Darshan: ದರ್ಶನ್ ಅವರ ಮತ್ತೊಂದು ವಿಡಿಯೋ ಶೇರ್ ಮಾಡಿದ ಪವಿತ್ರಾ ಗೌಡ! ಮತ್ತೊಮ್ಮೆ ವಿವಾದದಲ್ಲಿ ಸಿಲುಕಿಕೊಳ್ತಾರಾ ಡಿಬಾಸ್!

0 39

Darshan: ನಟ ದರ್ಶನ್ ಅವರ ಒಳ್ಳೆತನದ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆ ಇಲ್ಲ. ದರ್ಶನ್ ಅವರು ತೆರೆಮೇಲೆ ಹೇಗೆ ಹೀರೋ ಆಗಿದ್ದಾರೋ ತೆರೆ ಹಿಂದೆ ಕೂಡ ರಿಯಲ್ ಲೈಫ್ ಹೀರೋ. ಯಾರೇ ಕಷ್ಟದಲ್ಲಿದ್ದರು, ಆ ವಿಷಯ ದರ್ಶನ್ ಅವರಿಗೆ ಗೊತ್ತಾದರೆ, ಸಹಾಯ ಮಾಡದೆ ಸುಮ್ಮನೆ ಇರುವವರಲ್ಲ. ಹಾಗೆಯೇ ಸ್ನೇಹಿತರು ಎಂದರೆ ದರ್ಶನ್ ಅವರಿಗೆ ಬಹಳ ಪ್ರೀತಿ. ಫ್ರೆಂಡ್ಸ್ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಾರೆ.

ಫ್ಯಾಮಿಲಿಗು ಅಷ್ಟೇ ಪ್ರಾಮುಖ್ಯತೆ ಕೊಡುತ್ತಾರೆ. ಪತ್ನಿ, ತಾಯಿ, ಮಗ, ಅಕ್ಕ, ತಮ್ಮ, ಅಕ್ಕನ ಕುಟುಂಬ ಎಲ್ಲರನ್ನು ಕಂಡರೆ ದರ್ಶನ್ ಅವರಿಗೆ ಬಹಳ ಪ್ರೀತಿ. ಮನೆಯವರಿಗೂ ಅಷ್ಟೇ ದರ್ಶನ್ ಅವರನ್ನು ಕಂಡರೆ ಅಷ್ಟೇ ಇಷ್ಟ. ಆದರೆ ದರ್ಶನ್ ಅವರು ಕೆಲವೊಮ್ಮೆ ಪರ್ಸನಲ್ ವಿಚಾರಗಳಿಗೂ ಸುದ್ದಿಯಾಗುತ್ತಾರೆ. ಕೆಲ ದಿನಗಳ ಹಿಂದೆ ಪವಿತ್ರಾ ಗೌಡ ಎನ್ನುವ ಮಹಿಳೆಯ ವಿಚಾರದಿಂದ ಡಿಬಾಸ್ ಸುದ್ದಿಯಾಗಿದ್ದರು. ಇದೀಗ ಮತ್ತೊಮ್ಮೆ ಅದೇ ವಿಷಯಕ್ಕೆ ಸುದ್ದಿಯಾಗಿದ್ದಾರೆ.

ಒಂದೆರಡು ದಿನಗಳ ಹಿಂದೆ ಪವಿತ್ರಾ ಗೌಡ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಅದು ಅವರ ಮಗಳ ಬರ್ತ್ ಡೇ ವಿಡಿಯೋ ಆಗಿದ್ದು, ಡಿಬಾಸ್ ದರ್ಶನ್ ಅವರು ಆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಪವಿತ್ರಾ ಗೌಡ ಅವರ ಮಗಳ ಕೈಹಿಡಿದು ಕೇಕ್ ಕಟ್ ಮಾಡಿಸಿ, ಗ್ರ್ಯಾಂಡ್ ಆಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ ಡಿಬಾಸ್.

ಜೊತೆಗೆ ಪವಿತ್ರಾ ಗೌಡ ಅವರ ಮಗಳ ಜೊತೆಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ದರ್ಶನ್ ಅವರು ಪವಿತ್ರಾ ಗೌಡ ಅವರೊಡನೆ ಬಹಳ ಕ್ಲೋಸ್ ಎನ್ನುವ ವಿಷಯ ಸುದ್ದಿಯಾಗಿತ್ತು, ಅದು ನಿಜವೇ ಇರಬಹುದು ಎನ್ನುವುದು ಈಗ ಮತ್ತೊಮ್ಮೆ ಸಾಬೀತಾದ ಹಾಗೆ ಕಾಣುತ್ತಿದೆ. ಇದರಿಂದ ದರ್ಶನ್ ಅವರು ಮತ್ತೊಮ್ಮೆ ವಿವಾದಕ್ಕೆ ಸಿಲುಕಿಕೊಳ್ಳುತ್ತಾರಾ ಎನ್ನುವ ಮಾತು ಕೂಡ ಕೇಳಿಬರುತ್ತಿದೆ.

ಕೆಲ ದಿನಗಳ ಹಿಂದೆ ಜೊತೆ ಜೊತೆಯಲಿ ಧಾರವಾಹಿ ಖ್ಯಾತಿಯ ಮೇಘಾ ಶೆಟ್ಟಿ ಅವರು ಒಂದು ವಿಡಿಯೋ ಶೇರ್ ಮಾಡಿದ್ದರು, ಅದರಲ್ಲಿ ದರ್ಶನ್ ಇದ್ದರು ಹಾಗೆಯೇ ಅದು ಪವಿತ್ರ ಗೌಡ ಅವರಿಗೆ ಸಂಬಂಧಿಸಿದ ವಿಡಿಯೋ ಆಗಿದ್ದ ಕಾರಣ, ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ಮೇಘ ಶೆಟ್ಟಿ ಅವರಿಗೆ ಇನ್ಸ್ಟಾಗ್ರಾಮ್ ನಲ್ಲೇ ಕ್ಲಾಸ್ ತೆಗೆದುಕೊಂಡಿದ್ದರು. ಆ ವಿಷಯ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಪವಿತ್ರಾ ಗೌಡ ಅವರೇ ಶೇರ್ ಮಾಡಿರುವ ಈ ವಿಡಿಯೋ ಮತ್ತೆ ಸುದ್ದಿಯಾಗುತ್ತಿದೆ.

Leave A Reply

Your email address will not be published.