Rashmika Mandanna: ರಶ್ಮಿಕಾ ಮಂದಣ್ಣ ಹೊಸ ವಿಡಿಯೋ ವೈರಲ್! ಆದರೆ ಇದು ಫೇಕ್ ಅಂತೆ

0 15

Rashmika Mandanna: ನಟಿ ರಶ್ಮಿಕಾ ಮಂದಣ್ಣ ಅವರು ಇಂದು ಪ್ಯಾನ್ ಇಂಡಿಯಾ ಹೀರೋಯಿನ್, ಕಾಲಿವುಡ್ ಬಾಲಿವುಡ್ ಎಲ್ಲಾ ಕಡೆ ಸಿನಿಮಾ ಮಾಡುತ್ತಾ ಸುದ್ದಿಯಾಗುತ್ತಾರೆ ರಶ್ಮಿಕಾ. ಇದೀಗ ರಶ್ಮಿಕಾ ಅವರು ಮತ್ತೊಮ್ಮೆ ಲಿಪ್ ಲಾಕ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಈ ಮೊದಲು ನಟ ವಿಜಯ್ ದೇವರಕೊಂಡ ಅವರೊಡನೆ 2 ಸಿನಿಮಾಗಳಲ್ಲಿ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದರು, ಅನಿಮಲ್ ಸಿನಿಮಾದ ಲಿಪ್ ಲಾಕ್ ದೃಶ್ಯಕ್ಕೆ ರಶ್ಮಿಕಾ ಅವರು ಪಡೆದಿರುವ ಹೆಚ್ಚುವರಿ ಸಂಭಾವನೆ ಎಷ್ಟು ಗೊತ್ತಾ?

ರಶ್ಮಿಕಾ ಮಂದಣ್ಣ ಅವರು ಮೂಲತಃ ಕನ್ನಡದ ಹುಡುಗಿ, ಇವರು ನಟನೆ ಶುರು ಮಾಡಿದ್ದು ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ. ಬಳಿಕ ಚಲೋ ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ರಶ್ಮಿಕಾ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ಗೀತಾ ಗೋವಿಂದಂ ಸಿನಿಮಾ. ಈ ಸಿನಿಮಾ ಇಂದ  ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಜೋಡಿ ಕೂಡ ಹೆಚ್ಚು ಹೆಸರು ಮಾಡಿತು ಎಂದರೆ ತಪ್ಪಲ್ಲ. ಇವರಿಬ್ಬರ ಬಗ್ಗೆ ಕೂಡ ಆಗಾಗ ಸುದ್ದಿಗಳು ಕೇಳಿಬರುತ್ತಲೇ ಇರುತ್ತದೆ.

ಕನ್ನಡ ಮತ್ತು ತೆಲುಗಿನಲ್ಲಿ ಹೆಚ್ಚಾಗಿ ನಟಿಸುತ್ತಿದ್ದ ರಶ್ಮಿಕಾ ಮಂದಣ್ಣ ಅವರು ನಂತರ ತಮಿಳು ಚಿತ್ರರಂಗಕ್ಕೂ ಲಗ್ಗೆ ಇಟ್ಟರು. ನಟ ಕಾರ್ತಿ ಅವರೊಡನೆ ವಿಜಯ್ ಅವರೊಡನೆ ಸಿನಿಮಾಗಳಲ್ಲಿ ನಟಿಸಿದರು. ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ ರಶ್ಮಿಕಾ ಅವರಿಗೆ ಪುಷ್ಪ ಸಿನಿಮಾ ಇನ್ನು ದೊಡ್ಡ ಮಟ್ಟದ ಕ್ರೇಜ್ ತಂದುಕೊಟ್ಟಿತು, ಈ ಸಿನಿಮಾ ಇಂದ ರಶ್ಮಿಕಾ ಅವರು ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಗುರುತಿಸಿಕೊಂಡರು. ಬಾಲಿವುಡ್ ಇಂದಲೂ ಅವಕಾಶ ಪಡೆದುಕೊಂಡರು.

ಬಿಗ್ ಬಿ ಅಮಿತಾಭ್ ಬಚ್ಚನ್ ಅವರೊಡನೆ ಗುಡ್ ಬೈ ಸಿನಿಮಾ, ಸಿದ್ಧಾರ್ಥ್ ಮಲ್ಹೋತ್ರಾ ಅವರೊಡನೆ ಮಿಷನ್ ಮಜ್ನು ಸಿನಿಮಾಗಳಲ್ಲಿ ನಟಿಸಿದರು. ನಂತರ ರಶ್ಮಿಕಾ ಅವರು ನಟ ರಣಬೀರ್ ಕಪೂರ್ ಅವರೊಡನೆ ಅನಿಮಲ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಹಾಡುಗಳು ಜನರಿಗೆ ಬಹಳ ಇಷ್ಟವಾಗಿದೆ. ಸಿನಿಮಾ ವಿಚಾರಕ್ಕೆ ಸುದ್ದಿಯಾಗುವ ರಶ್ಮಿಕಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ಸಾಕಷ್ಟು ವಿಷಯಗಳನ್ನು ಅಭಿಮಾನಿಗಳ ಜೊತೆಗೆ ಶೇರ್ ಮಾಡುತ್ತಾರೆ ರಶ್ಮಿಕಾ.

ಇದೀಗ ರಶ್ಮಿಕಾ ಮಂದಣ್ಣ ಅವರಿಗೆ ಸಂಬಂಧಿಸಿದ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ ಬೋಲ್ಡ್ ಡ್ರೆಸ್ ಹಾಕಿಕೊಂಡು ರಶ್ಮಿಕಾ ಅವರು ಲಿಫ್ಟ್ ಒಳಗೆ ಹೋಗುತ್ತಾರೆ, ಅದರಲ್ಲು ರಶ್ಮಿಕಾ ಅವರು ಬಹಳ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ, ತಕ್ಷಣಕ್ಕೆ ಈ ವಿಡಿಯೋ ನೋಡಿದರೆ ರಶ್ಮಿಕಾ ಎಂದೇ ಅನ್ನಿಸುತ್ತದೆ. ಆದರೆ ಅಸಲಿ ವಿಚಾರ ಬೇರೆಯೇ ಆಗಿದೆ. ಈ ವಿಡಿಯೋದಲ್ಲಿ ಇರುವುದು ನಿಜಕ್ಕೂ ರಶ್ಮಿಕಾ ಮಂದಣ್ಣ ಅವರಲ್ಲ ಎನ್ನಲಾಗಿದೆ.. ಇದು ನಟಿ ಝರಾ ಪಟೇಲ್ ಅವರ ವಿಡಿಯೋ ಎಂದು ಹೇಳಲಾಗುತ್ತಿದೆ.

ನಟಿ ಝರಾ ಪಟೇಲ್ ಅವರ ವಿಡಿಯೋಗೆ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಡೀಪ್ ಫೇಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಈ ವಿಚಾರವನ್ನು ಜರ್ನಲಿಸ್ಟ್ ಅವರು ಹಂಚಿಕೊಂಡಿದ್ದಾರೆ. ಇತ್ತ ರಶ್ಮಿಕಾ ಅವರ ಅಭಿಮಾನಿಗಳು ಇಂಥ ಕೆಲಸ ಮಾಡಿದವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಸೆಲೆಬ್ರಿಟಿಗಳ ವಿಚಾರ ಎಂದರೆ ಹೇಗೆಲ್ಲಾ ಸುದ್ದಿಗಳನ್ನು ಬದಲಾಯಿಸಬಹುದು ಎಂದು ಈ ವಿಷಯದಿಂದ ಗೊತ್ತಾಗುತ್ತಿದೆ.

Leave A Reply

Your email address will not be published.