಪೋರ್ಟ್ ಮಾಡಿದ್ದರು. ಜೊತೆಗೆ ಇಬ್ಬರು ಜೊತೆಯಾಗಿ ಹೆಚ್ಚಿನ ಸಮಯ ಕಳೆಯುತ್ತಾರೆ, ಕುಳಿತು ಮಾತನಾಡುತ್ತಾರೆ, ಕಾರ್ತಿಕ್ ಸಂಗೀತಾ ಒಬ್ಬರನ್ನೊಬ್ಬರು ಹಚ್ಚಿಕೊಂಡಿರುವುದಂತೂ ನಿಜ ಆಗಿದೆ. ಒಟ್ಟಿನಲ್ಲಿ ಇವರಿಬ್ಬರ ನಡುವೆ ಏನೋ ಇದೆ ಎನ್ನುವುದಂತೂ ಮನೆಮಂದಿಗೆ ಹಾಗೂ ವೀಕ್ಷಕರಿಗೆ ಪ್ರಶ್ನೆಯಾಗಿದೆ..

ಬಿಗ್ ಬಾಸ್ ಮನೆಯಲ್ಲಿ ಇದೊಂದೇ ಅಲ್ಲ, ಇಷಾನಿ ಮತ್ತು ಸ್ನೇಹಿತ್ ನಡುವೆ ಕೂಡ ಲವ್ ಶುರುವಾಗಿರುವ ಹಾಗೆ ಕಾಣುತ್ತಿದೆ. ಇವರಿಬ್ಬರು ಕೂಡ ನಿನ್ನೆಯ ಎಪಿಸೋಡ್ ನಲ್ಲಿ ಮಾತನಾಡುತ್ತಾ ಇರುವಾಗ, ಟೈಟಾನಿಕ್ ಪೋಸ್ ಕೂಡ ಕೊಟ್ಟಿದ್ದರು. ಇದೀಗ ಈ ಎರಡು ಜೋಡಿಗಳ ನಡುವೆ ಹೊಸ ಲವ್ ಟ್ರ್ಯಾಕ್ ಶುರುವಾಗುವ ಹಾಗೆ ಕಾಣುತ್ತಿದೆ.

Leave A Reply

Your email address will not be published.