Bigg Boss: ವೀಕೆಂಡ್ ಬಂತು ಎಂದರೆ ಬಿಗ್ ಬಾಸ್ ಮನೆಯಲ್ಲಿ ಸಂತೋಷ್ ಆತಂಕ ಎರಡು ಇರುತ್ತದೆ. ಕಿಚ್ಚ ಸುದೀಪ್ ಅವರು ಮನೆಯ ಸ್ಪರ್ಧಿಗಳೊಡನೆ ಮಾತನಾಡಿ, ಸರಿತಪ್ಪುಗಳನ್ನು ತಿಳಿಸಿ ಕೊಡುತ್ತಾರೆ. ಹಾಗೆಯೇ ಸ್ಪರ್ಧಿಗಳ ಜೊತೆಗೆ ಸಾಕಷ್ಟು ತಮಾಷೆಯನ್ನು ಕೂಡ ಮಾಡುತ್ತಾರೆ. ಇದೆಲ್ಲವೂ ಸಂತೋಷ ತರುವಂಥ ವಿಷಯವಾದರೆ, ದುಃಖದ ವಿಚಾರ ವೀಕೆಂಡ್ ಎಪಿಸೋಡ್ ನಲ್ಲಿ ಎಲಿಮಿನೇಷನ್ ಇರುತ್ತದೆ.
ಪ್ರತಿ ಭಾನುವಾರ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬರುತ್ತಾರೆ. ಪ್ರತಿ ವಾರ ಮನೆಯಿಂದ ಹೊರಹೋಗುವುದು ಯಾರು ಎನ್ನುವ ಕೂತೂಹಲ ಜನರಲ್ಲಿ ಮತ್ತು ಮನೆಯ ಸ್ಪರ್ಧಿಗಳಲ್ಲಿ ಇರುತ್ತದೆ. ಅದೇ ರೀತಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದವರು ಯಾರು ಎನ್ನುವ ಕುತೂಹಲದ ಜೊತೆಗೆ ಒಂದು ಬಿಗ್ ಟ್ವಿಸ್ಟ್ ಕೂಡ ಇದೆ. ಅದೇನು ಎನ್ನುವುದು ಇಂದಿನ ಸಂಚಿಕೆಯ ಪ್ರೋಮೋದಲ್ಲಿ ಗೊತ್ತಾಗಿದೆ..
ಕಿಚ್ಚ ಸುದೀಪ್ ಅವರು ವರ್ತೂರ್ ಸಂತೋಷ್ ಅವರನ್ನು ಮನೆಯಿಂದ ಸೇವ್ ಮಾಡಿದ್ದಾರೆ. ವರ್ತೂರ್ ಸಂತೋಷ್ ಅವರೇ ನೀವು ಸೇಫ್ ಆಗಿದ್ದೀರಿ ಎಂದು ಹೇಳಿದಾಗ ಸಂತೋಷ್ ಅವರು ಮನೆಯಿಂದ ಹೊರಗಡೆ ನಡೆದ ಒಂದು ಘಟನೆ ಇಂದ ನನಗೆ ಮನೆಯಲ್ಲಿ ಇರೋದಕ್ಕೆ ಆಗ್ತಾ ಇಲ್ಲ. ನಾನು ಹೋಗ್ತೀನಿ ಎಂದು ಕಣ್ಣೀರು ಹಾಕುತ್ತಾರೆ. ಆಗ ಸುದೀಪ್ ಅವರು ವರ್ತೂರ್ ಸಂತೋಷ್ ಅವರಿಗೆ ಸುಮಾರು 34 ಲಕ್ಷದ 15 ಸಾವಿರ ವೋಟ್ ಗಳು ಬಂದಿವೆ ಎನ್ನುವುದನ್ನು ಹೇಳುತ್ತಾರೆ.
ಹಾಗೆಯೇ ಇದು ಜನರ ತೀರ್ಮಾನ ತಾವು ಜನರ ವಿರುದ್ಧ ಹೋಗೋದಿಲ್ಲ ಎಂದು ಹೇಳುವ ಸುದೀಪ್ ಅವರು ವೇದಿಕೆಯಿಂದ ಹೊರಹೋಗಿದ್ದಾರೆ. ಇತ್ತ ವರ್ತೂರ್ ಸಂತೋಷ್ ಅವರನ್ನು ಮನೆಯವರು ಮನೆಯಲ್ಲೇ ಇರಿ ಎಂದು ಕನ್ವಿನ್ಸ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ವರ್ತೂರ್ ಸಂತೋಷ್ ಅವರು ಮನೆಯವರ ಮಾತನ್ನು ಕೇಳದೆ ತಾವು ಹೋಗಬೇಕು ಎಂದು ಬಾಗಿಲಿನಿಂದ ಹೊರ ಹೋಗುತ್ತಿರುವ ರೀತಿ ಪ್ರೋಮೋದಲ್ಲಿ ನೋಡಬಹುದು.
ಇದೀಗ ಈ ಪ್ರೊಮೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಿಜಕ್ಕೂ ಇಂದು ನೀತು ಅವರು ಎಲಿಮಿನೇಟ್ ಆಗಿದ್ದು, ಅವರು ಸೇವ್ ಆಗಿ, ವರ್ತೂರ್ ಸಂತೋಷ್ ಅವರು ಹೋಗಲೇಬೇಕು ಎನ್ನುತ್ತಿರುವ ಕಾರಣ ಸಂತೋಷ್ ಅವರನ್ನೇ ಹೊರಗೆ ಕಳಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.