KGF: ಕೆಜಿಎಫ್ ಸ್ಟಾರ್ ಮೇಲಿನ ಅಭಿಮಾನದಿಂದ 73 ಕೋಟಿ ಆಸ್ತಿಯನ್ನು ಆತನಿಗೆ ಬರೆದು ಪ್ರಾಣಬಿಟ್ಟ ಅಭಿಮಾನಿ!

0 31

KGF: ಚಿತ್ರರಂಗದಲ್ಲಿ ಪ್ರತಿ ಕಲಾವಿದನಿಗೂ ಅಭಿಮಾನಿಗಳು ಇರುತ್ತಾರೆ, ಕೆಲವೊಮ್ಮೆ ತಮ್ಮ ಮೆಚ್ಚಿನ ಕಲಾವಿದರಿಗಾಗಿ ಅನೇಕ ಕೆಲಸಗಳನ್ನು ಮಾಡುತ್ತಾರೆ, ಮೆಚ್ಚಿನ ಕಲಾವಿದರಿಗೆ ದೇವಸ್ಥಾನ ಕಟ್ಟಿಸಿರುವ ಉದಾಹರಣೆಗಳು ಕೂಡ ಇದೆ. ಆದರೆ ಮಹಿಳೆ ಒಬ್ಬರು ತಮ್ಮ ಮೆಚ್ಚಿನ ಕಲಾವಿದನಿಗೆ ತಮ್ಮ 73 ಕೋಟಿ ರೂಪಾಯಿ ಆಸ್ತಿಯನ್ನೇ ಬರೆದುಕೊಟ್ಟು, ಪ್ರಾಣ ಬಿಟ್ಟಿದ್ದಾರೆ. ಈ ಘಟನೆ ಮುಂಬೈನಲ್ಲಿ ನಡೆದಿದೆ.

ಕೆಜಿಎಫ್ ಸಿನಿಮಾ ಎಷ್ಟು ದೊಡ್ಡ ಹಿಟ್ ಆಗಿದೆ, ಈ ಸಿನಿಮಾದಲ್ಲಿ ನಟಿಸಿರುವ ಎಲ್ಲಾ ಕಲಾವಿದರಿಗೆ ಎಷ್ಟು ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದೆ ಎಂದು ನಮಗೆಲ್ಲ ಗೊತ್ತೇ ಇದೆ. ಈ ಸಿನಿಮಾದಲ್ಲಿ ನಟಿಸಿರುವ ಕಲಾವಿದರೊಬ್ಬರ ಫ್ಯಾನ್ ಆಗಿರುವ ಮಹಿಳೆ ಈ ರೀತಿ ಮಾಡಿದ್ದಾರೆ. ಆ ನಟ ಮತ್ಯಾರು ಅಲ್ಲ, ಕೆಜಿಎಫ್ ನಲ್ಲಿ ಅಧೀರನಾಗಿ ನಟಿಸಿ ಅಬ್ಬರಿಸಿದ್ದ ಸಂಜಯ್ ದತ್ ಅವರು. ಹೌದು, ಸಂಜಯ್ ದತ್ ಅವರ ಅಭಿಮಾನಿ ಹೀಗೆ ಮಾಡಿದ್ದಾರೆ.

ಆಕೆಯ ಹೆಸರು ನಿಷಾ ಪಟೇಲ್. ಇವರು ಮುಂಬೈನ ಮಲಬಾರ್ ನಲ್ಲಿ ವಾಸವಿದ್ದರು. ತಮ್ಮನ ಜೊತೆಗೆ ಇವರು ಇದ್ದ ಮನೆಯ ಬೆಲೆ ಸುಮಾರು 10 ಕೋಟಿ ಆಗಿದೆ. ಈ ಮನೆ ಹಾಗೂ ತಮ್ಮ ಪೂರ್ತಿ ಆಸ್ತಿಯನ್ನು ಮೆಚ್ಚಿನ ನಟ ಸಂಜಯ್ ದತ್ ಅವರ ಹೆಸರಿಗೆ ಬರೆದು ಪ್ರಾಣ ಬಿಟ್ಟಿದ್ದಾರೆ ನಿಷಾ ಪಟೇಲ್. ಈ ಘಟನೆ ನಡೆದಿದ್ದು 2018ರಲ್ಲಿ. ಅಭಿಮಾನಿಯ ಪ್ರೀತಿಗೆ ಭಾವುಕರಾದ ಸಂಜಯ್ ದತ್ ಅವರು ಆಕೆಯ ಕುಟುಂಬಕ್ಕೆ ಆಸ್ತಿಯನ್ನು ಹಿಂದಿರುಗಿಸಿದ್ದಾರೆ.

ಆಸ್ತಿ ಮಾತ್ರವಲ್ಲದೆ, ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿರುವ ಬೆಲೆ ಬಾಳುವ ವಸ್ತುಗಳನ್ನು ಕೂಡ ಆಕೆ ಸಂಜಯ್ ದತ್ ಅವರ ಹೆಸರಿನಲ್ಲಿ ಬರೆದು ಇಟ್ಟಿದ್ದರು. ಅದನ್ನು ಕೂಡ ಸಂಜಯ್ ದತ್ ಅವರು ಆಕೆಯ ಕುಟುಂಬಕ್ಕೆ ವಾಪಸ್ ಕೊಟ್ಟಿದ್ದಾರೆ. ಅಭಿಮಾನಿಗಳು ಈ ರೀತಿಯು ಪ್ರೀತಿ ವ್ಯಕ್ತಪಡಿಸುತ್ತಾರೆ ಎನ್ನುವುದು ಒಂದು ದಾರಿ

Leave A Reply

Your email address will not be published.