Bigg Boss: ಬಿಗ್ ಬಾಸ್ ಮನೆಯಲ್ಲಿ ಈಗ ನಾಲ್ಕನೇ ವಾರದ ಎಲಿಮಿನೇಷನ್ ಮುಗಿದಿದ್ದು, ಮನೆಯಿಂದ ಹೊರಬಂದ ಸದಸ್ಯ ಯಾರು ಎನ್ನುವುದು ಗೊತ್ತಾಗಿದೆ. ಹೌದು ನಾಲ್ಕನೇ ವಾರ ಬಿಗ್ ಬಾಸ್ ಮನೆಯಿಂದ ಕನ್ನಡದ ಖ್ಯಾತ ಹಾಸ್ಯನಟ ದಿವಂಗತ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಇಂದಿನ ಎಪಿಸೋಡ್ ನಲ್ಲಿ ಅಧಿಕೃತವಾಗಿ ಗೊತ್ತಾಗಲಿದೆ.
ಈ ವಾರ ಡ್ರೋನ್ ಪ್ರತಾಪ್ ಅವರಿಗೆ ನಾಮಿನೇಷನ್ ಪಾಸ್ ಸಿಕ್ಕಿತ್ತು, ಅದನ್ನು ಅವರು ಮನೆಯ ಐದು ಹೆಣ್ಣುಮಕ್ಕಳಿಗೆ ಕೊಟ್ಟರು. ಹಾಗಾಗಿ ಆ ಐವರನ್ನು ಹೊರತುಪಡಿಸಿ, ಇನ್ನು 9 ಸದಸ್ಯರು ಮನೆಯಿಂದ ಹೊರಬರಲು ನಾಮಿನೇಟ್ ಆಗಿದ್ದರು. ಸಿರಿ, ಕಾರ್ತಿಕ್, ತುಕಾಲಿ ಸಂತು, ತನಿಷಾ, ರಕ್ಷಕ್, ಸ್ನೇಹಿತ್, ಮೈಕಲ್ ಮತ್ತು ವಿನಯ್ ಅವರು ನಾಮಿನೇಟ್ ಆಗಿದ್ದರು.
ಈ ಒಂಭತ್ತು ಜನರಲ್ಲಿ ಸಿರಿ ಅವರು ಈ ವಾರ ಮನೆಯಿಂದ ಹೊರಬಹುದು ಎನ್ನುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬಂದಿದ್ದವು. ಆದರೆ ನಿನ್ನೆಯ ಸಂಚಿಕೆಯಲ್ಲಿ ಮೊದಲು ಸೇವ್ ಆಗಿದ್ದು, ಸಿರಿ ಅವರೇ. ಬಳಿಕ ಕಾರ್ತಿಕ್ ಅವರು ಕೂಡ ಸೇವ್ ಆಗಿದ್ದಾರೆ. ಇತ್ತ ನೆಟ್ಟಿಗರು ವಿನಯ್ ಅವರು ಈ ವಾರ ಮನೆಯಿಂದ ಹೊರಬರಬೇಕು ಅವರ ದರ್ಪ ಮನೆಯವರ ಮೇಲೆ ಹೆಚ್ಚಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇನ್ನು ಕೆಲವರು ತುಕಾಲಿ ಸಂತೋಷ್ ಅವರು ಬಿಗ್ ಬಾಸ್ ಮನೆಯಿಂದ ಹೊರಬರಬೇಕು, ಅವರ ತಮಾಷೆ ಮಿತಿ ಮೀರಿದೆ ಎನ್ನುವ ಅಭಿಪ್ರಾಯ ಕೂಡ ಕೇಳಿಬಂದಿತ್ತು. ಆದರೆ ಶಾಕ್ ಎನ್ನುವ ಹಾಗೆ ಈಗ ಬಿಗ್ ಬಾಸ್ ಮನೆಯಿಂದ ಈ ವಾರ ರಕ್ಷಕ್ ಹೊರಬಂದಿದ್ದಾರೆ. ರಕ್ಷಕ್ ಈ ವಾರ ಎಲಿಮಿನೇಟ್ ಆಗಿ ಹೊರಬರುತ್ತಾರೆ ಎಂದು ಯಾರು ಊಹಿಸಿರಲಿಲ್ಲ. ಇದು ಒಂದು ರೀತಿ ಶಾಕಿಂಗ್ ಎಲಿಮಿನೇಷನ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ರಕ್ಷಕ್ ಅವರು ಸಿಕ್ಕಾಪಟ್ಟೆ ಸದ್ದು ಮಾಡಿದ್ದರು, ಟ್ರೋಲ್ ಕೂಡ ಆಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಮಾಸ್ ಡೈಲಾಗ್ ಗಳ ಮೂಲಕ ಸದ್ದು ಮಾಡಿದ್ದ ರಕ್ಷಕ್ ಬಿಗ್ ಬಾಸ್ ಮನೆಯೊಳಗೆ ಸದ್ದು ಮಾಡಲು ಸಾಧ್ಯವಾಗಿಲ್ಲ. ಬಿಗ್ ಮನೆಯೊಳಗೆ ಸೈಲೆಂಟ್ ಆಗಿಯೇ ಉಳಿದಿದ್ದರು. ಕೆಲವು ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು ಕೂಡ, ರಕ್ಷಕ್ ಅವರು ಹೆಚ್ಚು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇರಲು ಸಾಧ್ಯವಾಗಿಲ್ಲ.
ಇಂದಿನ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಅವರು ರಕ್ಷಕ್ ಅವರನ್ನು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಬಳಿಕ ಹೊರಗೆ ಕರೆಯಲಿದ್ದಾರೆ. ಈ ವಾರ ವೀಕೆಂಡ್ ಎಪಿಸೋಡ್ ಗಳು ಖಡಕ್ ಆಗಿ ನಡೆದಿದ್ದು, ಇಂದಿನ ಎಪಿಸೋಡ್ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.