Pooja Kannan: ಅಕ್ಕನಷ್ಟೇ ಮುದ್ದಾಗಿದ್ದಾರೆ ನಟಿ ಸಾಯಿಪಲ್ಲವಿ ತಂಗಿ, ವೈರಲ್ ಆಗ್ತಿದೆ ಫೋಟೋಸ್

Written by Pooja Siddaraj

Published on:

Pooja Kannan: ಸಾಯಿಪಲ್ಲವಿ ಇವರ ಹೆಸರು ಕೇಳಿದರೆ ಎಲ್ಲರಿಗೂ ಸಂತೋಷವಾಗುತ್ತದೆ ಎಂದರೆ ತಪ್ಪಲ್ಲ. ಚಿತ್ರರಂಗ ಕಂಡಿರುವ ಅದ್ಭುತವಾದ ನಟಿಯರಲ್ಲಿ ಇವರು ಕೂಡ ಒಬ್ಬರು. ಸಾಯಿಪಲ್ಲವಿ ಅವರು ನಟಿಸುವ ಎಲ್ಲಾ ಸಿನಿಮಾಗಳು, ಅವರ ಪಾತ್ರಗಳು ಎಲ್ಲರಿಗೂ ಬಹಳ ಇಷ್ಟವಾಗುತ್ತದೆ. ಇವರ ಪರ್ಸನಲ್ ಲೈಫ್ ಬಗ್ಗೆ ಹೇಳುವುದಾದರೆ, ಇವರಿಗೆ ಒಬ್ಬರು ಮುದ್ದಾದ ತಂಗಿ ಇದ್ದಾರೆ, ಅವರು ಯಾರು? ಏನು ಮಾಡುತ್ತಿದ್ದಾರೆ ಗೊತ್ತಾ?

ಸಾಯಿಪಲ್ಲವಿ ಅವರು ತಮಿಳುನಾಡಿನಲ್ಲಿ ಹುಟ್ಟಿ ಬೆಳೆದ ಹುಡುಗಿ. ಆದರೆ ಇವರು ನಟನೆಯ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು ಮಲಯಾಳಂ ಚಿತ್ರರಂಗದ ಮೂಲಕ, ಪ್ರೇಮಂ ಇವರ ಮೊದಲ ಸಿನಿಮಾ, ಮೊದಲ ಸಿನಿಮಾದಲ್ಲೇ ತಮ್ಮ ಅಭಿನಯ ಮತ್ತು ನಟನೆಯ ಮೂಲಕ ಭಾರಿ ದೊಡ್ಡ ಕ್ರೇಜ್ ಸೃಷ್ಟಿಸಿಕೊಂಡಿದ್ದಾರೆ ಸಾಯಿಪಲ್ಲವಿ. ನ್ಯಾಚುರಲ್ ಬ್ಯೂಟಿ ಎಂದೇ ಅಭಿಮಾನಿಗಳು ಇವರನ್ನು ಕರೆಯುತ್ತಾರೆ.

ಸಾಯಿಪಲ್ಲವಿ ಅವರು ಬೇರೆ ನಟಿಯರ ಹಾಗೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದಿಲ್ಲ, ನಮ್ಮ ಮನೆಯ ಹುಡುಗಿ ಎಂದು ಅನ್ನಿಸುವ ಹಾಗೆ ಇರುತ್ತಾರೆ. ಅವರು ಆಯ್ಕೆ ಮಾಡಿಕೊಳ್ಳುವ ಪಾತ್ರಗಳು ಕೂಡ ಅದೇ ರೀತಿ, ಮನಸ್ಸಿಗೆ ತುಂಬಾ ಹತ್ತಿರ ಎನ್ನಿಸುವಂಥ ಪಾತ್ರಗಳೇ ಆಗಿರುತ್ತದೆ. ಸಾಯಿಪಲ್ಲವಿ ಅವರ ಡ್ಯಾನ್ಸ್ ಬಗ್ಗೆ ಅಂತೂ ಹೇಳುವ ಹಾಗೆ ಇಲ್ಲ, ಎಲ್ಲಾ ಅಭಿಮಾನಿಗಳಿಗೆ ಇವರ ಡ್ಯಾನ್ಸ್ ಮೇಲೆ ವಿಶೇಷವಾದ ಕ್ರೇಜ್ ಇದೆ. ಅವರ ಡ್ಯಾನ್ಸ್ ಕೂಡ ಅಷ್ಟೇ ಅದ್ಭುತ ಎನ್ನಬಹುದು.

ಭಾರತದೆಲ್ಲೆಡೆ ದೊಡ್ಡ ಅಭಿಮಾನಿ ಹೊಂದಿರುವ ನಟಿ ಸಾಯಿಪಲ್ಲವಿ ಅವರು ಅಷ್ಟೇ ದೊಡ್ಡ ಹೆಸರು ಮಾಡಿದ್ದಾರೆ, ಇನ್ನು ಇವರ ಪರ್ಸನಲ್ ಲೈಫ್ ಬಗ್ಗೆ ಹೇಳುವುದಾದರೆ, ಸಾಯಿಪಲ್ಲವಿ ಅವರ ತಂದೆ ಸೆಂತಾಮರೈ ಕಣ್ಣನ್, ಇವರ ತಾಯಿ ರಾಧಾ ಕಣ್ಣನ್. ಇನ್ನು ಸಾಯಿಪಲ್ಲವಿ ಅವರಿಗೆ ಒಬ್ಬ ತಂಗಿ ಸಹ ಇದ್ದಾರೆ, ಅವರ ಹೆಸರು ಪೂಜಾ ಕಣ್ಣನ್. ಪ್ರಸ್ತುತ ವಿದೇಶದಲ್ಲಿ ಓದುತ್ತಿದ್ದಾರೆ ಪೂಜಾ. ವಿದೇಶದಲ್ಲಿ ಮಾಸ್ಟರ್ಸ್ ಮಾಡುತ್ತಿದ್ದಾರೆ. ಈ ಹಿಂದೆ ಅಕ್ಕನ ಜೊತೆಗೆ ಕೆಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು.

ಪೂಜಾ ಅವರು ಓದುತ್ತಿದ್ದಾರೆ ಎನ್ನುವುದರ ಜೊತೆಗೆ ಒಬ್ಬ ನಟಿ ಕೂಡ ಹೌದು, ಕೆಲವು ಶಾರ್ಟ್ ಮೂವೀಸ್ ಗಳಲ್ಲಿ ನಟಿಸಿರುವ ಪೂಜಾ ಇತ್ತೀಚೆಗೆ ಒಂದು ತಮಿಳು ಸಿನಿಮಾದಲ್ಲಿ ಕೂಡ ನಟಿಸಿದ್ದರು. ಈ ಸಿನಿಮಾದಲ್ಲಿ ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು. ಇದೀಗ ಇವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಫೋಟೋಸ್ ಗಳನ್ನು ಶೇರ್ ಮಾಡುತ್ತಿದ್ದಾರೆ. ಅಭಿಮಾನಿಗಳೆಲ್ಲರು ಅಕ್ಕನ ಹಾಗೆ ಮುದ್ದಾಗಿದ್ದಾರೆ ಎನ್ನುತ್ತಿದ್ದಾರೆ.

Leave a Comment