Lakshmi Baramma: ಲಕ್ಷ್ಮಿಗೆ ಮಾತ್ರವಲ್ಲ ಲಕ್ಷ್ಮಿ ಬಾರಮ್ಮ ಧಾರವಾಹಿ. ನೋಡುವ ವೀಕ್ಷಕರಿಗೂ ಕಾದಿದೆ ಸರ್ಪ್ರೈಸ್, ಏನದು ಗೊತ್ತಾ?

0 23

ಕಲರ್ಸ್ ಕನ್ನಡ ವಾಹಿನಿಯ ಪಾಪ್ಯುಲರ್ ಧಾರವಾಹಿಗಳಲ್ಲಿ ಒಂದು ಲಕ್ಷ್ಮಿ ಬಾರಮ್ಮ. ಭಾಗ್ಯಲಕ್ಷ್ಮಿ ನಂತರ ಅತಿಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಧಾರವಾಹಿ ಇದೆ ಎಂದು ಹೇಳಿದರೆ ತಪ್ಪಲ್ಲ. ಈ ಧಾರವಾಹಿ ಈಗ ರೋಚಕ ಘಟ್ಟದಲ್ಲಿ ಸಾಗುತ್ತಿದೆ. ಲಕ್ಷ್ಮಿ ವೈಷ್ಣವ್ ನಡುವೆ ಮಧುರ ಬಾಂಧವ್ಯ ಶುರುವಾಗುತ್ತಿದೆ. ಈ ಸಮಯದಲ್ಲಿ ಲಕ್ಷ್ಮಿಗೆ ಮಾತ್ರವಲ್ಲ, ಧಾರವಾಹಿ ನೋಡುವ ವೀಕ್ಷಕರಿಗೂ ಒಂದು ಸರ್ಪ್ರೈಸ್ ಕೊಡೋಕೆ ಮುಂದಾಗಿದೆ ಲಕ್ಷ್ಮಿ ಬಾರಮ್ಮ ಟೀಮ್. ಅದೇನು ಗೊತ್ತಾ?

ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಈಗ ಲಕ್ಷ್ಮಿಗೆ ಪೂರಕವಾಗಿ ಎಲ್ಲವೂ ನಡೆಯುತ್ತಿದೆ. ವೈಷ್ಣವ್ ತಾಯಿ ಕಾವೇರಿಗೆ ಮಗ ಹೆಂಡತಿ ಜೊತೆಗೆ ಜಾಸ್ತಿ ಇದ್ದು, ಕೈತಪ್ಪಿ ಹೋಗ್ತಾನೆ ಅನ್ನೋ ಭಯ. ಅದಕ್ಕಾಗಿ ಮಗ ಬರೆದ ಹಾಡನ್ನೇ ಸುಟ್ಟು ಹಾಕಿ, ಸೊಸೆ ಕೈಯಲ್ಲಿ ಹಾಡು ಬರೆಸಿ, ಅದನ್ನೇ ಆಡಿಯೋ ಕಂಪನಿಗೆ ಕಳಿಸಿದ್ದಳು. ಆದರೆ ಕಾವೇರಿ ದುರದೃಷ್ಟ ಲಕ್ಷ್ಮಿ ಬರೆದ ಹಾಡು ಸುಕನ್ಯಾಗೆ ಇಷ್ಟವಾಗಿದೆ. ತಾಯಿ ಇಂಥ ಕೆಲಸ ಮಾಡಿದ್ದು ಎಂದು ವೈಷ್ಣವ್ ಗೆ ಗೊತ್ತಾಗಿ, ಅಮ್ಮನ ಮೇಲೆ ಕೋಪ ಮಾಡಿಕೊಂಡಿದ್ದಾನೆ.

ಇತ್ತ ಕಾವೇರಿ ತನ್ನ ಮಗ ತನ್ನ ಜೊತೆಗೇ ಇರಬೇಕು ಎಂದು ಕೀರ್ತಿ ಮನೆಗೆ ಹೋಗಿ, ಲಕ್ಷ್ಮಿ ವಿರುದ್ಧ ಮಾತನಾಡಿ, ಕೀರ್ತಿಗೆ ಲಕ್ಷ್ಮಿ ಮೇಲೆ ಇನ್ನಷ್ಟು ದ್ವೇಷ ಬೆಳೆಯುವ ಹಾಗೆ ಮಾಡಿದ್ದಾಳೆ. ಇನ್ನು ಆಡಿಯೋ ಕಂಪನಿ ಸುಕನ್ಯಾ ಲಕ್ಷ್ಮಿ ಬರೆದಿರುವ ಹಾಡನ್ನು ಪ್ರೊಡ್ಯುಸ್ ಮಾಡುವುದಕ್ಕೆ ಒಪ್ಪಿದ್ದು, ಹಾಡುವುದಕ್ಕೆ ವೈಷ್ಣವ್ ಕೂಡ ರೆಡಿ. ಆದರೆ ಹಾಡಿನಲ್ಲಿ ವೈಷ್ಣವ್ ಜೊತೆಗೆ ನಟಿಸೋದು ಯಾರು ಎನ್ನುವುದಕ್ಕೆ ಸುಕನ್ಯಾ ಹೊಸ ಮುಖ ಪರಿಚಯಿಸಿದರೆ ಒಳ್ಳೆಯದು ಎಂದುಕೊಂಡರೆ.

ಇತ್ತ ಕೀರ್ತಿ ಸುಕನ್ಯಾಗೆ ಕಾಲ್ ಮಾಡಿ, ತನ್ನನ್ನೇ ಹಾಕಿಕೊಳ್ಳಬೇಕು ಎಂದು ಬ್ಲ್ಯಾಕ್ ಮೇಲ್ ಮಾಡೋದಕ್ಕೆ ಟ್ರೈ ಮಾಡಿದ್ದಾಳೆ, ಆದರೆ ಮಾತಿಗೆ ಸೋಲದ ಸುಕನ್ಯಾ ಹೊಸ ಪರಿಚಯವೇ ಮಾಡುವುದಾಗಿ ಕೀರ್ತಿಗೆ ಚಾಲೆಂಜ್ ಮಾಡಿದ್ದಾಳೆ. ಮತ್ತೊಂದು ಕಡೆ ವೈಷ್ಣವ್ ಮತ್ತು ಸುಕನ್ಯಾ ಸೇರಿ ಲಕ್ಷ್ಮಿಯೇ ಈ ಹಾಡಿನಲ್ಲಿ ವೈಷ್ಣವ್ ಜೊತೆಗೆ ಕಾಣಿಸಿಕೊಲ್ಲಬೇಕು ಎಂದು ಪ್ಲಾನ್ ಮಾಡಿ, ಲಕ್ಷ್ಮಿಗೆ ಸರ್ಪ್ರೈಸ್ ಕೊಡಲಿದ್ದಾರೆ.

ಈ ಸರ್ಪ್ರೈಸ್ ಲಕ್ಷ್ಮಿಗೆ ಮಾತ್ರವಲ್ಲ, ವೀಕ್ಷಕರಿಗೆ ಇನ್ನುಮುಂದಿನ ಕಥೆ ಹೆಚ್ಚು ಸರ್ಪ್ರೈಸ್ ನೀಡಲಿದೆ. ಲಕ್ಷ್ಮಿ ಹೀರೋಯಿನ್ ಆಗಿ ಆಯ್ಕೆಯಾದರೆ, ಕಾವೇರಿ ಮತ್ತು ಕೀರ್ತಿ ಇಬ್ಬರು ಚೆನ್ನಾಗಿ ಉರ್ಕೊಳ್ತಾರೆ. ಲಕ್ಷ್ಮಿ ವಿರುದ್ಧ ಇನ್ನೇನಾದರೂ ಮಾಡುವ ಪ್ರಯತ್ನ ಮಾಡ್ತಾರೆ. ಒಟ್ಟಿನಲ್ಲಿ ಕಥೆ ಇನ್ನಷ್ಟು ರೋಚಕ ಹಂತದಲ್ಲಿ ಸಾಗುವುದಂತೂ ಪಕ್ಕಾ ಆಗಿದ್ದು, ವೀಕ್ಷಕರಿಗೆ ಮನರಂಜನೆ ಸಿಗುವುದರಲ್ಲಿ ಸಂಶಯ ಅಂತೂ ಇಲ್ಲ.

Leave A Reply

Your email address will not be published.