Bigg Boss: ಸಂಗೀತಾ ಕಾರ್ತಿಕ್ ಬಗ್ಗೆ ಹೀನಾಮಾನವಾಗಿ ಅವಮಾನ ಮಾತಾಡಿದ ನಮ್ರತಾ ಸ್ನೇಹಿತ್! ಏನಾಗಿದೆ ಬಿಗ್ ಬಾಸ್ ಮನೆಯಲ್ಲಿ

0 18

Bigg Boss: ಬಿಗ್ ಬಾಸ್ ಮನೆಯಲ್ಲಿ ದಿನಕ್ಕೊಂದು ಹೊಸ ಟ್ವಿಸ್ಟ್ ಗಳು ಕಂಡುಬರುತ್ತಿದೆ. ಮನೆ ಈಗ ಎರಡು ಗುಂಪುಗಳಾಗಿ ಡಿವೈಡ್ ಆಗಿದೆ. ಒಂದು ಗುಂಪಿನ ನಾಯಕ ಪ್ರತಾಪ್, ಮತ್ತೊಂದು ಗುಂಪಿನ ನಾಯಕಿ ಸಿರಿ. ಈ ಎರಡು ಗುಂಪುಗಳಿಗೆ ಬಿಗ್ ಬಾಸ್ ಟಾಸ್ಕ್ ನೀಡಿದ್ದು, ನಿನ್ನೆ ನೀಡಿದ ಎರಡು ಟಾಸ್ಕ್ ಗಳಲ್ಲಿ ಪ್ರತಾಪ್ ಅವರ ತಂಡವೇ ಗೆದ್ದು, ತಮ್ಮ ತಂಡದ ಇಬ್ಬರು ಸದಸ್ಯರನ್ನು ನಾಮಿನೇಷನ್ ಇಂದ ಉಳಿಸಿಕೊಂಡಿದ್ದಾರೆ ಪ್ರತಾಪ್.

ಹಾಗೆಯೇ ಆಪೋಸಿಟ್ ಟೀಮ್ ನ ಸ್ನೇಹಿತ್ ಅವರು ನಾಮಿನೇಷನ್ ಇಂದ ಸೇವ್ ಆಗುವುದನ್ನು ನಿರ್ಬಂಧಿಸಿದ್ದಾರೆ. ನಿನ್ನೆಯ ಎಪಿಸೋಡ್ ನಲ್ಲಿ ಸಂಗೀತ ಮತ್ತು ಕಾರ್ತಿಕ್ ನಡುವೆ ಸ್ವಲ್ಪ ಅಸಮಾಧಾನ ಉಂಟಾಗಿ ಜಗಳ ಕೂಡ ನಡೆಯಿತು, ಇಂದಿನ ಎಪಿಸೋಡ್ ಪ್ರೊಮೋದಲ್ಲಿ ಮತ್ತೊಂದು ಹೊಸ ಟ್ವಿಸ್ಟ್ ಕಂಡುಬಂದಿದೆ. ಅದೇನು ಎಂದರೆ, ಈ ಪ್ರೊಮೋದಲ್ಲಿ ಕಾರ್ತಿಕ್ ಮತ್ತು ಸಂಗೀತ ಇಬ್ಬರು ಸುಮ್ಮನೆ ಕುಳಿತಿದ್ದಾರೆ.

ಆಪೋಸಿಟ್ ಟೀಮ್ ನ ವಿನಯ್, ನಮ್ರತಾ, ಸ್ನೇಹಿತ್ ಮೂವರು ಕೂಡ ಇವರಿಬ್ಬರ ಬಗ್ಗೆ ಬಾಯಿಗೆ ಬಂದ ಹಾಗೆ ಅವರ ಮುಂದೆಯೇ ಬಂದು ಮಾತನಾಡಿದ್ದಾರೆ. ಆದರೆ ಕಾರ್ತಿಕ್ ಸಂಗೀತ ಒಂದು ಮಾತನ್ನು ಆಡದೆ ಕುಳಿತಿದ್ದಾರೆ, ಕಾರ್ತಿಕ್ ಎದುರು ಬಂದ ವಿನಯ್ “ಫ್ರೆಂಡ್.. ನೀನು.. ಒಬ್ಬ ಒಂಟಿ ಮನುಷ್ಯನಾಗಿ ಉಳಿಯೋದು ನೀನು ಜೀವನದಲ್ಲಿ” ಎಂದು ಹೇಳುತ್ತಾರೆ ವಿನಯ್. ನಮ್ರತಾ ಸಂಗೀತ ಅವರ ಹತ್ತಿರ ಬಂದು, “ಯಾವಳು ಬಕೆಟ್ ಹಿಡಿಯೋದು, ಅಲ್ಲಿ ಕೂತಿದ್ದಾನಲ್ಲ ಅವನು ಬಕೆಟ್ ಹಿಡಿಯೋದು..” ಎಂದು ಕಾರ್ತಿಕ್ ಅವರನ್ನು ತೋರಿಸಿ ಹೇಳುತ್ತಾರೆ ನಮ್ರತಾ.

ಇನ್ನು ಸ್ನೇಹಿತ್ ಹೆಚ್ಚು ಮಾತನಾಡಿ, “ಏನೋ ಗಂಡಸುತನ, ಏನ್ ಮಾಡಿದ್ದೀಯಾ ಈ ಮನೆಗೆ ಬಂದು? ಮನೆಗ್ ಹೋಗಿ ಸ್ಲೋ ಮೋಷನ್ ನಲ್ಲಿ ನಿನ್ನ ಮನೆಯಿಂದ ಹೊರಗೆ ಹಾಕಿದ್ ವಿಡಿಯೋ ನೋಡು, ಆಗ ಗೊತ್ತಾಗುತ್ತೆ.. ಇವ್ಳು ಯಾವಳೋ ಕ್ರಶ್ ಅಂತೆ, ಕ್ರ್ಯಾಶ್ ಆಗಿರೋಳನ್ನ ಇಟ್ಕೊಂಡು ಓಡಾಡ್ತೀಯಾ.. ನನ್ ಕಾಲನ್ನ ಏನು ನೋಡ್ತಿದ್ದೀಯಾ. ನಿನ್ ಪೊಸಿಷನ್ ಅದೇ..” ಎಂದು ಹೇಳಿದ್ದಾರೆ ಸ್ನೇಹಿತ್.

ಇದೀಗ ಈ ಪ್ರೊಮೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅವರೆಲ್ಲರು ಅಷ್ಟೆಲ್ಲಾ ಮಾತಾಡ್ತಿದ್ರು ಕಾರ್ತಿಕ್ ಸಂಗೀತ ಸುಮ್ಮನೆ ಕೂತಿರೋದು ನೋಡಿದ್ರೆ ಇದೊಂದು ಟಾಸ್ಕ್ ಇರಬಹುದು ಎಂದು ಗೊತ್ತಾಗುತ್ತಿದೆ. ಆದರೆ ಈ ಮೂರು ಜನ ಸಂಗೀತ ಕಾರ್ತಿಕ್ ಎದುರು ಆಡುತ್ತಿರುವ ಮಾತಿಗೆ ಹೊರಗಿನ ವೀಕ್ಷಕರಿಂದ ಅಸಮಧಾನ ವ್ಯಕ್ತವಾಗಿದ್ದು, ಸ್ನೇಹಿತ್ ಮೊದಲು ತನ್ನ ಬಗ್ಗೆ ತಾನು ನೋಡಿಕೊಳ್ಳಬೇಕು ಎನ್ನುತ್ತಿದ್ದಾರೆ ನೆಟ್ಟಿಗರು.

Leave A Reply

Your email address will not be published.