Deepavali Horoscope: ದೀಪಾವಳಿ ಹಬ್ಬದ ದಿನ ಈ ರಾಶಿಗಳಿಗೆ ಅದೃಷ್ಟ ಶುರು, ಇನ್ಮುಂದೆ ನಿಮ್ಮ ಬದುಕೇ ಬದಲು

0 18

Deepavali Horoscope: ಇಂದು ದೀಪಾವಳಿ ಹಬ್ಬ, ಈ ಹಬ್ಬವನ್ನು ಮೂರು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಭಾರತದ ವಿವಿಧ ಕಡೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ದೀಪಾವಳಿ ಹಬ್ಬದ ಆಚರಣೆ ಮಾಡಲಾಗುತ್ತದೆ. ಲಕ್ಷ್ಮೀದೇವಿ, ಕುಬೇರ ಮತ್ತು ಗಣೇಶನ ಆರಾಧನೆ ಮಾಡಲಾಗುತ್ತದೆ. ಹಾಗೆಯೇ ಜ್ಯೋತಿಷ್ಯದ ಪ್ರಕಾರ ಕೂಡ ದೀಪಾವಳಿ ವಿಶೇಷವಾದ ಹಬ್ಬ. ಈ ದಿನ ಮಹಾಲಕ್ಷ್ಮಿ ಯೋಗ, ಆಯುಷ್ಮಾನ್ ಯೋಗ, ಸೌಭಾಗ್ಯ ಯೋಗ, ಆದಿತ್ಯ ಮಂಗಳ ಯೋಗ ಹಾಗೂ ಇನ್ನಿತರ ಯೋಗಗಳು ರೂಪುಗೊಳ್ಳಲಿದೆ. ಈ ಯೋಗಗಳ ಶುಭಫಲವು ಕೆಲವು ರಾಶಿಗಳ ಮೇಲೆ ವಿಶೇಷವಾಗಿ ಇರಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕರ್ಕಾಟಕ ರಾಶಿ :- ದೀಪಾವಳಿ ಇವರಿಗೆ ಶುಭ ಸಮಯ ಆಗಿದೆ, ಹಬ್ಬವನ್ನು ಸಂತೋಷದಿಂದ ಆಚರಣೆ ಮಾಡುತ್ತಾರೆ. ಮನೆಯವರ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತೀರಿ. ಹಬ್ಬದ ಗಿಫ್ಟ್ ಸಿಗುತ್ತದೆ, ಈ ವೇಳೆ ಐಷಾರಾಮಿ ವಸ್ತುಗಳ ಖರೀದಿ ಮಾಡುತ್ತೀರಿ. ನಿಮ್ಮ ಆದಾಯದ ಮೂಲ ಹೆಚ್ಚಾಗುತ್ತದೆ. ಮನೆಗೆ ವಿಶೇಷ ಅತಿಥಿಗಳ ಆಗಮನ ಆಗಲಿದೆ.

ಕನ್ಯಾ ರಾಶಿ :- ದೀಪಾವಳಿ ಹಬ್ಬ ನಿಮಗೆ ವಿಶೇಷ ಫಲ ನೀಡಲಿದೆ, ಈ ವೇಳೆ ನಿಮಗೆ ಅದೃಷ್ಟ ಸಾಥ್ ನೀಡಲಿದ್ದು, ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿ ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಶತ್ರುಗಳು ನಿಮ್ಮ ವಿರುದ್ಧ ಗೆಲ್ಲಲಾಗದೆ ಸೋಲು ಅನುಭವಿಸುತ್ತಾರೆ. ಹಬ್ಬದ ವೇಳೆ ಮನೆ ಅಲಂಕಾರ ಮಾಡಿ ಪಿಳ್ಳೆಯ ಊಟ ಸವಿಯುತ್ತೀರಿ. ಮನೆಯಲ್ಲಿರುವ ತೊಂದರೆಗಳು ಸರಿಹೋಗುತ್ತದೆ, ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೆಚ್ಚು ಲಾಭವಾಗುತ್ತದೆ.

ವೃಶ್ಚಿಕ ರಾಶಿ :- ದೀಪಾವಳಿ ಹಬ್ಬ ನಿಮಗೆ ಲಕ್ಷ್ಮೀದೇವಿಯ ವಿಶೇಷ ಆಶೀರ್ವಾದ ನೀಡುತ್ತದೆ. ಹಬ್ಬದ ಆಚರಣೆ ಜೋರಾಗಿ ಮಾಡುತ್ತೀರಿ. ಬ್ಯುಸಿನೆಸ್ ನಲ್ಲಿ ಏಳಿಗೆ ಇರುತ್ತದೆ, ಸಮಾಜದಲ್ಲಿ ನಿಮ್ಮ ಯಶಸ್ಸು ಕೀರ್ತಿ ಹೆಚ್ಚಾಗುತ್ತದೆ. ಬೇರೆಯವರ ಬಳಿ ಇರುವ ನಿಮ್ಮ ಹಣ ವಾಪಸ್ ಸಿಗುತ್ತದೆ. ಈ ವೇಳೆ ಸಂತೋಷ ಇರುತ್ತದೆ, ಫ್ರೆಂಡ್ಸ್ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತೀರಿ..ಸಾಲದ ಸಮಸ್ಯೆ ಮತ್ತು ಹಳೆಯ ಆರೋಗ್ಯ ಸಮಸ್ಯೆಗಳು ಬಗೆಹರಿಯುತ್ತದೆ.

ಮಕರ ರಾಶಿ :- ಹಬ್ಬದಿಂದ ನಿಮ್ಮ ಬದುಕಿನಲ್ಲಿ ಒಳ್ಳೆಯ ಬದಲಾವಣೆ ಉಂಟಾಗಲಿದೆ. ದೇವರ ಕೆಲಸಗಳಲ್ಲಿ ಪಾಲ್ಗೊಳ್ಳುತ್ತೀರಿ. ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುತ್ತೀರಿ. ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳುತ್ತೀರಿ. ಅಕ್ಕಪಕ್ಕದವರ ಜೊತೆಗೆ ಸಂಬಂಧ ಚೆನ್ನಾಗಿರುತ್ತದೆ.. ದೊಡ್ಡವರ ಆಶೀರ್ವಾದ ಸಿಗುತ್ತದೆ, ಈ ವೇಳೆ ಬಟ್ಟೆ ಬ್ಯುಸಿನೆಸ್ ಮಾಡುವವರಿಗೆ ಭಾರಿ ಲಾಭ.

Leave A Reply

Your email address will not be published.