Horoscope: 10 ವರ್ಷಗಳ ಬಳಿಕ ಒಂದಾಗುತ್ತಿದ್ದಾರೆ ಕೇತು ಮತ್ತು ಶುಕ್ರ ಇದರಿಂದ ಕೆಲವು ರಾಶಿಗಳಿಗೆ ಅದೃಷ್ಟ!

Written by Pooja Siddaraj

Published on:

Horoscope: ಕೇತು ಗ್ರಹವನ್ನು ಜ್ಯೋತಿಷ್ಯ ಶಾಸ್ತ್ರದ ಪಾಪ ಗ್ರಹ ಎಂದು ಕರೆಯುತ್ತಾರೆ. ಕೇತು ಗ್ರಹ ಒಳ್ಳೆಯದನ್ನು ಮಾಡುವುದು ಕಡಿಮೆ, ಇನ್ನು ಜ್ಯೋತಿಷ್ಯದಲ್ಲಿ ಶುಕ್ರ ಗ್ರಹಕ್ಕೆ ವಿಶೇಷವಾದ ಸ್ಥಾನವಿದೆ. ಶುಕ್ರನು ಸಾಹಸ ಮತ್ತು ಐಶ್ವರ್ಯದ ಸಂಕೇತ ಎಂದು ಕರೆಯುತ್ತಾರೆ. ಇದೀಗ ಈ ಎರಡು ಗ್ರಹಗಳು ಸಹ ಕನ್ಯಾ ರಾಶಿಯಲ್ಲಿ ಒಂದಾಗಲಿದೆ. ಇದರಿಂದಾಗಿ ಒಟ್ಟು 3 ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರಲಿದ್ದು, ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ಸಂಯೋಗ ಮೇಷ ರಾಶಿಯ ಷಷ್ಟಮ ಭಾವದಲ್ಲಿ ನಡೆಯಲಿದೆ, ಈ ಕಾರಣಕ್ಕೆ ಮೇಷ ರಾಶಿಯವರಿಗೆ ಭೌತಿಕ ಸುಖ ಸಿಗಲಿದೆ. ಆರ್ಥಿಕ ವಿಷಯವಾಗಿ ಇದ್ದ ಸಮಸ್ಯೆಗಳು ಬಗೆಹರಿಯಲಿದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಈ ವೇಳೆ ಧನಲಾಭ ಪ್ರಾಪ್ತಿಯಾಗಲಿದೆ. ಈ ಕಾರಣಕ್ಕೆ ಆರ್ಥಿಕವಾಗಿ ನೀವು ಸಕ್ಸಸ್ ಕಾಣುತ್ತೀರಿ. ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವವರಿಗೆ ಮತ್ತು ಲಾಟರಿ ಪಡೆಯುವವರಿಗೆ ಇದರಿಂದ ಲಾಭ ಸಿಗುತ್ತದೆ. ಈ ಹಿಂದೆ ಮಾಡಿರುವ ಹೂಡಿಕೆಗಳ ಮೇಲೆ ಲಾಭ ಸಿಗುತ್ತದೆ.

ಸಿಂಹ ರಾಶಿ :- ಈ ರಾಶಿಯ ಧನ ಮತ್ತು ವಾಣಿಯ ಭಾವದಲ್ಲಿ ಸಂಯೋಗ ನಡೆಯುತ್ತದೆ. ಹಾಗಾಗಿ ಈ ವೇಳೆ ನಿಮಗೆ ದಿಢೀರ್ ಧನಲಾಭ ಉಂಟಾಗಬಹುದು. ಬ್ಯುಸಿನೆಸ್ ವೃದ್ಧಿ ಆಗುವುದರಿಂದ ನಿಮಗೆ ಆರ್ಥಿಕವಾಗಿ ಲಾಭವಾಗುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರು ನೀಡಿರುವ ಹಣಕ್ಕೆ ಲಾಭ ಸಿಗುತ್ತದೆ. ಈ ವೇಳೆ ನಿಮ್ಮ ಎಲ್ಲಾ ಆಸೆಗಳು ನೆರವೇರುತ್ತದೆ, ಆರೋಗ್ಯ ಚೆನ್ನಾಗಿರುತ್ತದೆ. ನಿಮ್ಮ ಮಾತು ಉತ್ತಮವಾಗಿರುವುದರಿಂದ ಜನರು ನಿಮ್ಮ ಕಡೆಗೆ ಆಕರ್ಷಣೆಗೆ ಒಳಗಾಗುತ್ತಾರೆ.

ಕನ್ಯಾ ರಾಶಿ :- ಕೇತು ಶುಕ್ರನ ಸಂಯೋಜನೆ ಆಗುತ್ತಿರುವುದೇ ಈ ರಾಶಿಯಲ್ಲಿ ಹಾಗಾಗಿ ಇವರಿಗೆ ಹೆಚ್ಚಿನ ಲಾಭ ಸಿಗಲಿದೆ. ಈ ರಾಶಿಯ ಲಗ್ನಭಾವದಲ್ಲಿ ಗ್ರಹಗಳ ಸಂಯೋಜನೆ ಆಗುತ್ತಿರುವುದರಿಂದ ಅದೃಷ್ಟ ನಿಮಗೆ ಸಾಥ್ ಕೊಡುತ್ತದೆ., ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವೃತ್ತಿಯಲ್ಲಿ ಏಳಿಗೆ ಕಾಣುತ್ತೀರಿ, ಧಾರ್ಮಿಕ ಕಾರ್ಯಗಳನ್ನು ಮಾಡುತ್ತೀರಿ. ಈ ಕಾರಣಕ್ಕೆ ನಿಮಗೆ ನೆಮ್ಮದಿ ಸಿಗಲಿದೆ. ಈ ವೇಳೆ ನಿಮ್ಮ ಆದಾಯ ಸಹ ಜಾಸ್ತಿ ಆಗಬಹುದು. ಆದಾಯಕ್ಕೆ ಹೊಸ ಮಾರ್ಗಗಳು ಸಿಗಲಿದೆ.

Leave a Comment