Health Tips: ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳು ಬಂದರೆ ನಾವು ಬಾಳೆ ಎಲೆಯ ಮೇಲೆ ಊಟ ಮಾಡುತ್ತೇವೆ, ನಮ್ಮ ಹಿರಿಯರು ಇದೇ ರೀತಿ ಊಟ ಮಾಡುತ್ತಿದ್ದರು..ಆದರೆ ನಮಗೆ ಪ್ರತಿದಿನ ಬಾಳೆ ಎಲೆಯ ಮೇಲೆ ಊಟ ಮಾಡುವ ಅಭ್ಯಾಸವಿಲ್ಲ. ಆದರೆ ಬಾಳೆ ಎಲೆಯ ಊಟ ಮಾಡುವುದರಿಂದ ಸಾಕಷ್ಟು ಪ್ರಯೋಜನವಿದೆ ಎನ್ನುವುದು ಹಲವರಿಗೆ ಗೊತ್ತಿಲ್ಲದ ವಿಚಾರ. ಇದನ್ನು ನೀವು ತಿಳಿದುಕೊಂಡರೆ, ಬಾಳೆ ಎಲೆಯಲ್ಲಿ ಊಟ ಮಾಡುವುದಕ್ಕೆ ಶುರು ಮಾಡುತ್ತೀರಿ..
ಪೌಷ್ಟಿಕಾಂಶ ಸಿಗುತ್ತದೆ :- ನಿಮಗೆ ಗೊತ್ತಿಲ್ಲದ ಹಾಗೆ ಬಾಳೆ ಎಲೆಯ ಪಾಲಿಫಿನಾಲ್ಸ್, ವೈಟಮಿನ್ ಎ, ವೈಟಮಿನ್ ಸಿ ಈ ಎಲ್ಲಾ ಪೌಷ್ಟಿಕತೆಯ ಅಂಶಗಳು ಬಾಳೆಹಣ್ಣಿನಲ್ಲಿ ಇರುತ್ತದೆ. ನೀವು ಬಾಳೆ ಎಲೆಯ ಮೇಲೆ ಊಟ ಬಡಿಸಿಕೊಂಡಾಗ, ಆ ಪೌಷ್ಟಿಕಾಂಶ ಊಟದ ಜೊತೆಗೆ ಸೇರಿ, ನೀವು ಅದೇ ಊಟ ಸೇವಿಸಿದಾಗ ನಿಮ್ಮ ಆರೋಗ್ಯ ಕೂಡ ವೃದ್ದಿಯಾಗುತ್ತದೆ.
ರುಚಿ ಜಾಸ್ತಿಯಾಗುತ್ತದೆ :- ಬಾಳೆ ಎಲೆ ಬೆಳೆಯುವುದು ಅಪ್ಪಟ ಮಣ್ಣಿನ ಪರಿಸರದಲ್ಲಿ, ಹಾಗಾಗಿ ಬಾಳೆ ಎಲೆಯ ಮೇಲೆ ಆಹಾರ ಬಡಿಸಿಕೊಂಡು ಊಟ ಮಾಡಿದರೆ, ಆಹಾರದ ರುಚಿ ಜಾಸ್ತಿಯಾಗುತ್ತದೆ. ಮಣ್ಣಿನ ಸುವಾಸನೆಯು ಆಹಾರದ ಜೊತೆಗೆ ಬೆರೆಯುತ್ತದೆ.
ನೋಡಲು ಸುಂದರವಾಗಿರುತ್ತದೆ :- ಬಾಳೆ ಎಲೆಯ ಊಟವನ್ನು ಜನರು ಹೆಚ್ಚು ಇಷ್ಟಪಡುವುದಕ್ಕೆ ಮತ್ತೊಂದು ಪ್ರಮುಖ ಕಾರಣ ನೋಡಲು ಸುಂದರವಾಗಿ ಕಾಣುತ್ತದೆ ಎನ್ನುವುದಾಗಿದೆ, ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು, ಹಾಗಾಗಿ ಜನರು ಬಾಳೆ ಎಲೆ ಊಟ ಮಾಡುವುದು ಒಳ್ಳೆಯದು.
ವಿಷಕಾರಿ ಅಲ್ಲ :- ಪ್ಲಾಸ್ಟಿಕ್ ಅಥವಾ ಬೇರೆ ಪದಾರ್ಥದ ಪ್ಲೇಟ್ ಗಳ ಹಾಗೆ ಇದು ವಿಷಕಾರಿ ಅಲ್ಲ, ದೇಹಕ್ಕೆ ತೊಂದರೆ ಕೊಡುವ ಕೆಮಿಕಲ್ ಅಂಶಗಳು ಬಾಳೆ ಎಲೆಯಲ್ಲಿ ಇರುವುದಿಲ್ಲ. ಹಾಗಾಗಿ ನೀವು ಬಾಳೆ ಎಲೆಯ ಮೇಲೆ ಊಟ ಮಾಡುವುದು ಒಳ್ಳೆಯದು.
ಜೀರ್ಣಕ್ರಿಯೆ ಸುಧಾರಿಸುತ್ತದೆ :- ಬಾಳೆ ಎಲೆಯಲ್ಲಿ ಸಾಕಷ್ಟು ಪೌಷ್ಟಿಕಾಂಶವಿದೆ. ಪಾಲಿಫಿನಾಲ್ ಹಾಗೂ ಇನ್ನಿತರ ಅಂಶಗಳು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಹಾಗಾಗಿ ಬಾಳೆ ಎಲೆಯ ಊಟ ಮಾಡುವುದರಿಂದ ನಿಮ್ಮ ಜೀರ್ಣ ಕ್ರಿಯೆ ಸುಧಾರಿಸುತ್ತದೆ.
ಆಂಟಿ ಮೈಕ್ರೊಬಿಯಲ್ :- ಬಾಳೆ ಎಲೆಯಲ್ಲಿ ನೈಸರ್ಗಿಕವಾಗಿ ಸೋಂಕುಗಳ ನಿವಾರಣೆ ಮಾಡುವ ಅಂಶವಿದೆ. ಒಂದು ವೇಕೆ ಊಟದಲ್ಲಿ ದೇಹಕ್ಕೆ ಹಾನಿ ಮಾಡುವಂಥ ಬ್ಯಾಕ್ಟೀರಿಯಾಗಳು ಇದ್ದರೆ, ಅವುಗಳು ನಾಶವಾಗುತ್ತದೆ.
ಪರಿಸರಕ್ಕೆ ಒಳ್ಳೆಯದು :- ಪ್ಲಾಸ್ಟಿಕ್ ಅಂಥಹ ಪರಿಸರಕ್ಕೆ ಹಾನಿ ಉಂಟು ಮಾಡುವ ಪದಾರ್ಥಗಳನ್ನು ಬಳಸುವುದಕ್ಕಿಂತ ಬಾಳೆ ಎಲೆ ಬಳಸಿ ಊಟ ಮಾಡಿದರೆ, ಪರಿಸರಕ್ಕೂ ಒಳ್ಳೆಯದು. ಆರೋಗ್ಯಕ್ಕೂ ಒಳ್ಳೆಯದು.