Gruhalakshmi Yojane: ಗೃಹಲಕ್ಷ್ಮಿ ಯೋಜನೆಯ ಹಣ ಕ್ರೆಡಿಟ್ ಅಗೋಕೆ ಡೆಡ್ ಲೈನ್ ಫಿಕ್ಸ್, ಮಹಿಳೆಯರ ಚಿಂತೆಗೆ ಸ್ಟಾಪ್

0 35

Gruhalakshmi Yojane: ರಾಜ್ಯದ ಮಹಿಳೆಯರಿಗೆ ಸಹಾಯ ಆಗಲಿ ಎಂದು ಈಗ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಹಲವು ಜನರಿಗೆ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವೆ ಇನ್ನು ಸಿಕ್ಕಿಲ್ಲ. ಅಂಥ ಮಹಿಳೆಯರಿಗೆ ಇದೀಗ ಸರ್ಕಾರದಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ, ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಗೆ ಬರುವುದಕ್ಕೆ ಸರ್ಕಾರ ಈಗ ಒಂದು ದಿನಾಂಕವನ್ನು ನಿಗದಿ ಮಾಡಿದೆ.

ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದು, 2 ತಿಂಗಳಿಗಿಂತ ಹೆಚ್ಚಿನ ಸಮಯವಾಗಿದೆ. 1.2ಕೋಟಿ ಮಹಿಳೆಯರು ಯೋಜನೆಗೆ ಅರ್ಜಿ ಕೂಡ ಹಾಕಿದ್ದಾರೆ. ಆದರೆ ಎಲ್ಲರಿಗೂ ಕೂಡ ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ. ಹಣ ಬಂದಿಲ್ಲದೆ ಇರುವುದಕ್ಕೆ ಹಲವು ಕಾರಣಗಳನ್ನು ಸರ್ಕಾರ ನೀಡಿದೆ. ಒಂದು ವೇಳೆ ಮಹಿಳೆಯರ ಬ್ಯಾಂಕ್ ಅಕೌಂಟ್ ಆಕ್ಟಿವ್ ಆಗಿಲ್ಲ ಎಂದರೆ, ಆಧಾರ್ ಕಾರ್ಡ್ ಗೆ ಲಿಂಕ್ ಆಗಿಲ್ಲ ಎಂದರು ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ.

ಈ ಕಾರಣಕ್ಕೆ ಹಲವು ಮಹಿಳೆಯರಿಗೆ ಹಣ ಬಂದಿಲ್ಲ. ಆದರೆ ಇನ್ನಷ್ಟು ಮಹಿಳೆಯರು ಹೇಳುವ ಹಾಗೆ, ಎಲ್ಲಾ ಡಾಕ್ಯುಮೆಂಟ್ ಗಳನ್ನು ಸರಿಯಾಗಿ ನೀಡಿದ್ದು, ಎಲ್ಲವೂ ಸರಿಯಾಗೆ ಇದ್ದರು ಕೂಡ ಇನ್ನು ಲಕ್ಷಾಂತರ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ. ಆರ್.ಬಿ.ಐ ಈಗ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಿಡುಗಡೆ ಮಾಡುವ ಕೆಲಸ ಮಾಡುತ್ತಿದ್ದು, ಸರ್ಕಾರ ಈಗಾಗಲೇ ಆರ್.ಬಿ.ಐ ಗೆ ಹಣ ಒದಗಿಸಿದೆ ಎಂದು ಹೇಳಿದೆ. ಡಿಬಿಟಿ ಮೂಲಕ ಎಲ್ಲಾ ಮಹಿಳೆಯರಿಗೆ ಹಣವನ್ನು ವರ್ಗಾವಣೆ ಮಾಡಬೇಕಿದೆ.

ಆದರೆ ತಾಂತ್ರಿಕ ಕಾರಣ ಅಥವಾ ಇನ್ನಿತರ ಹಲವು ಸಮಸ್ಯೆಗಳಿಂದ ಇನ್ನು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿಲ್ಲ, ಈ ಸಮಸ್ಯೆಗೆ ಈಗ ಸರ್ಕಾರ ಒಂದು ಪರಿಹಾರ ನೀಡಿದೆ. ಗೃಹಲಕ್ಷ್ಮೀ ಯೋಜನೆಯ ಹಣವನ್ನು ಮಹಿಳೆಯರಿಗೆ ಈ ದಿನಾಂಕದ ಒಳಗೆ ತಲುಪಿಸಬೇಕು ಎಂದು ಸರ್ಕಾರ ಒಂದು ದಿನಾಂಕವನ್ನು ನಿಗದಿ ಮಾಡಿದೆ..ಅದರ ಅನುಸಾರ ಇನ್ನುಮುಂದೆ ಎಲ್ಲಾ ಮಹಿಳೆಯರಿಗೆ ತೊಂದರೆ ಇಲ್ಲದೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗಲಿದೆ.

ಮುಂದಿನ ತಿಂಗಳಿನಿಂದ ಎಲ್ಲಾ ಮಹಿಳೆಯರ ಖಾತೆಗೆ ಪ್ರತಿ ತಿಂಗಳ 15 ನೇ ತಾರೀಕಿನಿಂದ 20ನೇ ತಾರೀಕಿನ ಒಳಗೆ ಗೃಹಲಕ್ಷ್ಮಿ ಯೋಜನೆಯ ಹಣ ಸೇರಲಿದೆ. 10 ದಿನಗಳ ಕಾಲ ಮಹಿಳೆಯರಿಗೆ ಹಣವನ್ನು ಅಲಾಟ್ ಮಾಡುವ ಕೆಲಸ ನಡೆಯಲಿದೆ. ಸರ್ಕಾರ ಈ ಮುಖ್ಯವಾದ ನಿರ್ಧಾರವನ್ನು ತೆಗೆದುಕೊಂಡಿದ್ದು, ಇನ್ನುಮುಂದೆ ಹೆಣ್ಣುಮಕ್ಕಳು ಚಿಂತೆ ಮಾಡುವ ಅವಶ್ಯಕತೆ ಇಲ್ಲ.

Leave A Reply

Your email address will not be published.