Deepavali: ದೀಪಾವಳಿ ಹಬ್ಬ ಇದು ಇಡೀ ಭಾರತದಲ್ಲಿ ಬಹಳ ದೊಡ್ಡದಾಗಿ ಆಚರಣೆ ಮಾಡಲಾಗುವ ಹಬ್ಬ. ಈ ಹಬ್ಬದ ದಿನ ಲಕ್ಷ್ಮೀದೇವಿ ಮತ್ತು ಗಣೇಶನನ್ನು ಪೂಜೆ ಮಾಡಲಾಗುತ್ತದೆ. ಈ ದಿವಸ ಲಕ್ಷ್ಮೀದೇವಿಯನ್ನು ಒಲಿಸಿಕೊಂಡು, ಹಣ ಐಶ್ವರ್ಯದ ಆಶೀರ್ವಾದ ಪಡೆಯುವ ಪೂಜೆ ಮಾಡುತ್ತಾರೆ. ಇಂದು ನೀವು ಒಂದು ರೂಪಾಯಿಯ ನಾಣ್ಯವನ್ನು ಬಳಸಿ ಇದೊಂದು ಕೆಲಸ ಮಾಡಿದರೆ, ಸಾಕು ಸಾಕು ಎಂದರು ಉಳಿಯುವಷ್ಟು ಹಣ ನಿಮ್ಮದಾಗುತ್ತದೆ.
ಒಂದು ರೂಪಾಯಿ ನಾಣ್ಯದಿಂದ ಹಣ ಗಳಿಸಬಹುದು, ಇಂದು ರಾತ್ರಿ ಈ ರೀತಿ ಮಾಡಿ, ಹಣದ ವಿಚಾರದಲ್ಲಿ ಎಲ್ಲವೂ ನಿಮ್ಮದಾಗೋದು ಗ್ಯಾರಂಟಿ..
*ದೀಪಾವಳಿ ವಿಶೇಷವಾದ ಹಬ್ಬ, ಈ ದಿವಸ ನೀವು ಅನುಸರಿಸುವ ಕೆಲವು ಕ್ರಮಗಳು ನಿಮ್ಮ ಬದುಕನ್ನೇ ಬದಲಾಯಿಸಬಹುದು. ಈ ದಿವಸ ನೀವು ದೇವರಿಗೆ ಪೂಜೆ ಮಾಡುವುದರ ಜೊತೆಗೆ ಕೆಲವು ಕೆಲಸ ಮಾಡಿದರೆ ನಿಮಗೆ ದೇವರ ಆಶೀರ್ವಾದ ಸಿಗುತ್ತದೆ. ಈ ಹಬ್ಬದ ದಿನ ಲಕ್ಷ್ಮೀದೇವಿ ಮತ್ತು ಗಣೇಶನ ಪೂಜೆ ಮಾಡುವುದರ ಜೊತೆಗೆ ಒಂದು ರೂಪಾಯಿಯ ನಾಣ್ಯ ಬಳಸಿ ಈ ಕೆಲಸ ಮಾಡಿ..
*ದೀಪಾವಳಿ ಹಬ್ಬದ ದಿನ ಲಕ್ಷ್ಮೀದೇವಿಯ ಪೂಜೆ ಮಾಡುವಾಗ, ಲಕ್ಷ್ಮೀದೇವಿಯ ಪಾದಗಳಿಗೆ ಒಂದು ರೂಪಾಯಿಯನ್ನು ಅರ್ಪಿಸಿ ಪೂಜೆ ಮಾಡಿ. ನಂತರ ಇಡೀ ರಾತ್ರಿ ನಿಮ್ಮ ಮನೆಯ ಛಾವಣಿಯ ಮೇಲೆ ಇರುವ ದೀಪಗಳ ಕೆಳಗೆ ಈ ನಾಣ್ಯವನ್ನು ಇಡಿ. ಬಳಿಕ ಇದೇ ನಾಣ್ಯವನ್ನು ಮನೆಯಲ್ಲಿ ನೀವು ಹಣ ಇಡುವ ಜಾಗದಲ್ಲಿ ಇಡಿ. ನಾಣ್ಯವನ್ನು ಹುಷಾರಾಗಿ ಇಡಿ. ಆಗ ನಿಮಗೆ ಹಣದ ವಿಚಾರದಲ್ಲಿ ತೊಂದರೆ ಅನುಭವಿಸುವುದಿಲ್ಲ.
*ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಲಕ್ಷ್ಮೀದೇವಿಯ ಹತ್ತಿರ ಪೂಜೆಯ ವೇಳೆ ಇಡುವ ಒಂದು ರೂಪಾಯಿ ನಾಣ್ಯವನ್ನು ಒಂದು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ, ಆ ನಾಣ್ಯವನ್ನು ನುಮ್ಮ ಮನೆಯಲ್ಲಿ ಹುಷಾರಾಗಿ ಇಟ್ಟುಕೊಳ್ಳಿ. ಈ ರೀತಿ ಮಾಡಿದರೆ ನಿಮ್ಮ ಐಶ್ವರ್ಯ ಜಾಸ್ತಿ ಆಗುತ್ತಲೇ ಇರುತ್ತದೆ.