Kannada Actor: ಕನ್ನಡದಲ್ಲಿ ಮೊದಲು ಕೋಟಿ ರೂಪಾಯಿ ಸಂಭಾವನೆ ಪಡೆದ ನಟ ಯಾರು ಗೊತ್ತಾ?

0 32

Kannada Actor: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಗಲಿ ಸುಮಾರು 2 ವರ್ಷ ಆಗುತ್ತಿದೆ, ಆದರೆ ಇಂದಿಗೂ ಕೂಡ ಅಪ್ಪು ಅವರನ್ನು ಯಾವ ಅಭಿಮಾನಿ ಕೂಡ ಮರೆತಿಲ್ಲ. ಅಪ್ಪು ಅವರಂದ್ರೆ ಎಲ್ಲರಿಗು ಅಷ್ಟು ಪ್ರೀತಿ, ಎಲ್ಲರಿಗೂ ಅಷ್ಟು ಹತ್ತಿರವಾಗಿದ್ದಾರೆ. ಯಾವುದೇ ಕಾರ್ಯಕ್ರಮ ಆಗಲಿ ಅಪ್ಪು ಅವರನ್ನು ನೆನೆಯದೆ ನಡೆಯುವುದಿಲ್ಲ ಎಂದು ಹೇಳಬಹುದು. ಕನ್ನಡ ಚಿತ್ರರಂಗದಲ್ಲಿ ಕೋಟಿ ಸಂಭಾವನೆ ಪಡೆದ ಮೊದಲ ನಟ ಕೂಡ ಅಪ್ಪು ಅವರೇ ಎನ್ನುವುದು ಹಲವರಿಗೆ ಗೊತ್ತಿಲ್ಲದ ವಿಚಾರ.

ಇಡೀ ದೊಡ್ಮನೆ ಕುಟುಂಬ ಜನರಿಗೆ ತುಂಬಾ ಹತ್ತಿರವಾಗಿದೆ, ಅಣ್ಣಾವ್ರು, ಪಾರ್ವತಮ್ಮ ಅವರು, ಶಿವಣ್ಣ ಅವರು ರಾಘಣ್ಣ ಅವರು ಮತ್ತು ಅಪ್ಪು ಅವರು ಇವರೆಲ್ಲರೂ ಕೂಡ ಸರಳತೆಗೆ ಮತ್ತೊಂದು ಹೆಸರಾಗಿ ಬದುಕಿ ಜನರಿಗೆ ಮಾದರಿ ಆಗಿರುವವರು. ಇವರೆಲ್ಲರು ಕಷ್ಟದಲ್ಲಿ ಇರುವ ಜನರಿಗೆ ಸಹಾಯ ಮಾಡುತ್ತಾ, ಒಳ್ಳೆಯತನ ಸರಳತೆ ಇವುಗಳನ್ನು ಪಾಲಿಸುವ ಹಾಗೆ ಜನರಿಗೆ ಪ್ರೇರಣೆ ನೀಡಿದವರು. ಅಪ್ಪು ಅವರ ಬಗ್ಗೆ ಅಂತೂ ಎಷ್ಟು ಹೇಳಿದರೂ ಕಡಿಮೆಯೇ.

ಅಪ್ಪು ಅವರು ಇದ್ದಾಗ ಅದೆಷ್ಟು ಜನರಿಗೆ ಸಹಾಯ ಮಾಡಿದ್ದಾರೆ ಎನ್ನುವುದು ಲೆಕ್ಕಕ್ಕಿಲ್ಲ, ಅಪ್ಪು ಅವರು ತಾವು ಸಹಾಯ ಮಾಡಿದ್ದನ್ನು ಎಲ್ಲಿಯು ಹೇಳುತ್ತಿರಲಿಲ್ಲ, ಜನರಿಗೆ ಹೇಳುವುದು ಬೇಡ ಎನ್ನುತ್ತಿದ್ದರು. ಆದರೆ ಅವರು ಹೋದ ಬಳಿಕ ಸಾಕಷ್ಟು ಜನ ಅಪ್ಪು ಅವರಿಂದ ನಮಗೆ ಸಹಾಯ ಆಗಿತ್ತು ಎಂದು ತಾವೇ ಬಂದು ಹೇಳುತ್ತಿದ್ದರು. ಆಗಲೇ ಅಪ್ಪು ಅವರು ಎಂಥಾ ದೇವತಾ ಮನುಷ್ಯ ಎಂದು ಜನರಿಗು ಗೊತ್ತಾಗಿದ್ದು. ಹಲವು ಕಾರಣಗಳಿಂದ ಅಪ್ಪು ಅವರು ಜನರ ಮನಸ್ಸಿಗೆ ಬಹಳ ಹತ್ತಿರವಾಗಿದ್ದಾರೆ.

ಅಪ್ಪು ಅವರು ಭಾರತ ಚಿತ್ರರಂಗದ ಸ್ಟಾರ್ ನಟನ ಮಗ ಆಗಿದ್ದರು ಸಹ, ತಮ್ಮ ಸ್ವಂತ ಪ್ರತಿಭೆ ಇಂದ ಹೆಸರು ಮಾಡಿ, ಜನರ ಮನಸ್ಸಿನಲ್ಲಿ ಉಳಿದವರು ಅಪ್ಪು. ಮೊದಲ ಸಿನಿಮಾದಲ್ಲೇ ಪವರ್ ಫುಲ್ ಆಗಿ ನಟಿಸಿ ಹೆಸರು ಮಾಡಿದ ಅಪ್ಪು ಅವರು ಕೋಟಿ ಸಂಭಾವನೆ ಪಡೆದ ಕನ್ನಡದ ಮೊದಲ ಹೀರೋ, ಈ ವಿಷಯ ಹಲವರಿಗೆ ಗೊತ್ತಿಲ್ಲ. ತಮ್ಮ ಮೂರನೇ ಸಿನಿಮಾಗೆ ಅಪ್ಪು ಅವರು ಕೋಟಿ ಸಂಭಾವನೆ ಪಡೆದಿದ್ದರು.

ಅಪ್ಪು ಅವರ ಮೂರನೇ ಸಿನಿಮಾ ವೀರ ಕನ್ನಡಿಗ, ಈ ಸಿನಿಮಾಗೆ ಅವರು ಪಡೆದ ಸಂಭಾವನೆ ₹99,99,999 ರೂಪಾಯಿಗಳು. ಈ ರೀತಿಯಲ್ಲಿ ಕನ್ನಡದಲ್ಲಿ ಮೊದಲು ಕೋಟಿ ಸಂಭಾವನೆ ಪಡೆದ ನಟ. ಅಭಿಮಾನಿಗಳ ಪಾಲಿನ ಪ್ರೀತಿಯ ಅಪ್ಪು, ತಾವು ಎಷ್ಟೇ ದೊಡ್ಡ ವ್ಯಕ್ತಿ ಆಗಿದ್ದರು, ಸರಳತೆ ಇಂದ, ಆ ಮುಗ್ಧ ನುಗುವಿನಿಂದಲೇ ಎಲ್ಲರಿಗೂ ಹತ್ತಿರವಾದವರು. ಇಂದು ಕೂಡ ಅಪ್ಪು ಅವರು ಅಭಿಮಾನಿಗಳ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.

Leave A Reply

Your email address will not be published.