Kiccha Sudeep: ನಿನ್ನೆಯ ಬಿಗ್ ಬಾಸ್ ಸಂಚಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಿಚ್ಚ ಸುದೀಪ್ ಅವರು ನಿನ್ನೆ ಬೆಳೆಗಳ ಬಗ್ಗೆ ಆಡಿದ ಮಾತುಗಳು ಎಲ್ಲಾ ಜನರ ಮನಗೆದ್ದಿದೆ. ಸುದೀಪ್ ಅವರು ನಿನ್ನೆಯ ಸಂಚಿಕೆಯಲ್ಲಿ ಎಲ್ಲರಿಗೂ ಕ್ಲಾಸ್ ತೆಗೆದುಕೊಂಡಿದ್ದು ಕೂಡ ಜನರಿಗೆ ಇಷ್ಟವಾಯಿತು. ಆದರೆ ಈಗ ಸುದೀಪ್ ಅವರ ಹಳೆಯ ಟ್ವೀಟ್ ಒಂದು ವೈರಲ್ ಆಗಿದೆ.
ಈ ಹಿಂದೆ ಕಿಚ್ಚ ಸುದೀಪ್ ಅವರು ಪೈಲ್ವಾನ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆ ಆಗಿತ್ತು. ಈ ಸಿನಿಮಾ ಬಿಡುಗಡೆಯಾದ ಒಂದೆರಡೇ ದಿನಗಳಲ್ಲಿ ಪೈರೆಸಿ ಆಗಿತ್ತು, ಸಿನಿಮಾದ ಹೆಚ್.ಡಿ ಪ್ರಿಂಟ್ ಗಳೇ ವೈರಲ್ ಆಗಿದ್ದವು. ಆ ವೇಳೆ ಕಿಚ್ಚ ಸುದೀಪ್ ಅವರು ಬಳೆಗಳ ಬಗ್ಗೆಯೇ ಒಂದು ಟ್ವೀಟ್ ಮಾಡಿದ್ದರು.
“ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನು ಗೊತಿಲ್ಲ. ನನ್ನ ಮೌನ, ನನ್ನ ತಾಳ್ಮೆ, ಎರಡನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ, ಇನ್ನು ಕೆಲವು ದಿನಗಳು ಮಾತ್ರ..” ಎಂದು ಟ್ವೀಟ್ ಮಾಡಿದ್ದರು ಸುದೀಪ್.
ಇದೀಗ ಈ ಟ್ವೀಟ್ ವೈರಲ್ ಆಗಿದೆ. ಸುದೀಪ್ ಅವರು ನಿನ್ನೆ ಹೇಳಿದ ಮಾತುಗಳು ವೈರಲ್ ಆಗಿವೆ, ಎಲ್ಲರ ಮೆಚ್ಚುಗೆ ಗಳಿಸುತ್ತಿದೆ. ಆದರೆ ಈ ಹಿಂದೆ ಸುದೀಪ್ ಅವರೇ ಈ ಥರ ಮಾತನಾಡಿದ್ದರು, ಇದೀಗ ನೆಟ್ಟಿಗರು ಈ ಹಳೆಯ ಟ್ವೀಟ್ ಬಗ್ಗೆ ಮಾತನಾಡುತ್ತಿದ್ದು, ಸುದೀಪ್ ಅವರು ತಾವು ಹೇಳಿದ ಮಾತುಗಳನ್ನು ನೆನಪು ಮಾಡಿಕೊಳ್ಳಬೇಕು, ಅಂದು ಸುದೀಪ್ ಅವರೇ ಆ ರೀತಿ ಹೇಳಿದ್ದರು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಸುದೀಪ್ ಅವರ ಈ ಹಳೆಯ ಟ್ವೀಟ್ ಸ್ಕ್ರೀನ್ ಶಾಟ್ ವೈರಲ್ ಆಗಿದೆ. ಸುದೀಪ್ ಅವರಿಗೆ ನೆಟ್ಟಿಗರು ಈ ಹಳೆಯ ಟ್ವೀಟ್ ಅನ್ನು ನೆನಪು ಮಾಡುತ್ತಿದ್ದಾರೆ.