Horoscope: ದೀಪಾವಳಿ ಹಬ್ಬಕ್ಕೆ ಈ ರಾಶಿಯವರಿಗೆ ತಾಯಿ ಲಕ್ಷ್ಮೀದೇವಿಯ ಆಶೀರ್ವಾದದಿಂದ ಸಿಗಲಿದೆ ಅದೃಷ್ಟ

0 26

Horoscope: ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಇರಲಿದೆ. ಈ ಹಬ್ಬದ ದಿನ ತಾಯಿ ಲಕ್ಷ್ಮೀದೇವಿಗೆ ವಿಶೇಷವಾಗಿ ಪೂಜೆ ಮಾಡಿ, ತಾಯಿಯ ಆಶೀರ್ವಾದ ಪಡೆಯುತ್ತಾರೆ. ಈ ದೀಪಾವಳಿ ಹಬ್ಬದ ವೇಳೆ ಕೆಲವು ರಾಶಿಗಳ ಮೇಲೆ ತಾಯಿ ಲಕ್ಷ್ಮೀದೇವಿಯ ಆಶೀರ್ವಾದ ಸದಾ ಇರಲಿದ್ದು, ಅವರ ಅದೃಷ್ಟ ಬೆಳಗಲಿದೆ. ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ದೀಪಾವಳಿ ಹಬ್ಬದಿಂದ ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ, ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಏಳಿಗೆ ಕಾಣುತ್ತೀರಿ. ಮನೆಯಲ್ಲಿ ಸಂತೋಷ ಇರುತ್ತದೆ. ಎಲ್ಲಾ ಕೆಲಸಗಳಲ್ಲಿ ಲಾಭ ನಿಮ್ಮದಾಗುತ್ತದೆ.

ವೃಷಭ ರಾಶಿ :- ಈ ವೇಳೆ ನಿಮ್ಮ ರಾಶಿಯವರ ಬದುಕಿನಲ್ಲಿ ಅದೃಷ್ಟ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಹಿಂದೆಂದೂ ಇರದಷ್ಟು ಲಾಭ ಅದೃಷ್ಟ ಸಾಥ್ ಕೊಡುತ್ತದೆ. ಲಕ್ಷ್ಮೀದೇವಿಯ ಕೃಪೆಯಿಂದ, ಮನೆಗಳಲ್ಲಿ ಸಂತೋಷ ಇರುತ್ತದೆ. ಇನ್ನು ಮದುವೆ ಆಗಿಲ್ಲದೆ ಇರುವವರಿಗೆ ಒಳ್ಳೆಯ ಸಂಬಂಧ ಕೂಡಿ ಬರುತ್ತದೆ.

ಕರ್ಕಾಟಕ ರಾಶಿ :- ಬ್ಯುಸಿನೆಸ್ ಮಾಡುತ್ತಿರುವವರಿಗೆ ದೀಪಾವಳಿ ಹಬ್ಬದ ಸಮಯದಲ್ಲಿ ಹೆಚ್ಚಿನ ಯಶಸ್ಸು ಸಿಗುತ್ತದೆ. ನಿಮ್ಮ ಬದುಕಲ್ಲಿ ಅದೃಷ್ಟ ಇರಲಿದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಬಯಸಿದ ಹಾಗೆ ಫಲ ಸಿಗುತ್ತದೆ..

ವೃಶ್ಚಿಕ ರಾಶಿ :- ದೀಪಾವಳಿ ಹಬ್ಬದ ನಂತರ ಇವರ ಉದ್ಯೋಗ ಮತ್ತು ಬ್ಯುಸಿನೆಸ್ ಎರಡರಲ್ಲೂ ಲಾಭ ಸಿಗುತ್ತದೆ. ಬಹಳ ಸಮಯದಿಂದ ಉಳಿದಿದ್ದ ಕೆಲಸಗಳು ಪೂರ್ತಿಯಾಗುತ್ತದೆ. ಇದು ಕನಸುಗಳು ನಿಜವಾಗುವ ಸಮಯ ಆಗಿದೆ.

ಮಕರ ರಾಶಿ :- ದೀಪಾವಳಿ ಹಬ್ಬ ಇವರಿಗೆ ಮಂಗಳಕರ ಫಲಗಳನ್ನು ತರಲಿದೆ. ನಿಮ್ಮ ಆಸೆಗಳು ನೆರವೇರುತ್ತದೆ. ಅದೃಷ್ಟ ಜೊತೆಗಿರುತ್ತದೆ. ಮನಸ್ಸಿಗೆ ಸಂತೋಷ ಇರುತ್ತದೆ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ. ಯಶಸ್ಸು ನಿಮ್ಮ ಜೊತೆಗಿರುತ್ತದೆ.

Leave A Reply

Your email address will not be published.