Bigg Boss: ಡ್ರೋನ್ ಪ್ರತಾಪ್ ಗೆ ಡೋಂಗಿ ಎಂದ ಮನೆ ಸದಸ್ಯರು, ಮತ್ತೊಂದು ವಾರ್ ಶುರು

0 17

ಬಿಗ್ ಬಾಸ್ ಶೋ ಶುರುವಾದರೆ ಎಂಟರ್ಟೈನ್ಮೆಂಟ್ ಗೆ ಏನು ಕಡಿಮೆ ಇಲ್ಲ. ಟಾಸ್ಕ್ ಗಳನ್ನು ಮುಗಿಸುವ ಮಜದ ಜೊತೆಗೆ ಜಗಳ, ಕದನ, ಡ್ರಾಮಾ ಇದೆಲ್ಲವೂ ಇದ್ದೆ ಇರುತ್ತದೆ. ಪ್ರತಿ ಸೀಸನ್ ನಲ್ಲಿ ನಾವು ಇದನ್ನೆಲ್ಲ ನೋಡಿ ಎಂಜಾಯ್ ಮಾಡಿದ್ದೇವೆ. ಈ ಸೀಸನ್ ಅದಕ್ಕೆ ಹೊರತಾಗಿಲ್ಲ, ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಮೊದಲನೇ ವಾರದಲ್ಲೇ ಜಗಳ ಡ್ರಾಮಾ ಎಲ್ಲವೂ ಶುರುವಾಗಿದೆ..

ನಿನ್ನೆಯಷ್ಟೇ ನಾಮಿನೇಷನ್ ವಿಚಾರಕ್ಕೆ ಸಂಗೀತಾ ಶೃಂಗೇರಿ ಮತ್ತು ವಿನಯ್ ನಡುವೆ ಜಗಳ ನಡೆದಿತ್ತು, ನಾಮಿನೇಟ್ ಮಾಡಲು ವಿನಯ್ ಅವರು ಕೊಟ್ಟ ಕಾರಣ ಸರಿಯಿಲ್ಲ ಎಂದು ಸಂಗೀತಾ ವಾದ ಮಾಡಿದ್ದರು. ಇಂದು ಡ್ರೋನ್ ಪ್ರತಾಪ್ ಅವರ ವಿಚಾರಕ್ಕೆ ಡ್ರಾಮಾ ಜಗಳ ನಡೆದಿದೆ. ವರ್ತೂರು ಸಂತೋಷ್, ತುಕಾಲಿ ಸಂತೋಷ್, ಸ್ನೇಹಿತ್ ಮತ್ತು ಡ್ರೋನ್ ಪ್ರತಾಪ್ ಎಲ್ಲರೂ ಕೂತು ಮಾತನಾಡುತ್ತಾ ಇರುತ್ತಾರೆ.

ಆ ವೇಳೆ ಡ್ರೋನ್ ಪ್ರತಾಪ್ ಅವರ ಸ್ಟಾರ್ಟಪ್ ಬಗ್ಗೆ ಪ್ರಶ್ನೆ ಶುರುವಾಗಿ, ನಮ್ಮ ಜಮೀನಿಗೆ ಡ್ರೋನ್ ಮೂಲಕ ಕ್ರಿಮಿನಾಶಕ ಸ್ಪ್ರೇ ಮಾಡಿಕೊಡ್ತೀರಾ ಎನ್ನುವ ವಿಷಯ ಶುರುವಾಗುತ್ತದೆ, ಆಗ ತುಕಾಲಿ ಸಂತೋಷ್, ಅದು ಅವರು ಮಾಡಿರೋ ಡ್ರೋನ್ ಅಲ್ಲ ಅಂಗಡಿಯಲ್ಲಿ ಸಿಗುವ ಡ್ರೋನ್, ಅದನ್ನ ತಂದು ಇವರು ಸ್ಪ್ರೇ ಮಾಡೋದು ಅಷ್ಟೇ ಎಂದು ಹೇಳುತ್ತಾರೆ, ಅದೇ ವಿಷಯಕ್ಕೆ ಎಲ್ಲರೂ ಜೋರಾಗಿ ನಗುತ್ತಾರೆ..

ಹಾಗೆಯೇ ಪ್ರತಾಪ್ ಅವರನ್ನು ಡೋಂಗಿ ಎಂದು ಕರೆಯುತ್ತಾರೆ. ಈ ವಿಷಯಕ್ಕೆ ಶುರುವಾದ ಜಗಳ ಅಡುಗೆ ಮನೆಯಲ್ಲಿ ಪ್ರತಾಪ್ ಮತ್ತು ಸ್ನೇಹಿತ್ ನಡುವೆ ವಾಗ್ವಾದಕ್ಕೆ ತಿರುಗುತ್ತದೆ. ನೀನು ಡೋಂಗಿ ಮಾಡ್ತಿದ್ಯಾ ಅದು ನೀನು ತಯಾರಿಸುವ ಡ್ರೋನ್ ಅಲ್ಲ ಅಂತ ಅವರು ಹೇಳ್ತಿರೋದು ಎಂದು ಸ್ನೇಹಿತ್ ಹೇಳಿ, ಅದಕ್ಕೆ ಪ್ರತಾಪ್ ಪ್ರತ್ಯುತ್ತರ ಕೊಟ್ಟು ಈ ವಿಷಯಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಮನೆಯವರು ಸಮಾಧಾನ ಮಾಡಲು ಟ್ರೈ ಮಾಡಿದರು ಕೂಡ ಈ ಜಗಳ ನಿಂತಿಲ್ಲ..

ಇಬ್ಬರ ಜಗಳ ಕೊನೆಗೆ ಏನಾಯ್ತು? ವಾಗ್ವಾದ ಇನ್ನು ಹೆಚ್ಚಾಯ್ತ ಎನ್ನುವುದನ್ನು ತಿಳಿಯಲು ಪೂರ್ತಿ ಎಪಿಸೋಡ್ ನೋಡಬೇಕಿದೆ. ಈ ವಾರ ಬಿಗ್ ಬಾಸ್ ಇನ್ನು ಟಾಸ್ಕ್ ನೀಡಿಲ್ಲ, ಇಂದಿನ ಎಪಿಸೋಡ್ ನಲ್ಲಿ ಟಾಸ್ಕ್ ಕೊಡುತ್ತಾರಾ? ಟಾಸ್ಕ್ ಇದ್ದರೆ ಹೇಗಿರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Leave A Reply

Your email address will not be published.