Horoscope: ಜ್ಯೋತಿಷ್ಯ ರೂಪುಗೊಳ್ಳುವ ಯೋಗಗಳಿಂದ ಗ್ರಹಗಳ ವಿಶೇಷವಾದ ಪರಿಣಾಮ ಬೀರುತ್ತದೆ. ಇದೀಗ ಬರೊಬ್ಬರಿ 59 ವರ್ಷಗಳ ನಂತರ ಧನತ್ರಯೋದಶಿ ದಿನದಂದು ಗ್ರಹಗಳ ಸಂಯೋಜನೆಯಿಂದ ಅಪರೂಪದ ಯೋಗ ರೂಪುಗೊಳ್ಳುತ್ತಿದೆ. 30 ವರ್ಷಗಳ ನಂತರ ಶನಿದೇವ ಕುಂಭ ರಾಶಿಗೆ ಪ್ರವೇಶ ಮಾಡಿದ್ದಾನೆ. ಶುಕ್ರ ಕನ್ಯಾ ರಾಶಿಯಲ್ಲಿದ್ದು, ಗುರು ಮೇಷ ರಾಶಿಯಲ್ಲಿ, ಸೂರ್ಯ ತುಲಾ ರಾಶಿಯಲ್ಲಿ ಸಂಚರಿಸುತ್ತಿದ್ದಾರೆ. ಇದರಿಂದ ರೂಪುಗೊಳ್ಳುತ್ತಿರುವ ವಿಶೇಷ ಯೋಗದಿಂದ ಯಾವ ರಾಶಿಗೆಲ್ಲಾ ಒಳ್ಳೆಯದಾಗಲಿದೆ ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಧನತ್ರಯೋದಶಿ ಯೋಗದಿಂದ ನಿಮಗೆ ಹೆಚ್ಚು ಲಾಭ ಸಿಗುತ್ತದೆ. ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತದೆ.. ಹೂಡಿಕೆ ಮಾಡುವುದಕ್ಕೆ ಇದು ಉತ್ತಮವಾದ ಅವಕಾಶ ಆಗಿದೆ. ಮುಂದಿನ ಜೀವನಕ್ಕೆ ಇದು ಒಳ್ಳೆಯ ಫಲ ನೀಡುತ್ತದೆ. ಮನೆಯಲ್ಲಿ ಶಾಂತಿ ಇರಲಿದೆ.
ಮಿಥುನ ರಾಶಿ :- ಧನತ್ರಯೋದಶಿ ಯೋಗದಿಂದ ನಿಮ್ಮ ಬದುಕಿನಲ್ಲಿ ಐಶ್ವರ್ಯ ಹೆಚ್ಚಾಗುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ, ಒಳ್ಳೆಯ ಯಶಸ್ಸು ಪಡೆಯುತ್ತೀರಿ. ನಿಮ್ಮ ಆದಾಯ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ..
ಸಿಂಹ ರಾಶಿ :- ಧನತ್ರಯೋದಶಿ ಯೋಗವು ನಿಮ್ಮ ಬದುಕನ್ನು ಬೆಳಗಿಸುತ್ತದೆ. ಈ ವೇಳೆ ಯುವಕರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ಮನೆಯಲ್ಲಿ ಸಂತೋಷ ಇರುತ್ತದೆ. ಆರ್ಥಿಕ ವಿಚಾರದಲ್ಲಿ ಇದು ಒಳ್ಳೆಯದು.